Bestie meaning in Kannada|Bestie ಯ ಅರ್ಥ ಕನ್ನಡದಲ್ಲಿ

Bestie ಎಂಬ ಪದವು ಆಂಗ್ಲ ಭಾಷೆಯಿಂದ ಎರವಲು ಪಡೆದಿದ್ದು ಇದು ‘ಆಪ್ತಮಿತ್ರ’ನೆಂದು ಅರ್ಥಕೊಡುತ್ತದೆ. ಈ ಪದವನ್ನು ತುಂಬಾ ಹತ್ತಿರದ ಜೀವಕ್ಕೆ ಜೀವ ಕೊಡುವ ಗೆಳೆಯ ಅಥವಾ ಗೆಳತಿಗಾಗಿ ಬಳಸಲಾಗುತ್ತದೆ.

ಈ ಪದದ ಸರಳವಾದ ಅರ್ಥ ಆಪ್ತಮಿತ್ರ, ಹತ್ತಿರದ ಸ್ನೇಹಿತ ಎಂದು ಅರ್ಥಕೊಡುತ್ತದೆ ಹಾಗೆ ಈ ಪದವನ್ನು ಇವತ್ತಿನ ದಿನಗಳಲ್ಲಿ ತುಂಬಾ ಬಳಸಲಾಗುತ್ತದೆ.

Bestie meaning in Kannada

  • ಆಪ್ತಮಿತ್ರ
  • ಹತ್ತಿರದ ಸ್ನೇಹಿತ
  • ಕುಚುಕು
  • ಗೆಳೆಯ
  • ತುಂಬಾ ದಿನದಿಂದ ನಿಮಗೆ ಹತ್ತಿರವಾದ ವ್ಯಕ್ತಿ
  • ಚಿಕ್ಕಂದಿನಿಂದ ಜೊತೆಗಿರುವ ಆಪ್ತಸ್ನೇಹಿತ
  • ಏನೇ ಕೆಲಸವಿರಲಿ ಅದನ್ನು ಬಿಟ್ಟು ನೀವು ಕರೆದಾಗಲೆಲ್ಲ ಬರುವ ಸ್ನೇಹಿತ

ನಿಮಗೆ ಈ ಶಬ್ದದ ಅರ್ಥ ತಿಳಿದಿದೆ ಎಂದುಕೊಳ್ಳುತ್ತೇನೆ, ಒಂದು ಶಬ್ದಕ್ಕೆ ಎಷ್ಟು ಅರ್ಥಗಳಿವೆ ಮತ್ತು ಈ ವ್ಯಕ್ತಿ ಒಬ್ಬ ವ್ಯಕ್ತಿಗೆ ತುಂಬಾ ಹತ್ತಿರವಾದವನು. ಒಬ್ಬ ವ್ಯಕ್ತಿಗೆ ಒಬ್ಬ ಒಳ್ಳೆಯ ಸ್ನೇಹಿತ ಆಪ್ತಮಿತ್ರ ಇದ್ದೆ ಇರುತ್ತಾನೆ, ಯಾವಾಗ ಕರೆದರೂ ನಿಮ್ಮ ಹತ್ತಿರ ಓಡಿ ಬರುತ್ತಾನೆ.

Bestie ಯಾರು?

ಒಂದು ರೀತಿಯಿಂದ ನೋಡುವುದಾದರೆ ಎಲ್ಲರ ಜೀವನದಲ್ಲಿ ಅನೇಕ ಗೆಳೆಯರು ಗೆಳೆತಿಯರು ಇದ್ದೆ ಇರುತ್ತಾರೆ, ನಿಮ್ಮ ಜೀವನದಲ್ಲಿ ಗೆಳೆಯ ನಿಮಗೆ ಗೊತ್ತಾ ಅಥವಾ ಗೊತ್ತಿಲ್ಲದೆ ಗೆಳೆಯರಾಗಿ ಇರುತ್ತಾರೆ. ಆದರೆ ಅವರನ್ನು ನಾವು ಬೇಸ್ಟಿ ಅಂತ ಹೇಳುವುದಿಲ್ಲ ಏಕೆಂದರೆ ಅವರು ನಮ್ಮ ಜೀವನದಲ್ಲಿ ಕೇವಲ ಒಬ್ಬ ಗೆ ಳೆಯರಸ್ಟೆ.

ಯಾರು ನಮ್ಮನ್ನು ತುಂಬಾ ಕಾಡಿಸುತ್ತಾರೆ, ಅಳಿಸುತ್ತಾರೆ, ಮತ್ತು ನಾವು ಕಷ್ಟದಲ್ಲಿದ್ದಾಗ ಮೊದಲು ಬಂದು ನಿಲ್ಲುವ ಏಕೈಕ ವ್ಯಕ್ತಿ ಅದು ನಮ್ಮ ಆಪ್ತಮಿತ್ರ ಗೆಳೆಯ.

Bestie ಆಂಗ್ಲ ಭಾಷೆಯಲ್ಲಿ ಅರ್ಥ

  • True Friend
  • close friend
  • Best friend
  • A person you can trust.

ಹೋಂ ಪೇಜ್: ಕನ್ನಡ ಸುದ್ದಿ

Admin: