ಇಂದು ರಾಷ್ಟ್ರೀಯ ಶಿಕ್ಷಣ ದಿನ ಇದನ್ನೂ ಏಕೆ ಆಚರಿಸಲಾಗುತ್ತದೆ?| Today is National Education Day Why it is celebrating on November 11? Kannada News

ಇಂದು ರಾಷ್ಟ್ರೀಯ ಶಿಕ್ಷಣ ದಿನ ಇದನ್ನೂ ಏಕೆ ಆಚರಿಸಲಾಗುತ್ತದೆ?| Today is National Education Day Why it is celebrating on November 11? Kannada News

ಭಾರತದಲ್ಲಿ ಪ್ರತಿ ವರ್ಷ ನವೆಂಬರ್ 11ರಂದು ‘ರಾಷ್ಟ್ರೀಯ ಶಿಕ್ಷಣ ದಿನ’ವೆಂದು ಆಚರಣೆ ಮಾಡಲಾಗುವುದು,ಈ ದಿನವೂ ಅಬ್ದುಲ್ ಕಲಾಂ ಆಜಾದ್ ಅವರು ಹುಟ್ಟಿದ ದಿನವಾಗಿದೆ ಅವರು ಭಾರತದ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ನೆನಪಿಟ್ಟುಕೊಳ್ಳುವುದಕ್ಕೆ ಈ ದಿನವನ್ನು 2008 ರಿಂದ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಸರ್ಕಾರ ಆಚರಿಸುತ್ತಿದೆ. 

ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿ ಆಗಸ್ಟ್ 15, 1947 ರಿಂದ ಫೆಬ್ರುವರಿ 2,1958 ವರೆಗೆ ಸೇವೆ ಸಲ್ಲಿಸಿದ್ದಾರೆ. ಮೌಲಾನಾ ಆಜಾದ್ ಅವರು ಬರಹಗಾರ ಸ್ವತಂತ್ರ ಹೋರಾಟಗಾರ ಮತ್ತು ರಾಷ್ಟ್ರೀಯ ಕಾಂಗ್ರೆಸ್ ನ ಹಿರಿಯ ನಾಯಕರಾಗಿದ್ದವರು. ಇವರಿಗೆ ಭಾರತ ಸರ್ಕಾರವು ಭಾರತಕ್ಕೆ ಕೊಟ್ಟ ಕೊಡುಗೆಯಿಂದಾಗಿ 1992 ರಂದು ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು.

ಈ ಸಮಯದಲ್ಲಿ ಅವರು ಭಾರತ ಶಿಕ್ಷಣ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿದ್ದರು ಅವರ ಈ ಕೊಡುಗೆಯನ್ನು ನೆನಪಿಟ್ಟುಕೊಳ್ಳುವುಕ್ಕಾಗಿ ಸೆಪ್ಟೆಂಬರ್ 11 ,2008 ರಂದು ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಅವರ ಜನ್ಮ ದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲೂ ಪ್ರಾರಂಭಮಾಡಿತು.

ಮೌಲಾನಾ ಆಜಾದ್ ಅವರು ಹುಟ್ಟಿದ್ದು ನವೆಂಬರ್ 11, 1888 ಮೆಕ್ಕಾದಲ್ಲಿ ( ಈಗಿನ ಸೌದಿ ಅರೇಬಿಯಾದ ಪ್ರದೇಶ). ಮೌಲಾನಾ ಅವರ ಪೂರ್ಣ ಹೆಸರು ‘ಸಯ್ಯದ್ ಗುಲಾಂ ಮುಹಿಯುದ್ದೀನ್ ಅಹ್ಮದ್ ಬಿನ್ ಖೈರುದ್ದೀನ್ ಅಲ್ ಹುಸೇನಿ’ ಆದರೆ ಎಲ್ಲರೂ ಇವರನ್ನು ಮೌಲಾನಾ ಅಬುಲ್ ಕಲಾಂ ಆಜಾದ್ ಎಂದು ಕರೆಯುವರು.’ಮೌಲಾನಾ’ ಎಂದರೆ ‘ನಮ್ಮ ಶಿಕ್ಷಕರು’ ಎಂದರ್ಥ ಕೊಟ್ಟರೆ ‘ಆಜಾದ್’ ಎಂದು ಅವರು ತಮ್ಮ ಕಾವ್ಯನಾಮ ಎಂದು ಇಟ್ಟುಕೊಂಡಿದ್ದರು.

ಆಜಾದ್ ಅವರ ತಂದೆ ಮುಸ್ಲಿಂ ವಿದ್ವಾಂಸರು ಮತ್ತೂ ಅವರ ಹೆಸರು ‘ಮುಹಮ್ಮದ್ ಕೈರುವುದ್ದಿನ್ ಬಿನ್ ಅಹ್ಮದ್ ಅಲ್ ಹುಸೇನಿ’ ಹಾಗು ತಾಯಿ ಹೆಸರು ‘ ಖೆರಾ ಅಲಿಯಾ ಬಿಂತ್ ಮೊಹಮದ್’.

Leave a Comment