ಇಂದು ನಾವು ಕನ್ನಡ ವರ್ಣಮಾಲೆ ಕುರಿತು ಮಾಹಿತಿ ನೀಡುತ್ತಿದ್ದೇವೆ.( Kannada varnamalegalu, kannada alphabets, charts in kannada)
ಕನ್ನಡ ವರ್ಣಮಾಲೆಯು ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತಿ ಮುಖ್ಯವಾದ ವಿಷಯವಾಗಿದೆ. ಅದಕ್ಕಾಗಿ ನೀವು ಇದರಬಗ್ಗೆ ತಿಳಿಯುವುದು ಬಹು ಮುಖ್ಯವಾಗಿದೆ.

ನಮ್ಮ ಅಭಿಪ್ರಾಯಗಳನ್ನು, ಮಾತುಗಳನ್ನು ಬೇರೆಯವರಿಗೆ ತಿಳಿಸುವುದಕ್ಕೆ ಮತ್ತು ಬೇರೆಯವರ ಅಭಿಪ್ರಾಯವನ್ನು ನಾವು ತಿಳಿದುಕೊಳ್ಳಲು ಬಳಸುವ ಮಾಧ್ಯಮಕ್ಕೆ “ಭಾಷೆ” ಎಂದು ಕರೆಯುತ್ತಾರೆ.
ಹಲ್ಮಿಡಿ ಶಾಸನದ ಪ್ರಕಾರ ಕನ್ನಡ ಭಾಷೆಗೆ ಸುಮಾರು 2500 ವರ್ಷಗಳ ಇತಿಹಾಸವಿದ್ದು, ಇದು ಜಗತ್ತಿನ ಅತಿ ಹಳೆಯ ಭಾಷೆಗಳಲ್ಲಿ 3ನೇ ಸ್ಥಾನದಲ್ಲಿದೆ. (ಮೊದಲಿಗೆ ಸಂಸ್ಕೃತ, ಎರಡನೇ ತಮಿಳ). ಇದು ಒಂದು ದ್ರಾವಿಡ ಭಾಷೆಯಾಗಿದೆ.
ಕನ್ನಡ ಭಾಷೆಗೆ 2008ರಲ್ಲಿ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ.
ಕನ್ನಡ ವರ್ಣಮಾಲೆ ಅಕ್ಷರಗಳು
Table of Contents
ಕನ್ನಡ ಭಾಷೆಗೆ “ಶ್ರವಣ ಮತ್ತು ಚಾಕ್ಷುಷ” ಎಂಬ ರೂಪಗಳಿವೆ. ಇದರಲ್ಲಿ ಶ್ರವಣ ಎಂದರೆ ಧ್ವನಿಯ ಮೂಲಕ ಕಿವಿಗೆ ಕೇಳಿಸುವುದು ಮತ್ತು ಚಾಕ್ಷುಷ ಎಂದರೆ ಬರಹದ ಮೂಲಕ ಕಣ್ಣಿಗೆ ಕಾಣಿಸುವುದು ಎಂದರ್ಥ.
ಕನ್ನಡ ಭಾಷೆಯಲ್ಲಿ ಬಳಸಲಾಗುವ ಅಕ್ಷರವನ್ನು ವರ್ಣಮಾಲೆ ಎಂದು ಕರೆಯುತ್ತಾರೆ.
ಕನ್ನಡದಲ್ಲಿ ಒಟ್ಟು 49 ವರ್ಣಮಾಲೆಗಳಿವೆ.
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ
ಕ ಖ ಗ ಘ ಓ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಥ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಲ
ಕನ್ನಡ ವರ್ಣ ಮಾಲೆಯನ್ನು ಮೂರು ಭಾಗವಾಗಿ ವಿಭಾಗಿಸಬಹುದು.

1) ಸ್ವರಗಳು.
ಸ್ವರಗಳಲ್ಲಿ ಮೂರು ಪ್ರಕಾರಗಳಿವೆ. ಅವುಗಳು
- ಹೃಸ್ವಸ್ವರ .
- ದೀರ್ಘಸ್ವರ .
- ಪ್ಲುತಸ್ಪರ.
Note:- ಸ್ವರಗಳ ಬಗ್ಗೆ ಪೂರ್ತಿ ತಿಳಿಯಲು ಎಲ್ಲಿ ಒಟ್ಟು:- ಕನ್ನಡದ ಸ್ವರಗಳು.
2) ವ್ಯಂಜನಗಳು
ಈ ವ್ಯಂಜನಗಳಲ್ಲಿ ಎರಡು ವಿಧಗಳು.
- ವರ್ಗೀಯ ವ್ಯಂಜನಗಳು.
- ಅವರ್ಗೀಯ ವ್ಯಂಜನಗಳು.
3) ಯೋಗವಾಹಗಳು
ಯೋಗವಾಹಗಳು ಇದರಲ್ಲಿ ಎರಡು ಪ್ರಕಾರಗಳಿವೆ.
- ಅನುಸ್ವರ (0)
- ವಿಸರ್ಗ (ಃ)
ವ್ಯಂಜನ ಮತ್ತು ಯೋಗವಾಹಗಳ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲ ಇಲ್ಲಿ ಒತ್ತಿ: ಕನ್ನಡದ ವ್ಯಂಜನಗಳು.
ಹೋಮ್ ಪೇಜ್ : ಕನ್ನಡ ನ್ಯೂಸ್