Connect with us

Education

ಮಕ್ಕಳ ದಿನಾಚರಣೆಯ ಶುಭಾಶಯಗಳು 2021: ಜವಾಹರಲಾಲ್ ನೆಹರು ಅವರ ಸಂದೇಶಗಳು,ಶುಭಾಶಯಗಳು,ಸಂದೇಶಗಳು, ಚಿತ್ರಗಳು| Children’s Day 2021: Jawaha Nehru’s quotes,Messages, Greetings, Messages, Pictures

Published

on

ಮಕ್ಕಳ ದಿನಾಚರಣೆಯ ಶುಭಾಶಯಗಳು 2021: ಜವಾಹರಲಾಲ್ ನೆಹರು ಅವರ ಸಂದೇಶಗಳು,ಶುಭಾಶಯಗಳು,ಸಂದೇಶಗಳು, ಚಿತ್ರಗಳು| Children’s Day 2021: Jawaharlal Nehru’s quotes,Messages, Greetings, Messages, Pictures

ನವೆಂಬರ್ 14 ರಂದು ಪ್ರತಿ ವರ್ಷ ಭಾರತದಲ್ಲಿ  ಮಕ್ಕಳ ದಿನಾಚರಣೆಯನ್ನು ಇಡಿ ಭಾರತಾದ್ಯಂತ ಆಚರಿಸಲಾಗುವುದು. ಈ ದಿನವೂ ಮಾಜಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಹುಟ್ಟಿದ ದಿನವಾಗಿದ್ದು ಅವರ ನೆನಪಿಗಾಗಿ ಇದನ್ನೂ ಆಚಾರಿಸುತ್ತಾರೆ.

ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಮಕ್ಕಳು ‘ಚಾಚಾ ನೆಹರು’ ಎಂದು ಕರೆಯುತ್ತಿದ್ದರು, ಇವರು ಶಿಕ್ಷಣಕ್ಕೆ ಮತ್ತು ಮಕ್ಕಳಿಗೆ ಬಹಳ ಮಹತ್ವ ಕೊಟ್ಟಿದ್ದರು. ಮಕ್ಕಳಿಗೆ ಯಾವಾಗಲೂ ‘ Tommarow is yours ‘ ಎಂದು ಹೇಳುತ್ತಿದ್ದರು ಅಂದರೆ ನಾಳೆ ನಿಮ್ಮದು ಈ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ಸದಾ ಹೇಳುತ್ತಿದ್ದರು.

“ಮಕ್ಕಳು ಉದ್ಯಾನದ ಮೊಗ್ಗುಗಳಂತೆ ಮತ್ತು ಎಚ್ಚರಿಕೆಯಿಂದ ಮತ್ತು ಪ್ರೀತಿಯಿಂದ ಪೋಷಿಸಬೇಕು, ಏಕೆಂದರೆ ಅವರು ರಾಷ್ಟ್ರದ ಭವಿಷ್ಯ ಮತ್ತು ನಾಳಿನ ಪ್ರಜೆಗಳು” ಚಾಚಾ ನೆಹರು ಹೇಳಿದ್ದಾರೆ.

“ಇಂದಿನ ಮಕ್ಕಳು ನಾಳಿನ ಭಾರತವನ್ನು ನಿರ್ಮಿಸುತ್ತಾರೆ. ನಾವು ಅವರನ್ನು ಹೇಗೆ ಬೆಳೆಸುತ್ತೇವೆ ಅದರ ಮೇಲೆ ದೇಶದ ಭವಿಷ್ಯ ನಿರ್ಧರಿಸುತ್ತದೆ.” – ಪಂಡಿತ್ ಜವಾಹರಲಾಲ್ ನೆಹರು

ಮಕ್ಕಳ ದಿನಾಚರಣೆಯ ಚಿತ್ರಗಳು/Children’s Day Images

ಜವಾಹರಲಾಲ್ ನೆಹರು ಅವರ ಸಂದೇಶಗಳು,ಶುಭಾಶಯಗಳು,ಸಂದೇಶಗಳು, ಚಿತ್ರಗಳು| Children's Day 2021: Jawaharlal Nehru's quotes,Messages, Greetings, Messages, Pictures
ಜವಾಹರಲಾಲ್ ನೆಹರು ಅವರ ಸಂದೇಶಗಳು,ಶುಭಾಶಯಗಳು,ಸಂದೇಶಗಳು, ಚಿತ್ರಗಳು| Children's Day 2021: Jawaharlal Nehru's quotes,Messages, Greetings, Messages, Pictures
ಜವಾಹರಲಾಲ್ ನೆಹರು ಅವರ ಸಂದೇಶಗಳು,ಶುಭಾಶಯಗಳು,ಸಂದೇಶಗಳು, ಚಿತ್ರಗಳು| Children's Day 2021: Jawaharlal Nehru's quotes,Messages, Greetings, Messages, Pictures

(All IMG credits goes to : pixabay.com)

Continue Reading
Click to comment

Leave a Reply

Your email address will not be published.

Kannada Grammar

ವ್ಯಂಜನಗಳು- ಕನ್ನಡ ವ್ಯಾಕರಣ|Vyanajanagalu in Kannada

Published

on

By

ಕನ್ನಡ ವ್ಯಾಕರಣದ ವ್ಯಂಜನಗಳು,ವ್ಯಂಜನಗಳು ಕನ್ನಡದಲ್ಲಿ ( Kannada swaragalu vyanajanagalu, kannada vyanajanagalu

Vyanajanagalu in Kannada
ವ್ಯಂಜನಗಳು

ನಮಸ್ತೆ ಗೆಳೆಯರೆ, ಹಿಂದಿನ ಲೇಖನದಲ್ಲಿ ನಲ್ಲಿ ಕನ್ನಡ ವ್ಯಾಕರದಲ್ಲಿ ಬರುವ ಸ್ವರಗಳ (swaragalu in kannada) ಬಗ್ಗೆ ಅಧ್ಯಯನ ಮಾಡಿದ್ದೀರಿ, ಇಂದಿನ ಲೇಖನದಲ್ಲಿ ಕನ್ನಡ ವ್ಯಂಜನಗಳ (Vyanajanagalu in Kannada) ಬಗ್ಗೆ ತಿಳಿಯೋಣ.

ಕನ್ನಡ ವ್ಯಂಜನಗಳು ಕನ್ನಡ ಭಾಷೆಯಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ. ಒಟ್ಟು 34 ವ್ಯಂಜನಗಳಿದ್ದು ಅದರಲ್ಲಿ 2 ವಿಭಾಗಗಳಾಗಿ ವರ್ಗೀಕರಿಸಬಹುದು.

ವ್ಯಂಜನಗಳನ್ನು ಪರೀಕ್ಷೆ ದೃಷ್ಟಿ ಕೋನದಿಂದ ನೋಡಿದರೆ, ಇದು ಬಹು ಮುಖ್ಯ ಪಾತ್ರವಹಿಸುತ್ತದೆ, ಏಕೆಂದರೆ ಇದನ್ನು ಪ್ರಾಥಮಿಕ ಶಾಲೆಯಲ್ಲಿ, ಕಾಲೇಜಿನಲ್ಲಿ ಮತ್ತು ಇತರೆ ಸ್ಪರ್ಧಾ ಪರೀಕ್ಷೆಯಲ್ಲಿ ಬಹಳ ಸಲ ಕೇಳಿದ್ದಾರೆ ಮತ್ತು ಮುಂದೆ ಕೇಳುತ್ತಾರೆ ಕೂಡ, ಅದಕ್ಕಾಗಿ ಇದನ್ನು ಮನಗಟ್ಟು ಮಾಡಿಕೊಳ್ಳಿ ಹಾಗೂ ಇದನ್ನು ನಿಮ್ಮ ಗೆಳೆಯರ ಜೊತೆ ಶೇರ್ ಮಾಡಿ.

Kannada vyanajanagalu ವ್ಯಂಜನಗಳು – 34


ಸ್ವತಂತ್ರವಾಗಿ ಉಚ್ಚರಿಸಲು ಸಾಧ್ಯವಾಗದ ಅಥವಾ ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವಂತಹ ಅಕ್ಷರಗಳಿಗೆ ವ್ಯಂಜನಗಳೆಂದು ಕರೆಯುತ್ತಾರೆ.

ಸ್ವರಗಳು ಇಲ್ಲದಿದ್ದರೆ ಅಪೂರ್ಣವಾದ ಅರ್ಥ ಕೊಡುತ್ತವೆ.

ಈ ವ್ಯಂಜನಗಳಲ್ಲಿ ಎರಡು ವಿಧಗಳು:

1) ವರ್ಗೀಯ ವ್ಯಂಜನಗಳು – 25
2) ಅವರ್ಗೀಯ ವ್ಯಂಜನಗಳು – 9

1) ವರ್ಗೀಯ ವ್ಯಂಜನಗಳು – 25 (Vargiya vyanjana galu in Kannada)

ವರ್ಗೀಯ ವ್ಯಂಜನಗಳು (Vargeeya vyanjanagalu) ಇದು ಮೊದಲ ವಿಂಗಡನೆಯಾಗಿದ್ದು, ಇದರಲ್ಲಿ ಒಟ್ಟು 25 ಅಕ್ಷರಗಳಿವೆ. ಇದನ್ನು ಮತ್ತೆ 5 ವರ್ಗಗಳಾಗಿ ವಿಂಗಡನೆಮಾಡಲಾಗಿದೆ. ಇದರ ಬಗ್ಗೆ ಮತ್ತಷ್ಟೂ ತಿಳಿಯೋಣ.

‘ಕ್’ ಯಿಂದ ‘ಮ್’ ವರೆಗಿನ 25 ಅಕ್ಷರಗಳನ್ನು ವರ್ಗಿಯ ವ್ಯಂಜನವೆಂದು ಕರೆಯುತ್ತಾರೆ. ಇವು ಬಾಯಿಯ ಯಾವ ಭಾಗದಿಂದ ಹುಟ್ಟುತ್ತವೆ ಎಂಬುದರ ಆಧಾರದ ಮೇಲೆ ವ್ಯಂಜಗಳನ್ನು ವರ್ಗಿಕರಿಸಲಾಗಿದೆ.

ಇದರಲ್ಲಿ 5 ವರ್ಗಗಳಿವೆ.

ಕ್ ವರ್ಗ (5) – ಕ್ ಖ್ ಗ್ ಘ್ ಓ
ಚ್ ವರ್ಗ(5) – ಚ್ ಛ್ ಜ್ಯೂ ಝ್ ಞ
ಟ್ ವರ್ಗ (5) – ಟ್ ಠ್ ಡ್ ಢ್ ಣ್
ತ್ ವರ್ಗ (5) – ತ್ ಥ್ ದ್ ಧ್ ನ್
ಪ್ ವರ್ಗ (5) – ಪ್ ಫ್ ಬ್ ಭ ಮ್

ವರ್ಗೀಯ ವ್ಯಂಜನಗಳಲ್ಲೂ ಕೂಡ ಮೂರು ವಿಧಗಳಿವೆ. ಅವುಗಳೆ

 1. ಅಲ್ಪ ಪ್ರಾಣ – 10
 2. ಮಹಾಪ್ರಾಣ – 10
 3. ಅನುನಾಸಿಕ – 5

1.ಅಲ್ಪಪ್ರಾಣ- 10

ಕಡಿಮೆ ಸಮಯ ತೆಗೆದುಕೊಂಡು ಉಚ್ಚರಿಸುವಂತಹ ವ್ಯಂಜನಗಳಿಗೆ ಅಲ್ಪಪ್ರಾಣ ಎನ್ನುವರು. (ಪ್ರತಿ ವರ್ಗದ ಪ್ರಥಮ ಹಾಗೂ ತೃತೀಯ ಅಕ್ಷರಗಳು)

ಉದಾ: ಕ್, ಟ್, ಚ್ etc..

ಅಲ್ಪಪ್ರಾಣಗಳ ಸಂಖ್ಯೆ ಒಟ್ಟು 10

2.ಮಹಾ ಪ್ರಾಣ – 10

ಹೆಚ್ಚು ಸಮಯ ತೆಗೆದುಕೊಂಡು ಉಚ್ಚರಿಸುವಂತಹ ವ್ಯಂಜನಗಳಿಗೆ ಮಹಾಪ್ರಾಣ ಎನ್ನುವರು. (ಪ್ರತಿ ವರ್ಗದ ದ್ವಿತೀಯ ಹಾಗೂ ಚತುರ್ಧಾಕ್ಷರಗಳು)
ಉದಾ: ಖ್, ಛ್, etc…

ಮಹಾಪ್ರಾಣಗಳ ಸಂಖ್ಯೆ ಒಟ್ಟು 10

3.ಅನುನಾಸಿಕ – 10

ಮೂಗಿನ ಸಹಾಯ ತೆಗೆದುಕೊಂಡ ಉಚ್ಚರಿಸುವಂತಹ ವ್ಯಂಜನಗಳಿಗೆ ಅನುನಾಸಿಕ ಎ೦ದು ಕರೆಯುತ್ತಾರೆ.(ಪ್ರತಿ ವರ್ಗದ ಪಂಚಮಾಕ್ಷರಗಳು)
ಉದಾ : ಣ್, ನ್, ಮ್, etc…

ಅನುನಾಸಿಕಗಳ ಸಂಖ್ಯೆ ಒಟ್ಟು 10

2) ಅವರ್ಗೀಯ ವ್ಯಂಜನಗಳು:9 (Kannada Avargeeya vyanajana galu)

ಅವರ್ಗೀಯ ವ್ಯಂಜನಗಳು (Avargiya vyanajana galu) ಇದು ವ್ಯಂಜನಗಳ ಏರಡನೆ ವಿಧವಾಗಿದ್ದು ಇದರಲ್ಲಿ ಒಟ್ಟು 9 ಅಕ್ಷರಗಳಿವೆ.

ವರ್ಣಮಾಲೆಯ ಕೊನೆಯ ಒಂಬತ್ತು ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳು ಎನ್ನುವರು.

ಉದಾ: ಯ ರ ಲ ವ ಶ ಷ ಸ ಹ ಳ.

ಯೋಗವಾಹಗಳು – 2 (yogavahagalu in kannada)

ಯೋಗವಾಹಗಳ ಒಟ್ಟು ಸಂಖ್ಯೆ 2, ಅದರಲ್ಲಿ ಅನುಸ್ವರ ಮತ್ತು ವಿಸರ್ಗವೆಂದು ವಿಂಗಡನೆ ಮಾಡಲಾಗಿದೆ.


ಯೋಗ ಅಂದರೆ ‘ಸಂಬಂಧ‘ ವಾಹ ಎಂದರೆ ‘ಹೊಂದಿದ ‘ , ಎಂಬ ಅರ್ಥ ಕೊಡುತ್ತದೆ. ಯಾವುದಾದರೂ ಸ್ವರಗಳ ಜೊತೆ ಸೇರಿ ಅಥವಾ ಸಂಬಂಧ ಹೊಂದಿದ ಅಕ್ಷರಗಳಿಗೆ ಯೋಗವಾಹಗಳೆಂದು ಕರೆಯುವುದುಂಟು.

ಯೋಗವಾಹಗಳು ಇದರಲ್ಲಿ ಎರಡು ಪ್ರಕಾರಗಳಿವೆ.

 1. ಅನುಸ್ವರ (0)
  ಉದಾ: ಅಂ, ಕಂ, etc…
 2. ವಿಸರ್ಗ (ಃ)
  ಉದಾ: ಅಃ,ಕಃ etc…

ಯಾವ ಅಕ್ಷರಗಳು ಎಲ್ಲೆಲ್ಲಿ ಹುಟ್ಟುತ್ತವೆ ಎಂಬುದರ ಆಧಾರದ ಮೇಲೆ ಅಕ್ಷರಗಳನ್ನು ಪುನಃ ವಿಂಗಡಿಸಲಾಗಿದೆ.

ಕಂಠ್ಯ ವರ್ಣ– ಕಂಠದಲ್ಲಿ ಹುಟ್ಟುವ ಅಕ್ಷರವನ್ನು ಕಂಠ್ಯ ವರ್ಣ ಎನ್ನುವರು.

ಉದಾ: ಅ, ಆ ಕ ಖ ಗ ಘ ಓ ಶ & ವಿಸರ್ಗ (ಃ).

ಮೂರ್ಧನ್ಯ : ತಾಲುವಿನಲ್ಲಿ ಹುಟ್ಟುವ ಅಕ್ಷರವನ್ನು ಮೂರ್ಧನ್ಯ ವರ್ಣ ಎನ್ನುವರು.

ಉದಾ: ಇ ಈ ಚ ಛ ಜ ಝ ಞ ಯ ಶ

ದಂತ್ಯ ವರ್ಣ: ಹಲ್ಲುಗಳಲ್ಲಿ ಹುಟ್ಟುವ ಅಕ್ಷರವನ್ನು ದಂತ್ಯ ವರ್ಣ ಎನ್ನುವರು.

ಉದಾ: ತ ಥ ದ ಧ ನ ಲ ಸ

ಮೂರ್ಧನ್ಯ : ನಾಲಿಗೆಯ ಮೇಲಿನ ಭಾಗದಲ್ಲಿ ಹುಟ್ಟುವ ಅಕ್ಷರವನ್ನು ಮೂರ್ಧನ್ಯ ವರ್ಣ ಎನ್ನುವರು.

ಉದಾ: ಋ ಟ ಠ ಡ ಢ ಣ ರ ಷ

ಜಷ್ಯ ವರ್ಣ : ತುಟಿಯಲ್ಲಿ ಹುಟ್ಟುವ ಅಕ್ಷರವನ್ನು ಜಷ್ಯ ವರ್ಣ ಎನ್ನುವರ

ಉದಾ: ಉ ಊ ಪ ಫ ಬ ಭ ಮ.

ಅನುನಾಸಿಕ ವರ್ಣ: ನಾಸಿಕದಲ್ಲಿ ಹುಟ್ಟುವ ಅಕ್ಷರವನ್ನು ಜಷ್ಯ ವರ್ಣ ಎನ್ನುವರ

ಉದಾ: ಓ, ಞ ಣ ನ ಮ.

ಕಂಠತಾಲು: ಕಂಠ ತಾಲುವಿನಲ್ಲಿ ಹುಟ್ಟುವ ಅಕ್ಷರವನ್ನು ಕಂಠತಾಲು ಎನ್ನುವರು.

ಉದಾ: ಎ ಏ ಐ

ಕಂಠೋಪ್ಯ : ಕಂಠ & ತುಟಿಯಲ್ಲಿ ಹುಟ್ಟುವ ಅಕ್ಷರವನ್ನು ಕಂಠೋಪ್ಯ ಎನ್ನುವರು.

ಉದಾ: ಒ ಓ ಔ .

ದಂತೋಷ್ಯ : ಹುಲ್ಲು & ತುಟಿಯಲ್ಲಿ ಹುಟ್ಟುವ ಅಕ್ಷರವನ್ನು ದಂತೋಷ್ಯ ಎನ್ನುವರು.

ಉದಾ: ವ

ಕಂಠನಾಸಿಕ : ಕಂಠ & ನಾಸಿಕದಲ್ಲಿ ಹುಟ್ಟುವ ಅಕ್ಷರವನ್ನು ಕಂಠನಾಸಿಕ ಎನ್ನುವರು

ಉದಾ: ಅನುಸ್ವರ (0) .

ಕನ್ನಡ ವ್ಯಂಜನಗಳು ಎಸ್ಟು?

ಕನ್ನಡ ವ್ಯಂಜನಗಳು 34.

ಕನ್ನಡ ವ್ಯಂಜನಗಳಲ್ಲಿ ಎಸ್ಟು ವಿಧಗಳು?

ವ್ಯಂಜನಗಳಲ್ಲಿ 2 ವಿಧ 1.ವರ್ಗೀಯ ವ್ಯಂಜನಗಳು 2. ಅವರ್ಗೀಯ ವ್ಯಂಜನಗಳು.

ಎಸ್ಟು ವರ್ಗೀಯ ವ್ಯಂಜನಗಳಿವೆ? (How much vargiya vyanajanagalu are there?)

ವರ್ಗೀಯ ವ್ಯಂಜನಗಳ ಸಂಖ್ಯೆ 10

ವರ್ಗೀಯ ವ್ಯಂಜನಗಳಲ್ಲಿ ಎಸ್ಟು ವಿಧಗಳಿವೆ?

ವರ್ಗೀಯ ವ್ಯಂಜನಗಳಲ್ಲಿ ಎಸ್ಟು 3 ವಿಧಗಳಿವೆ.1.ಅಲ್ಪ ಪ್ರಾಣ 2.ಮಹಾಪ್ರಾಣ 3.ಅನುನಾಸಿಕ

ಅಲ್ಪ ಪ್ರಾಣ ವ್ಯಂಜನ ಎಂದರೇನು?

ಕಡಿಮೆ ಸಮಯ ತೆಗೆದುಕೊಂಡು ಉಚ್ಚರಿಸುವಂತಹ ವ್ಯಂಜನಗಳಿಗೆ ಅಲ್ಪಪ್ರಾಣ ಎನ್ನುವರು.

ಅವರ್ಗೀಯ ವ್ಯಂಜನಗಳು ಎಸ್ಟು?

ಅವರ್ಗೀಯ ವ್ಯಂಜನಗಳು 9

ಯೋಗವಾಹಗಳು ಎಂದರೇನು?

ಯಾವುದಾದರೂ ಸ್ವರಗಳ ಜೊತೆ ಸೇರಿ ಅಥವಾ ಸಂಬಂಧ ಹೊಂದಿದ ಅಕ್ಷರಗಳಿಗೆ ಯೋಗವಾಹಗಳೆಂದು ಕರೆಯುವುದುಂಟು.

ಮಹಾಪ್ರಾಣ ವ್ಯಂಜನ ಎಂದರೇನು?

ಹೆಚ್ಚು ಸಮಯ ತೆಗೆದುಕೊಂಡು ಉಚ್ಚರಿಸುವಂತಹ ವ್ಯಂಜನಗಳಿಗೆ ಮಹಾಪ್ರಾಣ ಎನ್ನುವರು.

ಅನುನಾಸಿಕ ವ್ಯಂಜನ ಎಂದರೇನು?

ಮೂಗಿನ ಸಹಾಯ ತೆಗೆದುಕೊಂಡ ಉಚ್ಚರಿಸುವಂತಹ ವ್ಯಂಜನಗಳಿಗೆ ಅನುನಾಸಿಕ ಎ೦ದು ಕರೆಯುತ್ತಾರೆ.

ವರ್ಗಿಯ ವ್ಯಂಜನ ಎಂದರೇನು?

‘ಕ್’ ಯಿಂದ ‘ಮ್’ ವರೆಗಿನ 25 ಅಕ್ಷರಗಳನ್ನು ವರ್ಗಿಯ ವ್ಯಂಜನವೆಂದು ಕರೆಯುತ್ತಾರೆ.

ವ್ಯಂಜನಗಳೆಂದರೇನು?( Meaning of Vyanjanagalu)

ಸ್ವತಂತ್ರವಾಗಿ ಉಚ್ಚರಿಸಲು ಸಾಧ್ಯವಾಗದ ಅಥವಾ ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವಂತಹ ಅಕ್ಷರಗಳಿಗೆ ವ್ಯಂಜನಗಳೆಂದು ಕರೆಯುತ್ತಾರೆ.

Continue Reading

Kannada Grammar

ಕನ್ನಡ ವ್ಯಾಕರಣದ ಸ್ವರಗಳು |kannada varnamale swaragalu

Published

on

By

ಕನ್ನಡ ವ್ಯಾಕರಣದ ಸ್ವರಗಳು,ಹೃಸ್ವಸ್ವರ,ದೀರ್ಘಸ್ವರ,ಪ್ಲುತಸ್ಪರಗಳು ( kannada varnamale,swaragalu,vyakarana,rasvaswara, dhirgaswara, plutaswara in kannada)

Swaragalu-kannada vyakarana
ಸ್ವರಗಳು

ಕನ್ನಡ ಭಾಷೆಯು ಅತಿ ಹಳೆಯ ಭಾಷೆಯಾಗಿದೆ. ಕನ್ನಡದಲ್ಲಿ ಒಟ್ಟು ವರ್ಣಮಾಲೆಗಳ ಸಂಖ್ಯೆ 49 ಆಗಿದೆ.

ಕನ್ನಡ ವರ್ಣ ಮಾಲೆಯನ್ನು ಮೂರು ಭಾಗವಾಗಿ ವಿಭಾಗಿಸಲಾಗಿದೆ.

1) ಸ್ವರಗಳು 2) ವ್ಯಂಜನಗಳು 3) ಯೋಗವಾಹಗಳು

ಕರ್ನಾಟಕ ಸರ್ಕಾರ ನಡೆಸುವ ಎಲ್ಲಾ ಪರೀಕ್ಷೆಯಲ್ಲಿ ಕನ್ನಡ ವ್ಯಾಕರಣ ಬಗ್ಗೆ ಕೇಳೆ ಕೇಳ್ತಾರೆ ಅದಕ್ಕಾಗಿ ನಾವು ಇವತ್ತು ಕನ್ನಡ ವ್ಯಾಕರಣದ ಅತಿ ಮುಖ್ಯವಾದ ವಿಷಯ ಬಗ್ಗೆ ತಿಳಿಸಲು ಹೊರಟಿದ್ದೇನೆ, ಅದುವೆ ಸ್ವರಗಳು.

ಇದರ ಬಗ್ಗೆ ಇನ್ನಷ್ಟು ತಿಳಿಯಿರಿ.

ಸ್ವರಗಳು

ಸ್ವತಂತ್ರ ಅಸ್ತಿತ್ವವನ್ನು ಹೊಂದಿದ ಅಥವಾ ಸ್ವತಂತ್ರವಾಗಿ ಉಚ್ಚರಿಸಲ್ಪಡುವಂತಹ ವರ್ಣಮಾಲೆಗಳಿಗೆ “ಸ್ವರಗಳು” ಎನ್ನುವರು.

 • ಸ್ವರಗಳ ಒಟ್ಟು ಸ್ವರಗಳ ಸಂಖ್ಯೆ 13.

ಉದಾ: ಅ,ಆ,ಇ,ಈ,ಉ,ಊ,ಋ,ಎ,ಏ,ಐ,ಒ,ಓ,ಔ

ಸ್ವರಗಳಲ್ಲಿಯೂ ಕೂಡ ಮೂರು ಪ್ರಕಾರಗಳಿವೆ. ಅವು

1 ) ಹೃಸ್ವಸ್ವರ – 6
2)ದೀರ್ಘಸ್ವರ – 7
3) ಪ್ಲುತಸ್ಪರ

1 ) ಹೃಸ್ವಸ್ವರ

ಒಂದೆ ಮಾತ್ರ ಕಾಲಾವಧಿಯಲ್ಲಿ ಉಚ್ಚರಿಸಲ್ಪಡುವಂತಹ ಸ್ವರಗಳನ್ನು ಹಸ್ವಸ್ವರ ಎನ್ನುವರು.

ಹೃಸ್ವಸ್ವರಗಳ ಒಟ್ಟು ಸಂಖ್ಯೆ 6.
ಉದಾ: ಅ, ಇ, ಉ, ಋ, ಎ, ಒ .

2)ದೀರ್ಘಸ್ವರ

ಎರಡು ಮಾತ್ರ ಕಾಲಾವಧಿಯಲ್ಲಿ ಉಚ್ಚರಿಸಲ್ಪಡುವಂತಹ ಸ್ವರಗಳನ್ನು ದೀರ್ಘಸ್ವರ ಕರೆಯುತ್ತಾರೆ.

ದೀರ್ಘಸ್ವರಗಳ ಒಟ್ಟು ಸಂಖ್ಯೆ 7.
ಉದಾ: ಆ , ಈ, ಊ, ಋೂ, ಏ, ಐ, ಓ, ಔ,

3) ಪ್ಲುತಸ್ಪರ

ಮೂರು ಮಾತ್ರ ಕಾಲಾವಧಿಯಲ್ಲಿ ಉಚ್ಚರಿಸಲ್ಪಡುವಂತಹ ಸ್ವರಗಳನ್ನು ಪ್ಲುತಸ್ಪರ ಎನ್ನುತ್ತಾರೆ.
ಉದಾ: ಅಮ್ಮಾss ,

ಹೋಂ ಪೇಜ್: ಕನ್ನಡ ಸುದ್ದಿ

Continue Reading

Kannada Grammar

ಕನ್ನಡ ವರ್ಣಮಾಲೆ ಅಕ್ಷರಗಳು| Kannada Varnamalegalu alphabets

Published

on

By

ಇಂದು ನಾವು ಕನ್ನಡ ವರ್ಣಮಾಲೆ ಕುರಿತು ಮಾಹಿತಿ ನೀಡುತ್ತಿದ್ದೇವೆ.( Kannada varnamalegalu, kannada alphabets, charts in kannada)

ಕನ್ನಡ ವರ್ಣಮಾಲೆಯು ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತಿ ಮುಖ್ಯವಾದ ವಿಷಯವಾಗಿದೆ. ಅದಕ್ಕಾಗಿ ನೀವು ಇದರಬಗ್ಗೆ ತಿಳಿಯುವುದು ಬಹು ಮುಖ್ಯವಾಗಿದೆ.

kannada varnamale chart
ಕನ್ನಡ ವರ್ಣಮಾಲೆ ಚಾರ್ಟ್

ನಮ್ಮ ಅಭಿಪ್ರಾಯಗಳನ್ನು, ಮಾತುಗಳನ್ನು ಬೇರೆಯವರಿಗೆ ತಿಳಿಸುವುದಕ್ಕೆ ಮತ್ತು ಬೇರೆಯವರ ಅಭಿಪ್ರಾಯವನ್ನು ನಾವು ತಿಳಿದುಕೊಳ್ಳಲು ಬಳಸುವ ಮಾಧ್ಯಮಕ್ಕೆ “ಭಾಷೆ” ಎಂದು ಕರೆಯುತ್ತಾರೆ.

ಹಲ್ಮಿಡಿ ಶಾಸನದ ಪ್ರಕಾರ ಕನ್ನಡ ಭಾಷೆಗೆ ಸುಮಾರು 2500 ವರ್ಷಗಳ ಇತಿಹಾಸವಿದ್ದು, ಇದು ಜಗತ್ತಿನ ಅತಿ ಹಳೆಯ ಭಾಷೆಗಳಲ್ಲಿ 3ನೇ ಸ್ಥಾನದಲ್ಲಿದೆ. (ಮೊದಲಿಗೆ ಸಂಸ್ಕೃತ, ಎರಡನೇ ತಮಿಳ). ಇದು ಒಂದು ದ್ರಾವಿಡ ಭಾಷೆಯಾಗಿದೆ.

ಕನ್ನಡ ಭಾಷೆಗೆ 2008ರಲ್ಲಿ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ.

ಕನ್ನಡ ವರ್ಣಮಾಲೆ ಅಕ್ಷರಗಳು

ಕನ್ನಡ ಭಾಷೆಗೆ “ಶ್ರವಣ ಮತ್ತು ಚಾಕ್ಷುಷ” ಎಂಬ ರೂಪಗಳಿವೆ. ಇದರಲ್ಲಿ ಶ್ರವಣ ಎಂದರೆ ಧ್ವನಿಯ ಮೂಲಕ ಕಿವಿಗೆ ಕೇಳಿಸುವುದು ಮತ್ತು ಚಾಕ್ಷುಷ ಎಂದರೆ ಬರಹದ ಮೂಲಕ ಕಣ್ಣಿಗೆ ಕಾಣಿಸುವುದು ಎಂದರ್ಥ.

ಕನ್ನಡ ಭಾಷೆಯಲ್ಲಿ ಬಳಸಲಾಗುವ ಅಕ್ಷರವನ್ನು ವರ್ಣಮಾಲೆ ಎಂದು ಕರೆಯುತ್ತಾರೆ.

ಕನ್ನಡದಲ್ಲಿ ಒಟ್ಟು 49 ವರ್ಣಮಾಲೆಗಳಿವೆ.

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ
ಕ ಖ ಗ ಘ ಓ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಥ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಲ

ಕನ್ನಡ ವರ್ಣ ಮಾಲೆಯನ್ನು ಮೂರು ಭಾಗವಾಗಿ ವಿಭಾಗಿಸಬಹುದು.

Kannada vyakarana
ಕನ್ನಡ ವ್ಯಾಕರಣ

1) ಸ್ವರಗಳು.

ಸ್ವರಗಳಲ್ಲಿ ಮೂರು ಪ್ರಕಾರಗಳಿವೆ. ಅವುಗಳು

 • ಹೃಸ್ವಸ್ವರ .
 • ದೀರ್ಘಸ್ವರ .
 • ಪ್ಲುತಸ್ಪರ.

Note:- ಸ್ವರಗಳ ಬಗ್ಗೆ ಪೂರ್ತಿ ತಿಳಿಯಲು ಎಲ್ಲಿ ಒಟ್ಟು:- ಕನ್ನಡದ ಸ್ವರಗಳು.

2) ವ್ಯಂಜನಗಳು

ಈ ವ್ಯಂಜನಗಳಲ್ಲಿ ಎರಡು ವಿಧಗಳು.

 • ವರ್ಗೀಯ ವ್ಯಂಜನಗಳು.
 • ಅವರ್ಗೀಯ ವ್ಯಂಜನಗಳು.

3) ಯೋಗವಾಹಗಳು

ಯೋಗವಾಹಗಳು ಇದರಲ್ಲಿ ಎರಡು ಪ್ರಕಾರಗಳಿವೆ.

 • ಅನುಸ್ವರ (0)
 • ವಿಸರ್ಗ (ಃ)

ವ್ಯಂಜನ ಮತ್ತು ಯೋಗವಾಹಗಳ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲ ಇಲ್ಲಿ ಒತ್ತಿ: ಕನ್ನಡದ ವ್ಯಂಜನಗಳು.

ಹೋಮ್ ಪೇಜ್ : ಕನ್ನಡ ನ್ಯೂಸ್

Continue Reading

Trending

%d bloggers like this: