ಶಿವಶರಣೆ ನೀಲಾಂಬಿಕೆ ಅವರ ಜೀವನ ಚರಿತ್ರೆ| Nilaambike biography in Kannada

ಶಿವಶರಣೆ ನೀಲಾಂಬಿಕೆ ಅವರ ಜೀವನ ಚರಿತ್ರೆ, ತಂದೆ,ತಾಯಿ, ಮಗನ ಹೆಸರು, ಅಂಕಿತನಾಮ (Nilaambike biography, parents name,son name, pen name or ankitanaama in Kannada)

ನೀಲಾಂಬಿಕೆ

Nilaambike biography: ನೀಲಾಂಬಿಕೆ ಅವರು ಒಬ್ಬ ಶರಣೆ,ವಚನಕಾರ್ತಿ ಮತ್ತು ಬಸವಣ್ಣನವರ ಎರಡನೇ ಪತ್ನಿ. ಇವರ ವಚನಗಳಲ್ಲಿ ಬದುಕಿನ ಅಗಲಿಕೆ, ದಾನ ,ಧರ್ಮ, ಪತಿಯ ಮೇಲಿನ ಪ್ರೇಮ ,ನೋವು, ಲಿಂಗನಿಷ್ಟೆಯ ಚಿತ್ರಣವನ್ನು ಕಾಣಬಹುದು. ನೀಲಾಂಬಿಕೆ ಅವರ ಅಂಕಿತನಾಮ ” ಸಂಗಯ್ಯ”.

12ನೆ ಶತಮಾನದಲ್ಲಿ ಅನೇಕ ಶರಣು ಶರಣಿಯರು ನಮ್ಮ ನಾಡಿಗೆ ಅದೆಷ್ಟೊ ಕೊಡುಗೆಯನ್ನು ಕೊಟ್ಟಿದ್ದಾರೆ. ಅದರಲ್ಲಿ ನೀಲಾಂಬಿಕೆ ಅವರ ಕೊಡುಗೆ ಮರೆಯುವ ಹಾಗಿಲ್ಲ.

ನೀಲಾಂಬಿಕೆ ಬಸವಣ್ಣನವರಿಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡುತ್ತಿದ್ದರು. ಮನೆಗೆ ಬಂದ ಶರಣು ಶರಣಿಯರಿಗೆ ದಾಸೋಹ ತಯಾರಿಸಿ ಅವರಿಗೆ ಪ್ರಸಾದವನ್ನು ನೀಡುತ್ತಿದರು. ಇವರು ಸೇವೆಯಲ್ಲಿ ಬಸವಣ್ಣನವರಿಗಿಂತ ಒಂದು ಕೈ ಮುಂದು ಅಂತ ಹೇಳಿದರೆ ತಪ್ಪಾಗಲಾರದು.

ಶಿವಶರಣೆ ನೀಲಾಂಬಿಕೆ ಅವರ ಜೀವನ ಚರಿತ್ರೆ (Nilaambike biography in Kannada)

ಪೂರ್ಣ ಹೆಸರು(Full name)ನೀಲಾಂಬಿಕೆ
ಬೇರೆ ಹೆಸರುಗಳೂ (Other Names)ನೀಲಾಂಬಿಕೆ, ನೀಲಲೋಚನೆ, ನೀಲಗಂಗಾ , ನೀಲಮ್ಮ
ಹುಟ್ಟಿದ ದಿನಾಂಕ(Birth Date)12ನೆ ಶತಮಾನ
ಹುಟ್ಟಿದ ಸ್ಥಳ(Birth Place) ಮಂಗಳವಾಡ
ಜಾತಿ(caste) ಷತ್ರಿಯ
ಧರ್ಮ (Religion)ಹಿಂದು
ಅಂಕಿತನಾಮ(Pen Name)ಸಂಗಯ್ಯ
ಲಿಂಗೈಕ್ಯ ಸ್ಥಳ(Death place)ಮುಗಟ ಖಾನಾ, ಹುಬ್ಬಳ್ಳಿ

ಶಿವಶರಣೆ ನೀಲಾಂಬಿಕೆ ಅವರ ಕುಟುಂಬ ಪರಿಚಯ (Information of Nilaambike family in Kannada)

ನೀಲಾಂಬಿಕೆ ಅವರು ಕಲ್ಯಾಣ ಕಲಚೂರಿ ರಾಜ ಬಿಜ್ಜಳನ ಸಾಕು ತಂಗಿ. ಇವರು ಚಿಕ್ಕ ವಯಸ್ಸಿನಿಂದಲೆ ಸಂಗೀತ, ಸಾಹಿತ್ಯ’ ಬಿಲ್ಲುಗಾರಿಕೆಯನ್ನು ಕರಗತ ಮಾಡಿಕೊಂಡಿದರು.

ನೀಲಾಂಬಿಕೆ ಅವರಿಗೆ ‘ಬಾಲಸಂಗಯ್ಯ’ನೆಂಬ ಮಗನಿದ್ದು ಅವನಿಗೆ ಅಕಾಲಿಕವಾಗಿ ಅವನು ಲಿಂಗೈಕ್ ಕರಾವನು. ನೀಲಾಂಬಿಕೆ ಅವರು ತನ್ನ ಮಗನನ್ನು ತುಂಬಾ ಪ್ರೀತಿಸುತ್ತಿದ್ದರು. ಅದಕ್ಕಾಗಿಯೇ ಅವರ ವಚನದ ಅಂಕಿತ ನಾಮ ಸಂಗಯ್ಯ ಎಂದು ಇಟ್ಟುಕೊಂಡಿದ್ದಾರೆ.

ತಂದೆ ಹೆಸರು(Father Name)ಸಿದ್ಧರಸ
ತಾಯಿ ಹೆಸರು(Mother Name)
ಸಹೋದರ/ಅಣ್ಣ (Brother Name
ಪದ್ಮಗಂಧಿ
ಬಿಜ್ಜಳ (ಮಹಾರಾಜ)
ಗಂಡನ ಹೆಸರು(Husband Name)ಬಸವಣ್ಣ
ಮಕ್ಕಳ ಹೆಸರು (Children Name)ಬಾಲಸಂಗಯ್ಯ

ನೀಲಾಂಬಿಕೆನವರ ಕೆಲವು ವಚನಗಳು|Some Vachanasa of Nilaambike in Kannada

ಎನಗೆ ಲಿಂಗವು ನೀವೆ ಬಸವಯ್ಯಾ,
ಎನಗೆ ಸಂಗವು ನೀವೆ ಬಸವಯ್ಯಾ,
ಎನಗೆ ಪ್ರಾಣವು ನೀವೆ ಬಸವಯ್ಯಾ,
ಎನಗೆ ಪ್ರಸಾದವು ನೀವೆ ಬಸವಯ್ಯಾ,
ಎನಗೆ ಪ್ರಭೆಯಮೂರ್ತಿಯು ನೀವೆ ಬಸವಯ್ಯಾ.
ಎನಗೆ ಸಂಗಯ್ಯನು ನೀವೆ ಬಸವಯ್ಯಾ.

ಅಲ್ಲಮನ ಸಂಗ, ಅಜಗಣ್ಣನ ಸಂಗ,
ಕಕ್ಕಯ್ಯನ ಸಂಗ, ಚಿಕ್ಕಯ್ಯನ ಸಂಗ,
ಎಲ್ಲರ ಸಂಗ, ಯತಿಗಳ ಸಂಗ, ಜತಿಗಳ ಸಂಗ,
ಮಾನ್ಯರ ಸಂಗ, ಮುಖ್ಯರ ಸಂಗ.
ಸಂಗಯ್ಯಾ, ಎನ್ನ ಸಂಗ, ಎನ್ನ ಬಸವಯ್ಯನ ಸಂಗ.

ನೀಲಾಂಬಿಕೆನವರ ಬಗ್ಗೆ ಪ್ರಶ್ನೋತ್ತರಗಳು| FAQ about Nilaambike biography in Kannada

1. ನೀಲಾಂಬಿಕೆನವರ ಹುಟ್ಟಿದ ದಿನಾಂಕ?(When was Nilaambike born?)

ನೀಲಾಂಬಿಕೆನವರ ಹುಟ್ಟಿದ ದಿನಾಂಕ 12ನೆ ಶತಮಾನ ಎಂದು ಹೇಳಲಾಗುತ್ತದೆ.

2. ನೀಲಾಂಬಿಕೆ ಅವರ ತಂದೆ ತಾಯಿ ಹೆಸರು? (Nilaambike Parents name)

ನೀಲಾಂಬಿಕೆ ಅವರ ತಂದೆ ಹೆಸರು ಸಿದ್ಧರಸ ತಾಯಿ ಹೆಸರು ಪದ್ಮಗಂಧಿ.

3. ನೀಲಾಂಬಿಕೆನವರ ಅಂಕಿತ ನಾಮ ಯಾವುದು? (What is the pen name or ankitanama of Nilaambike?)

ನೀಲಾಂಬಿಕೆನವರ ಅಂಕಿತನಾಮ ಸಂಗಯ್ಯ.

4. ನೀಲಾಂಬಿಕೆನವರು ಲಿಂಗೈಕ್ಯವಾದ ಸ್ಥಳ ಅಥವಾ ಊರು? (What is Nilaambike Death place?)

ನೀಲಾಂಬಿಕೆನವರು ಲಿಂಗೈಕ್ಯವಾದ ಸ್ಥಳ ಮುಗಟ ಖಾನಾ, ಹುಬ್ಬಳ್ಳಿ.

5. ನೀಲಾಂಬಿಕೆನವರು ಮಗನ ಹೆಸರು? (What is Nilaambike Children name?)

ನೀಲಾಂಬಿಕೆನವರು ಮಗನ ಹೆಸರು ಬಾಲಸಂಗಯ್ಯ.

Admin: