ವಿಭಕ್ತಿ ಪ್ರತ್ಯಯಗಳು – ಕನ್ನಡ ವ್ಯಾಕರಣ|Vibhakti Pratyaya in kannada

ಕನ್ನಡ ವ್ಯಾಕರಣದಲ್ಲಿ ವಿಭಕ್ತಿ ಪ್ರತ್ಯಯ (Vibhakti Pratyaya) ಒಂದು ಮುಖ್ಯವಾದ ಪಾತ್ರವನ್ನುವಹಿಸುತ್ತದೆ. ಅದಕ್ಕಾಗಿ ವಿಭಕ್ತಿ ಪ್ರತ್ಯಯ ತಿಳಿಯುದು ಪರೀಕ್ಷೆಯಾ ದೃಷ್ಟಿಯಿಂದ ಬಹು ಮುಖ್ಯವಾಗುತ್ತದ.

Vibhakti Pratyaya
Vibhakti Pratyaya in kannada

ವಿಭಕ್ತಿ ಪ್ರತ್ಯಯವನ್ನು ತಿಳಿಯುವ ಮೊದಲು ನೀವು ನಾಮಪದ,ನಾಮ ಪ್ರಕೃತಿಯನ್ನು ತಿಳಿಯಬೇಕು ಏಕೆಂದರೆ ಇದು ಒಂದಕೊಂದು ಬಿಟ್ಟಿರಲಾರವು.

ಸರಿ ಹಾಗಾದ್ರೆ ಇವುಗಳ ಬಗ್ಗೆ ತಿಳಿಯೋಣ

‘ನಾಮ’ ಎಂದರೆ ವಸ್ತುಗಳ ಹೆಸರು ಎಂದರ್ಥ.
ಉದಾಹರಣೆಗೆ: ಮರ, ಕಲ್ಲು, ಮನೆ, ಮಣ್ಣು,ನೀರು ಇತ್ಯಾದಿ.

ನಾಮಪ್ರಕೃತಿ ಎಂದರೇನು? (What is Namaprakurti?)


ನಾಮಪದಗಳ ಮೂಲರೂಪವನ್ನು ನಾಮಪ್ರಕೃತಿ ಎಂದು ಕರೆಯುತ್ತಾರೆ.
ಉದಾಹರಣೆಗೆ: ‘ಮನೆ’ ಎಂಬುವುದು ನಾಮಪ್ರಕೃತಿ , ‘ಮನೆಯಲ್ಲಿ’ ಎಂಬುದು ನಾಮಪದ.

ವಿಭಕ್ತಿ ಪ್ರತ್ಯಯಗಳು ಎಂದರೇನು? (What is Vibhakti pratyaya?)


ಸ್ವತಂತ್ರವಾಗಿ ಅರ್ಥ ಕೊಡದೆ ನಾಮಪ್ರಕೃತಿಗಳ ಮುಂದೆ ಸೇರಿ ಬೇರೆ ಬೇರೆ ಅರ್ಥವನ್ನು ಕೊಡುವ ಅಕ್ಷರಗಳನ್ನು ವಿಭಕ್ತಿ ಪ್ರತ್ಯಯಗಳು ಎಂದು ಕರೆಯುತ್ತಾರೆ.
ಉದಾಹರಣೆ : ಗೆ, ಅನ್ನು,ಇಂದ, ಅಂತ್ತಣಿಂ ಇತ್ಯಾದಿ.

ನಾಮಪದ ಎಂದರೇನು? (What is Namapada)


ನಾಮಪ್ರಕೃತಿಗೆ ವಿಭಕ್ತಿ ಪ್ರತ್ಯಯಗಳು ಸೇರಿ ಆಗುವ ಪದಗಳನ್ನು ನಾಮಪದ ಎಂದು ಕರೆಯುತ್ತಾರೆ.

ಉದಾಹರಣೆ: ಮನೆಯು ಎಂಬುದು ನಾಮಪದ, ಮನೆ ಎಂಬುವುದು ನಾಮಪ್ರಕೃತಿ ಮತ್ತು ಉ ಎಂಬುದು ವಿಭಕ್ತಿ ಪ್ರತ್ಯಯ.

ಹೊಸಗನ್ನಡ ವಿಭಕ್ತಿ ಪ್ರತ್ಯಯಗಳು (Hosagannada Vibhakti pratyaya)

ವಿಭಕ್ತಿ ಹೊಸಗನ್ನಡ ಪ್ರತ್ಯಯ ಉದಾಹರಣೆ
ಪ್ರಥಮಾಶಾಮನು
ದ್ವಿತಿಯಾ ಅನ್ನು ಶಾಮನನ್ನು
ತೃತಿಯಾ ಇಂದಶಾಮನಿಂದ
ಚತುರ್ಥಿಗೆ, ಇಗೆ, ಕ್ಕೆ, ಅಕ್ಕೆ ಶಾಮನಿಗೆ
ಪಂಚಮಿ ದೆಸೆಯಿಂದಶಾಮನ ದೆಸೆಯಿಂದ
ಷಷ್ಠಿ ಶಾಮನ
ಸಪ್ತಮಿ ಅಲ್ಲಿ, ಅಲಿ, ಒಳ, ಎ ಶಾಮನಲ್ಲಿ
ಸಂಭೋಧನಾ ಆ , ಇರಾ, ಏ, ಕೆ ಶಾಮಾ ,ಶಾಮನೆ

ಹೊಸಗನ್ನಡ ವಿಭಕ್ತಿ ಪ್ರತ್ಯಯಗಳು ಉದಾಹರಣೆಗಳು

ಹಳೆಗನ್ನಡ ವಿಭಕ್ತಿ ಪ್ರತ್ಯಯ (Halegannada Vibhakti pratyaya)

ವಿಭಕ್ತಿ ಹಳೆಗನ್ನಡ ಪ್ರತ್ಯಯಉದಾಹರಣೆ
ಪ್ರಥಮಾಮ್ಶಾಮಮ್
ದ್ವಿತಿಯಾ ಅಂಶಾಮಕಂ
ತೃತಿಯಾ ಇಂ, ಇಂದಂ ಶಾಮನಿಂ, ಶಾಮನಿಂದಂ
ಚತುರ್ಥಿ ಗೆ, ಕೆ, ಕ್ಕೆಶಾಮಗೆ
ಪಂಚಮಿ ಅತ್ತಿಣಿಂ ,ಅತ್ತಣಿದಂ, ಅತ್ತಣಿಂದ ಶಾಮನತ್ತಣಿಂ
ಷಷ್ಠಿ ಶಾಮಾ
ಸಪ್ತಮಿ ಒಳ್ ಶಾಮನೊಳ
ಸಂಭೋಧನಾ ಆ , ಇರಾ,ಏ, ಕೆ ಶಾಮನೆ

ಹಳೆಗನ್ನಡ ವಿಭಕ್ತಿ ಪ್ರತ್ಯಯ ಉದಾಹರಣೆ

Leave a Comment