ಪ್ರಚಲಿತ ಘಟನೆಗಳು – ಮಾರ್ಚ್ 2022|Current Affairs March 2022 in Kannada

ಪ್ರಚಲಿತ ಘಟನೆಗಳು – ಮಾರ್ಚ್ 2022,(Current Affairs March) ನಮಸ್ತೆ ಗೆಳೆಯರೆ, ನಾವು ಎಲ್ಲಿ ಮಾರ್ಚ್ ತಿಂಗಳಲ್ಲಿ ನಡೆದ ಎಲ್ಲಾ ಮುಖ್ಯ, ಪರೀಕ್ಷೆಗೆ ಉಪಯುಕ್ತ ವಾಗುವ ಮಾಹಿತಿಯನ್ನು ಪಟ್ಟಿ ಮಾಡಿದ್ದೇವೆ.

current affairs march
current affairs march
  1. ಇತ್ತೀಚೆಗೆ ನಡೆದ ಐಬರ್ಡ್ರೋಲಾ ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ 2022 ರಲ್ಲಿ, ಒಡಿಶಾದ ಏಸ್ ಪ್ಯಾರಾ ಷಟ್ಲರ್ ವಿಶ್ವ ನಂ 1 ಪ್ರಮೋದ್ ಭಗತ್ ಎರಡು ಬೆಳ್ಳಿ ಮತ್ತು ಕಂಚಿನ ಪದಕವನ್ನು ಗೆದ್ದಿದ್ದಾರೆ.

ಕೆಲವು ಮುಖ್ಯ ಮಾಹಿತಿ
✓ಒಡಿಶಾ ಮುಖ್ಯಮಂತ್ರಿ – ನವೀನ್ ಪಟ್ನಾಯಕ್
✓ ಗವರ್ನರ್ – ಗಣೇಶಿ ಲಾಲ್
✓ ನಲಬನ ಪಕ್ಷಿಧಾಮ
✓ ಸಿಮಿಲಿಪಾಲ್ ಟೈಗರ್ ರಿಸರ್ವ್
ಒಡಿಶಾದ ಅಭಯಾರಣ್ಯ
✓ ಟಿಕರ್ಪಾದ ವನ್ಯಜೀವಿ ಅಭಯಾರಣ್ಯ
✓ ಸುನಬೇಡ ವನ್ಯಜೀವಿ ಅಭಯಾರಣ್ಯ
✓ ಚಿಲಿಕಾ ವನ್ಯಜೀವಿ ಅಭಯಾರಣ್ಯ, ಪುರಿ

  1. ಚೀನಾಕ್ಕೆ ಭಾರತದ ಹೊಸ ರಾಯಭಾರಿಯಾಗಿ ಹಿರಿಯ ರಾಜತಾಂತ್ರಿಕ ಪ್ರದೀಪ್ ಕುಮಾರ್ ರಾವತ್ ವಹಿಸಿಕೊಂಡಿದ್ದಾರೆ.
    ರಾವತ್, 1990 ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ (IFS) ಅಧಿಕಾರಿಯಾಗಿದ್ದವರು.
  2. ಹರೀಶ್ ಚಂದ್ರ ಮಿಶ್ರಾ ಅವರನ್ನು ದೆಹಲಿಯ ಲೋಕಾಯುಕ್ತರನ್ನಾಗಿ ನೇಮಿಸಲಾಗಿದೆ.
    ✓ಹರೀಶ್ ಚಂದ್ರ ಮಿಶ್ರಾ ಅವರು, ಜಾರ್ಖಂಡ್ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಯಾಗಿದ್ದವರು.
    ✓ಡಿಸೆಂಬರ್ 2020 ರಲ್ಲಿ ನ್ಯಾಯಮೂರ್ತಿ ಶ್ರೀಮತಿ ರೇವಾ ಖೇತ್ರಪಾಲ್ ಅವರು ನಿವೃತ್ತರಾದಾಗಿನಿಂದ ಈ ಹುದ್ದೆಯು ಖಾಲಿಯಾಗಿತ್ತು.

4.ಏಷ್ಯನ್ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಯುವ ಸ್ಪರ್ಧೆಯಲ್ಲಿ ಐದು ಭಾರತೀಯ ಮಹಿಳಾ ಬಾಕ್ಸರ್‌ಗಳು ಚಿನ್ನದ ಪದಕಗಳನ್ನು ಪಡೆದಿದ್ದಾರೆ.
✓ ಏಷ್ಯನ್ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ ಜೋರ್ಡಾನ್‌ನ ಅಮ್ಮನ್‌ನಲ್ಲಿ ನಡೆದಿದೆ.
✓75 ಕಿಲೋಗ್ರಾಂನಲ್ಲಿ ಮುಸ್ಕಾನ್,63 ಕಿಲೋಗ್ರಾಂನಲ್ಲಿ ರವಿನಾ,60 ಕಿಲೋಗ್ರಾಂನಲ್ಲಿ ಶಾಹೀನ್ ಗಿಲ್, 50 ಕಿಲೋಗ್ರಾಂನಲ್ಲಿ ತಮನ್ನಾ ಮತ್ತು 48 ಕಿಲೋಗ್ರಾಂನಲ್ಲಿ ನಿವೇದಿತಾ ಕರ್ಕಿ ಚಿನ್ನದ ಪದಕ ಪಡೆದರು.

5.ಜಮ್ಮು ಮತ್ತು ಕಾಶ್ಮೀರಕ್ಕೆ 2022-23 ನೇ ಸಾಲಿನ, ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಾಡಿಸಿದ್ದಾರೆ.

ಬಜೆಟ್ ಮೊತ್ತ 1.42 ಲಕ್ಷ ಕೋಟಿ ರೂಪಾಯಿಗಳು.
▪️ಜಮ್ಮು ಮತ್ತು ಕಾಶ್ಮೀರದ ಮುಖ್ಯ ಮಾಹಿತಿ
✓ಎಲ್. ಜೆ & ಕೆ ಗವರ್ನರ್ – ಮನೋಜ್ ಸಿನ್ಹಾ
ಮುಖ್ಯ ಉದ್ಯಾನವನಗಳು
✓ಸಲೀಂ ಅಲಿ ರಾಷ್ಟ್ರೀಯ ಉದ್ಯಾನವನ
✓ದಚಿಗಮ್ ರಾಷ್ಟ್ರೀಯ ಉದ್ಯಾನವನ
ಮುಖ್ಯ ಅಭಯಾರಣ್ಯಗಳು
✓ರಾಜ್ಪರಿಯನ್ ವನ್ಯಜೀವಿ ಅಭಯಾರಣ್ಯ
✓ಗುಲ್ಮಾರ್ಗ್ ವನ್ಯಜೀವಿ ಅಭಯಾರಣ್ಯ
✓ಹಿರಾಪೋರಾ ವನ್ಯಜೀವಿ ಅಭಯಾರಣ್ಯ

  1. ಕರ್ನಾಟಕ ಮಾಹಿತಿ ತಂತ್ರಜ್ಞಾನದ, ಮಂತ್ರಿ ಸಿ ಯನ್ ಅಶ್ವಂತ್ ನಾರಾಯಣ ಅವರು ಭಾರತದ ಮೊದಲ ಡಿಜಿಟಲ್ ವಾಟರ್ ಡೇಟಾ ಬ್ಯಾಂಕ್, ‘ಅಕ್ವೇರಿಯಂ’ ಅನ್ನು ಬಿಡುಗಡೆ ಮಾಡಿದರು.

ಕರ್ನಾಟಕದ ಮುಖ್ಯ ಮಾಹಿತಿ
✓ಕರ್ನಾಟಕದ ಮುಖ್ಯ ಮಂತ್ರಿ: ಬಸವರಾಜ ಬೊಮ್ಮಾಯಿ
✓ಗವರ್ನರ್: ತಾವರಚಂದ್ ಗೆಹ್ಲೋಟ್
✓ಕರ್ನಾಟಕದ ಮುಖ್ಯ ಬಂದರು: ಮಂಗಳೂರು ಬಂದರು.

ಹೋಂ ಪೇಜ್:- thekannadanews.com

Leave a Comment

Your email address will not be published.