ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ಹೇಗೆ ಡೌನ್ಲೋಡ್ ಮಾಡಿಕೊಳ್ಳಬೇಕು|How to Get Download COVID Vaccine certificate in Kannada

ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ಹೇಗೆ ಡೌನ್ಲೋಡ್ ಮಾಡಬೇಕು, ಯಾರಿಗೆ ಸಿಗುತ್ತೆ, ಯಾವಾಗ ಸಿಗುತ್ತೆ (How to download get corona Covid vaccine certificate online in kannada) (In India, Hege download madabeku, with & withour Beneficiary ID, with Digilocker, with mobile Number, From Cowin, Arogya setu app. PDF, by Aadhar Card and Number)

How to Get Download COVID Vaccine certificate in Kannada
ಕೋವಿದ ವ್ಯಾಕ್ಸಿನ್ ಸರ್ಟಿಫಿಕೇಟ್

ಭಾರತ ಸರ್ಕಾರವು ಕೋವಿಡ್ ವ್ಯಾಕ್ಸಿನ್ ಲಸಿಕೆ ಹಾಕುವ ಪ್ರಕ್ರಿಯೆಯನ್ನು ಹೆಚ್ಚಿಗೆ ಮಾಡಿದೆ. ಈಗ 18 ರಿಂದ 45 ವರ್ಷ ಒಳಗಿನ ಎಲ್ಲರಿಗೂ ಲಸಿಕೆ ಹಾಕಬೇಕೆಂದು ನಿರ್ಧರಿಸಲಾಗಿದೆ. ಅದಕ್ಕಾಗಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ವ್ಯಾಕ್ಸಿನ್ ಕೊಡುವ ಪ್ರಕ್ರಿಯೆ ಆರಂಭ ಆಗಿದೆ.

ಕೋವಿಡ್ ಲಸಿಕೆ ಕಾರ್ಯ-ಚಟುವಟಿಕೆಯ ಮುಖ್ಯ ಉದ್ಧೇಶ ಭಾರತವನ್ನು ಈ ಕೋವಿಡ್ ಮಹಾಮಾರಿಯಿಂದ ಬಿಡುಗಡೆ ಮಾಡುವುದು ಮತ್ತು ಈ ದೇಶವನ್ನು ಕಾರೋನ ಮುಕ್ತ ಭಾರತವನ್ನಾಗಿ ಮಾಡುವುದಾಗಿದೆ.

ಏನಿದು ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ಅಥವಾ ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ಆದರೇನು?

Table of Contents

ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ಇದು ಒಂದು ಪ್ರಮಾಣ ಪಾತ್ರವಾಗಿದೆ. ಇದರಿಂದ ನೀವು ಕೋವಿಡ್ ಲಸಿಕೆ ಹಾಕಿಸಿಕೊಂಡಿದಿರೋ ಅಥವಾ ಇಲ್ಲವೋ ಎಂಬುದು ಗೊತ್ತಾಗುತ್ತದೆ. ಈ ಸರ್ಟಿಫಿಕೇಟ್ ಅವಶ್ಯಕತೆ ನಿಮಗೆ ಮುಂದೆ ಎಂದಾದರು ಬರುತ್ತದೆ.
ನೀವು ಬೇರೆ ದೇಶಕ್ಕೆ ಅಥವಾ ನಮ್ಮ ದೇಶದ ಬೇರೆ ರಾಜ್ಯಕ್ಕೆ ಹೋಗಬೇಕಾದರೆ ನಿಮಗೆ ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟನ ಅವಶ್ಯಕತೆ ಬಿದ್ದೆ ಬೀಳುತ್ತೆ.

ಕೋವಿಡ್ ವ್ಯಾಕ್ಸಿನ್ ಪ್ರಮಾಣಪತ್ರ ಏಕೆ ಅಗತ್ಯ?

ನಿಮ್ಮಲ್ಲಿ ಒಂದು ಪ್ರಶ್ನೆ ಮೂಡಿರಬಹುದು,ನಾವು ಕೋವಿಡ್ ಲಸಿಕೆ ಹಾಕಿಸಿಕೊಂಡ ಮೇಲೆ ಈ ಸರ್ಟಿಫಿಕೇಟನ ಅವಶ್ಯಕತೆ ಯಾಕೆ?.

ನೀವು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದು ನಿಮಗೆ, ನಿಮ್ಮ ಸುತ್ತ ಮುತ್ತಲಿನವರಿಗೆ ಮಾತ್ರ ಗೊತ್ತಾಗುತ್ತದೆ ಆದರೆ ಸರ್ಕಾರಕ್ಕೆ ಹೇಗೆ ಗೊತ್ತಾಗಬೇಕು.
ಅದಕ್ಕಾಗಿ ಸರ್ಕಾರ ಯಾರು ಕೋವಿಡ್ ವ್ಯಾಕ್ಸಿನ್ ಹಾಕಿಸಿಕಂಡಿದ್ದಾರೆಯೋ, ಅವರಿಗೆ ಒಂದು ಪ್ರಮಾಣಪತ್ರವನ್ನು ನೀಡುತ್ತದೆ. ಇದರಿಂದ ಯಾರರು ಲಸಿಕೆ ಹಾಕಿಸಿ ಕೊಂಡಿದ್ದಾರೆ ಎಂಬ ಡೇಟಾ ಸರ್ಕಾರ ಹತ್ರ ಇರುತ್ತದೆ.

ಕೋವಿಡ್ ವ್ಯಾಕ್ಸಿನ್ ಪಡೆಯಲು ಏಕೆ?


ಕೋವಿಡ್ ವ್ಯಾಕ್ಸಿನ್ ಪಡೆಯಲು ಏಕೆಂದರೆ ಇದರಿಂದ ನೀವು ನಿಮ್ಮನ್ನು ನಿಮ್ಮ ಪರಿವಾರವನ್ನು ಈ ಕಾರೋನ ಮಹಾಮರಿಯಿಂದ ಕಾಪಾಡಬಹುದು.

ಕೋವಿಡ್ ಲಸಿಕೆಯ ಪ್ರಮಾಣಪತ್ರ ಯಾವಾಗ ಸಿಗುತ್ತೆ?

ಕೋವಿಡ್ ಲಸಿಕೆಯ ಪ್ರಮಾಣಪತ್ರವು ನಿಮಗೆ 20 ನಿಮಿಷದಲ್ಲಿ ಸಿಗುತ್ತದೆ ಯಾಕೆಂದ್ರೆ ನಿಮ್ಮ ಡೇಟಾ ಅಪ್ಲೋಡ್ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುವುದರಿಂದ ಕೆಲವು ನಿಮಿಷ ತೆಗೆದುಕೊಳ್ಳುತ್ತದೆ. ಇದಾದ ನಂತರ ನೀವು ಇದನ್ನು ಯಾವಾಗಲೂ ಡೌನ್ಲೋಡ್ ಮಾಡಿಕೊಳ್ಳಬಹುದು.

ಕೋವಿಡ್ ಲಸಿಕೆಯ ಪ್ರಮಾಣಪತ್ರವನ್ನು ಹೇಗೆ ಡೌನ್ಲೋಡ್ ಮಾಡಕೊಳ್ಳಬಹುದು?


ನೀವೂ ಇದನ್ನು ಕೋವಿನ್ ಅಥವಾ ಅರೋಗ್ಯ ಸೆತು ಆ್ಯಪ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.ಕೋವಿಡ್ ಲಸಿಕೆ ಹಾಕಿಸಿಕೊಂಡ ಮೇಲೆ ನಿಮಗೆ ಒಂದು ಸಂದೇಶ (Message) ಬರುತ್ತೆ, ಆ ಸಂದೇಶದ ಲಿಂಕ್ ಮೇಲೆ ಕ್ಲಿಕ್ ಮಾಡಿದ ಮೇಲೆ ನೀವು ಆ ಅಪ್ಲಿಕೇಶನ್‌ನ ಐಡಿಯ ಮೇಲೆ ಬರುತ್ತೀರಾ ಅಲ್ಲಿಂದ ನೀವು ಕೋವಿಡ್ ಲಸಿಕೆಯ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಕೊಳ್ಳಬಹುದು.
ಅದನ್ನು ನೀವು PDF ಫೈಲ್ ಮೂಲಕ ಡೌನ್ಲೋಡ್ ಮಾಡಿಕೊಂಡು ಮೊಬೈಲನಲ್ಲಿ ಅಥವಾ ಒಂದು ಕಾಪಿ (copy) ಮಾಡಿಕೊಂಡು ನಿಮ್ಮ ಹತ್ರ ಇಟ್ಟಿಕೊಳ್ಳಿ. ಇದನ್ನು ಡೌನ್‌ಲೋಡ್ ಮಾಡಲು ಕೆಲವು ಇತರ ವಿಧಾನಗಳು ಈ ಕೆಳಗಿನಂತಿವೆ ನೋಡಿ.

ಅರೋಗ್ಯ ಸೇತು ಆ್ಯಪ್ ನಿಂದ ಕೋವಿಡ್ ಲಸಿಕೆಯ ಪ್ರಮಾಣಪತ್ರವನ್ನು ಹೇಗೆ ಡೌನ್ಲೋಡ್ ಮಾಡಕೊಳ್ಳಬಹುದು?( Download Covid vaccination certificate from Aarogya Setu app in Kannada?)

ಅರೋಗ್ಯ ಸೇತು ಆ್ಯಪ್ ಮೂಲಕ ಹೇಗೆ ಡೌನ್ಲೋಡ್ ಮಾಡಬಹುದು ಎಂಬುದರ ಬಗ್ಗೆ ತಿಳಿಯೋಣ.

ಅರೋಗ್ಯ ಸೇತು ಆ್ಯಪ್ ನಿಮ್ಮ ಹತ್ರ ಇಲ್ಲದಿದ್ದರೆ ನೀವು ಗೂಗಲ್ ಮೂಲಕ ಇದನ್ನು ಮೊದಲು ಡೌನ್ಲೋಡ್ ಮಾಡಿಕೊಳ್ಳಿ, ಆಮೇಲೆ ನೀವು ಕೋವಿಡ ರಿಜಿಸ್ಟರ್ ಮೊಬೈಲ್ ನಂಬರರಿಂದ ಲಾಗಿನ್ ಆಗಿ.

ಆಮೇಲೆ ನೀವು ಕೆಳಗೆ ತೋರಿಸಿದ ಹಾಗೆ ಕೋವೀನ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

Download Covid vaccination certificate from Aarogya Setu app in Kannada?)
ಅರೋಗ್ಯ ಸೇತು ಆ್ಯಪ್

ಆಮೇಲೆ ನೀವು 13 ಅಂಕಿಯ ಬೆನೆಫಿಸಿಆರ್ಯ್ ಐಡಿ (Beneficiary ID) ಹಾಕಿ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಕೋವಿಡ್ ಲಸಿಕೆಯ ಪ್ರಮಾಣಪತ್ರವನ್ನು ಡೌನ್ಲೋಡ್ ಆಗಲು ಪ್ರಾರಂಭವಾಗುತ್ತೆ.

Download Covid vaccination certificate from Aarogya Setu app in Kannada?)
ಅರೋಗ್ಯ ಸೇತು ಆ್ಯಪ್

ಕೊವಿನ್ ವೆಬ್ಸೈಟ್ ಮೂಲಕ ಕೋವಿಡ್ ಲಸಿಕೆಯ ಪ್ರಮಾಣಪತ್ರವನ್ನು ಹೇಗೆ ಡೌನ್ಲೋಡ್ ಮಾಡಕೊಳ್ಳಬಹುದು?( Download corona vaccination certificate from Cowin website in Kannada?)

ಕೊವಿನ್ ವೆಬ್ಸೈಟ್ ನಿಂದಾ ಬಹಳಷ್ಟು ಕೆಲಸ ಮಾಡಬಹುದು ಆದರೆ ನಾವು ಈಗ, ಕೊವಿನ್ ವೆಬ್ಸೈಟ್ ಮೂಲಕ ಕೋವಿಡ್ ಲಸಿಕೆಯ ಪ್ರಮಾಣಪತ್ರವನ್ನು ಹೇಗೆ ಡೌನ್ಲೋಡ್ ಮಾಡಬಹುದು ಎಂಬುದರ ಬಗ್ಗೆ ತಿಳಿಯೋಣ.

Download corona vaccine certificate from Cowin website in Kannada
ಕೋವಿನ ಆ್ಯಪ್
 • ಮೊದಲು ನೀವು ಕೊವಿನ್ ವೆಬ್ಸೈಟಗೆ ಬೇಟಿ ನೀಡಬೇಕು. ( Cowin.gov.in)
 • ಆಮೇಲೆ ನೀವು ನಿಮ್ಮ ಆಮೇಲೆ ನೀವು ಕೋವಿಡ ರಿಜಿಸ್ಟರ್ ಮೊಬೈಲ್ ನಂಬರ ಅನ್ನು ಹಾಕಿ.
 • ಆಮೇಲೆ ನಿಮಗೆ ಒಂದು ಸಂದೇಶ ಬರುತ್ತೆ, ಆ ಸಂದೇಶದಲ್ಲಿರುವ OTP ಅದರಲ್ಲಿ ಎಂಟರ್ ಮಾಡಿ, ಲಾಗಿನ್ ಆಗಿ.
 • ಆಮೇಲೆ ಅಲ್ಲಿ ನಿಮ್ಮ ಹೆಸರಿನ ವ್ಯಾಕ್ಸಿನ್ ಸರ್ಟಿಫಿಕೇಟ್ ಎಂದು ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿದ ಮೇಲೆ ನಿಮ್ಮ ಸರ್ಟಿಫಿಕೇಟ್ ಡೌನ್ಲೋಡ್ ಆಗಲು ಪ್ರಾರಂಭವಾಗುತ್ತೆ.

ಡಿಜಿ ಲಾಕರ್ ಆ್ಯಪ್ ಮೂಲಕ ಕೋವಿಡ್ ಲಸಿಕೆಯ ಪ್ರಮಾಣಪತ್ರವನ್ನು ಹೇಗೆ ಡೌನ್ಲೋಡ್ ಮಾಡಕೊಳ್ಳಬಹುದು?

ಡಿಜಿ ಲಾಕರ್ ಆ್ಯಪ್ ನಲ್ಲಿ ನೀವು ತಮ್ಮ ಪರ್ಸನಲ್ ಇನ್ಫರ್ಮೇಷನ್ ಅನ್ನು ಅಲ್ಲಿ ಸುರಕ್ಷಿತವಾಗಿ ಇಡಬಹುದು. ನಿಮ್ಮ ಆಧಾರ್ ಕಾರ್ಡ್, ವೋಟರ್ ಐಡಿ ಇತ್ಯಾದಿ. ಇಂದು ನಾವು ಇದರ ಮೂಲಕ ಕೋವಿಡ್ ಲಸಿಕೆಯ ಪ್ರಮಾಣಪತ್ರವನ್ನು ಹೇಗೆ ಡೌನ್ಲೋಡ್ ಮಾಡಕೊಳ್ಳಬಹುದು ಎಂದು ತಿಳಿಯೋಣ.

 • ಮೊದಲು ನೀವು ಡಿಜಿ ಲಾಕರ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲ್ಲೀ (ಒಂದುವೇಳೆ ಇಲ್ಲದಿದ್ದರೆ)
 • ಆಮೇಲೆ ಮೊಬೈಲ್ ನಂಬರ್, ಆಧಾರ ಕಾರ್ಡ್, ಹುಟ್ಟಿದ ದಿನಾಂಕ ಇತ್ಯಾದಿ ವಿಷಯ ಹಾಕಿ ಲಾಗಿನ್ ಆಗಿ.
 • ಅಲಿಂದ ನೀವು ಕೋವಿಡ ಲಸಿಕೆ ಪ್ರಮಾಣಪತ್ರದ ಮೇಲೆ ಕ್ಲಿಕ್ ಮಾಡಿ.
 • ಅಲಿಂದ ನಿಮ್ಮ ಪ್ರಮಾಣಪತ್ರ ಡೌನ್ಲೋಡ್ ಆಗಲು ಪ್ರಾರಂಭವಾಗುತ್ತೆ.

ಉಮಂಗ ಆ್ಯಪ್ ಮೂಲಕ ಕೋವಿಡ್ ಲಸಿಕೆಯ ಪ್ರಮಾಣಪತ್ರವನ್ನು ಹೇಗೆ ಡೌನ್ಲೋಡ್ ಮಾಡಕೊಳ್ಳಬಹುದು?

ಹೌದು ನೀವೂ ಉಮಂಗ ಆ್ಯಪ್ ಮೂಲಕ ಕೋವಿಡ್ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಹೇಗೆ? ಅನ್ನುವುದು ಕೆಳಗೆ ನೋಡೋಣ

 • ಮೊದಲು ನೀವು ಉಮಂಗ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲ್ಲೀ ( ಇಲ್ಲದಿದ್ದರೆ).
 • ಅಮೇಲೆ ಅದರಲ್ಲಿ ಲಾಗಿನ್ ಆಗಿ, ತದನಂತರ ನೀಮಗೆ ‘What’s New’ ಎಂಬ ಸೆಕ್ಷನ್ ಸಿಗುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
 • ಅದರಲ್ಲಿ ನಿಮಗೆ ಕೊವೀನ್ ಎಂಬ ಹೆಸರು ಸಿಗುತ್ತೆ, ಅದರ ಮೇಲೆ ಕ್ಲಿಕ್ ಮಾಡಿ.
 • ಆಮೇಲೆ ನೀವು ಅದರಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಹಾಕಿ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ.
 • ನಿಮ್ಮ ಪ್ರಮಾಣಪತ್ರ ಡೌನ್ಲೋಡ್ ಆಗಲು ಪ್ರಾರಂಭವಾಗುತ್ತೆ.

ಬೆನೆಫಿಸಿಆರ್ಯ್ ಐಡಿ( Beneficiary ID) ಮೂಲಕ ಕೋವಿಡ್ ಲಸಿಕೆಯ ಪ್ರಮಾಣಪತ್ರವನ್ನು ಹೇಗೆ ಡೌನ್ಲೋಡ್ ಮಾಡಕೊಳ್ಳಬಹುದು?

ನೀವೂ ಒಂದು ವೇಳೆ ಬೆನೆಫಿಸಿಆರ್ಯ್ ಐಡಿ( Beneficiary ID) ಮೂಲಕ ಕೋವಿಡ್ ಲಸಿಕೆಯ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾದರೆ ನೀವು ಮೇಲೆ ತೋರಿಸಿದ ಅರೋಗ್ಯ ಸೇತು ಆ್ಯಪ್ ಮತ್ತು ಡಿಜಿ ಲಾಕರ್ ಆ್ಯಪ್ ಮೂಲಕ ಸರ್ಟಿಫಿಕೇಟ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಬಹುದು.

ಬೆನೆಫಿಸಿಆರ್ಯ್ ಐಡಿ(Without Beneficiary ID) ಇಲ್ಲದೇನೆ ಕೋವಿಡ್ ಲಸಿಕೆಯ ಪ್ರಮಾಣಪತ್ರವನ್ನು ಹೇಗೆ ಡೌನ್ಲೋಡ್ ಮಾಡಕೊಳ್ಳಬಹುದು? (


ನೀವೂ ಒಂದು ವೇಳೆ ಬೆನೆಫಿಸಿಆರ್ಯ್ ಐಡಿ(Without Beneficiary ID) ಇಲ್ಲದೇನೆ ಕೋವಿಡ್ ಲಸಿಕೆಯ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾದರೆ ನೀವು ಮೇಲೆ ತೋರಿಸಿದ ಅರೋಗ್ಯ ಉಮಂಗ್ ಆ್ಯಪ್ ಮತ್ತು ಕೊವೀನ್ ವೆಬ್ಸೈಟ್ ಮೂಲಕ ಸರ್ಟಿಫಿಕೇಟ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಬಹುದು.

ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ಅನ್ನು ಮೊಬೈಲ್ ನಂಬರ್ ಮೂಲಕ ಹೇಗೆ ಡೌನ್ಲೋಡ್ ಮಾಡಕೊಳ್ಳಬಹುದು? (Download corona vaccine certificate using Mobile number)

ನೀವೂ ಮೇಲೆ ನೋಡಿದ ಹಾಗೆ ಯಾವ ಒಂದು ವಿಧಾನವು ಮೊಬೈಲ್ ನಂಬರಯಿಲ್ಲದೇನೆ ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಸಾದ್ಯವಿಲ್ಲ. ಅದಕ್ಕಾಗಿ ವ್ಯಾಕ್ಸಿನ್ ಸರ್ಟಿಫಿಕೇಟ್ ಡೌನ್ಲೋಡ್ ಮಾಡಿಕೊಳ್ಳಲು ಮೊಬೈಲ್ ನಂಬರ್ ಬೇಕೇಬೇಕು.
ನೀವು ಮೊಬೈಲ್ ನಂಬರ್ ನಿಂದಾ ಈ ವಿಧಾನದಿಂದ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

 • ಅರೋಗ್ಯ ಸೇತು ಆ್ಯಪ್
 • ಕೋವಿನ ವೆಬ್ಸೈಟ್
 • ಉಮಾಂಗ್ ಆ್ಯಪ್
 • ಡಿಜಿ ಲಾಕರ್ ಆ್ಯಪ್

Leave a Comment