PFI ಎಂದರೇನು (ಪೂರ್ಣ ರೂಪ) PFI Raid (PFI Full form, Latest News, PFI Ban, State Name)

ಪಿಎಫ್ಐ ಎಂದರೇನು, ಪಿಎಫ್ಐ ಪೂರ್ಣ ರೂಪ, ಪಿಎಫ್ಐ ಮೀನಿಂಗ್, ಪಿಎಫ್ಐ ನ್ಯೂಸ್, ಪಿಎಫ್ಐ ನಿಷೇಧಿಸದ, ಪಿಎಫ್‌ಐ ನಾಯಕ, ಪಿಎಫ್ಐ ಮುಖ್ಯ ಉದ್ದೇಶ, ಪಿಎಫ್ಐ ರೈಡ್, (PFI full form in Kannada, meaning of PFI, PFI ban in india, PFI ban in Karnataka, PFI news, PFI latest news, PFI founder, PFI leader, aim of PFI, PFI Raid, PFI News in Kannada)

ಎನ್ಐಎ ದೇಶದ ವಿವಿಧ ರಾಜ್ಯಗಳಲ್ಲಿ ಪಿಎಫ್ಐ ಆಫೀಸ್ ಗಳ ಮೇಲೆ ದಾಳಿ ನಡೆಸಿದೆ. ಇದರಲ್ಲಿ ಒಟ್ಟು 16 ಜನರನ್ನು ಬಂಧಿಸಲಾಗಿದ್ದು ಇನ್ನೂ ಕೆಲವು ರಾಜ್ಯಗಳ ಮೇಲೆ ದಾಳಿ ನಡೆಸಬಹುದೆಂದು ವರದಿಗಳಾಗಿವೆ. PFI ಮುಸ್ಲಿ ಯುವಕರನ್ನು ಭಯೋತ್ಪಾದನೆಯ ಸಂಘಟನೆಗಳಾದ, ಲಷ್ಕರ್ ಈ ತೈಬಾ ಮತ್ತು ISIS ಸೇರಲು ಪ್ರಚೋದಿಸುತ್ತಿದೆ ಎಂದು ಎನ್ಐಎ ಹೇಳಿದೆ. ಇದರ ಬಗ್ಗೆ ಇನ್ನಷ್ಟು ತಿಳಿಯಿರಿ.

pfi-full-form-latest-news-kannada
PFI Full form

PFI ಎಂದರೇನು ಮತ್ತು ಅದರ ಪೂರ್ಣ ರೂಪ [PFI Full Form In Kannada]


ಪಿಎಫ್ಐನ ಪೂರ್ಣ ರೂಪ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಇದು ಒಂದು ಭಾರತೀಯ ಇಸ್ಲಾಮಿಕ್ ರಾಜಕೀಯ ಸಂಘಟನೆಯಾಗಿದೆ. ಇದು ಮುಸ್ಲಿಂ ಅಲ್ಪಸಂಖ್ಯಾತರ ಹಕ್ಕು ರಕ್ಷಿಸುವುದು, ತನ್ನ ಹಕ್ಕಿಗಾಗಿ ಹೊರಡುವ ಗುರಿಯನ್ನು ಹೊಂದಿದೆ.

ಇದನ್ನು 2006 ರಲ್ಲಿ, ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (KFD) ಮತ್ತು ನ್ಯಾಷನಲ್ ಡೆವಲಪ್‌ಮೆಂಟ್ ಫ್ರಂಟ್ (NDF) ವಿಲೀನದೊಂದಿಗೆ ಪ್ರಾರಂಭ ಮಾಡಲಾಯಿತು.

ಇದರ ಮುಖ್ಯ ಕಚೇರಿ, ನವದೆಹಲಿಯ G-66, 2ನೇ ಮಹಡಿ, ಶಾಹೀನ್ ಬಾಗ್ ಕಾಳಿಂದಿಕುಂಜ್, ನೋಯ್ಡಾ ರಸ್ತೆಯ ಬದಿಯಲ್ಲಿದೆ. ಇದರ ಅಧ್ಯಕ್ಷ ಅಬ್ದುಲ್ ಸಲಾಂ, ಉಪಾಧ್ಯಕ್ಷರು ಇ.ಎಂ.ಅಬ್ದುಲ್ ರಹಿಮಾನ್ ಎಂದು ಹೇಳಲಾಗುತ್ತಿದೆ.

ಪಿಎಫ್‌ಐ ನ ನಾಯಕನ ಯಾರು? (Leader of PFI)

PFI ನ ಮುಖಂಡನ ಹೆಸರು ಅಬೂಬಕರ್ ಸಿದ್ದಿಕ್. ಆರ್‌ಎಸ್‌ಎಸ್ ಮುಖಂಡ ಶ್ರೀನಿವಾಸ್ ನ ಹತ್ಯೆಯಲ್ಲಿ ಇವನ ಕೈವಾಡವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತದಲ್ಲಿ PFI ನಿಷೇಧಿಸಲಾಗಿದೆಯೇ? [ಪಿಎಫ್ಐ ನಿಷೇಧಿಸಲಾಗಿದೆ?


ಇದರ ಬಗ್ಗೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಎಎಸ್ ಬೋಪಣ್ಣ ಅವರು ಪಿಎಫ್ಐ ಅನ್ನು ಕೆಲವು ರಾಜ್ಯ ಸರ್ಕಾರಗಳು ನಿಷೇಧಿಸಿವೆ ಮತ್ತು ಇನ್ನೂ ಕೆಲವು ರಾಜ್ಯ ಸರ್ಕಾರಗಳು ಇದನ್ನು ನಿಷೇಧಿಸುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು. ಕೇಂದ್ರ ಗೃಹ ಸಚಿವಾಲಯ ಪಿಎಫ್‌ಐ ನಿಷೇಧಿಸುವಂತೆ ಸಭೆ ನಡೆಸಲಾಗಿದೆ, ಆದರೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಮಿಷನ್ 2047ರ ಮುಖ್ಯ ಉದ್ದೇಶ ಏನಾಗಿದೆ? (Purpose of Mission 2047)


PFI ನ ಮುಖ್ಯ ಉದ್ದೇಶ 2047 ರ ಒಳಗೆ ಭಾರತವನ್ನು ಇಸ್ಲಾಂ ದೇಶವನ್ನಾಗಿ ಮಾಡುವುದು. ಇದಕ್ಕಾಗಿ ದೇಶದ ಎಲ್ಲಾ ಮುಸ್ಲಿಂ ಜನರನ್ನು ಒಟ್ಟುಗೂಡಿಸುವುದು. ದೇಶದ ವಿವಿಧ ಮುಸ್ಲಿಂ ಸಮುದಾಯದ ಜನರನ್ನು ಆಯ್ಕೆ ಮಾಡಿ ಅವರಿಗೆ ವಿಶೇಷ ತರಬೇತಿ ನೀಡಿ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡುವುದು ಮುಖ್ಯ ಕಾರಣ. ಇದಕ್ಕಾಗಿ ಆನೇಕ ರೀತಿಯ ಯೋಜನೆ ಕೂಡ ಮಾಡಲಾಗಿದೆ.

ಮಿಷನ್ 2047 ರ ತರಬೇತಿ ಶಿಬಿರದಲ್ಲಿ ಏನು ಕಂಡುಬಂದಿದೆ?


ಪೋಲಿಸರು ತರಬೇತಿ ಶಿಬಿರದ ಮೇಲೆ ದಾಳಿಮಾಡಿದಾಗ, ಅಲ್ಲಿ ಪಿಎಫ್‌ಐ ಹೋರಾಟದ ಪ್ರಚೋದನಕಾರಿ ಭಾಷಣಗಳು, ಪುಸ್ತಕಗಳು ಮತ್ತು ಅವರ ಮುಂದಿನ ಯೋಜನಗಳ ಕಾಗದವೂ ದೊರಕಿವೆ.

ಮಿಷನ್ 2047 ಯಾವ ಯಾವ ರಾಜ್ಯಗಳಲ್ಲಿ ಹರಡಿದೆ?


ಮಿಷನ್ 2047 ತರಬೇತಿ ಶಿಬಿರಗಳು ಅನೇಕ ರಾಜ್ಯಗಳಲ್ಲಿ ಹರಡಿದ್ದು ಅದರಲ್ಲಿ ಅವರ ಚಟುವಟಿಕೆಗಳು ತಮಿಳುನಾಡು, ಕೇರಳ, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ ಮತ್ತು ಕರ್ನಾಟಕದಲ್ಲಿ ಹರಡಿದೆ.

ಮಿಷನ್ 2047 ರಲ್ಲಿ ತರಬೇತಿಯನ್ನು ಏನೂ ನಡೆಯುತ್ತದೆ?


ಒಂದು ವರದಿಯ ಪ್ರಕಾರ, ಫುಲ್ವಾರಿ ಶರೀಫ್‌ನಲ್ಲಿ ಮಾರ್ಷಲ್ ಆರ್ಟ್ಸ್ ತರಬೇತಿಗಾಗಿ ಶಿಬಿರವನ್ನು ಸ್ಥಾಪಿಸಲಾಯಿತು. ತರಬೇತಿಯಲ್ಲಿ ಅನೇಕ ರೀತಿಯ ಪ್ರಚೋದನೆಕಾರಿ ಘೋಷಣೆಯನ್ನು ಮಾಡುವುದರ ಜೊತೆಗೆ, ಈ ಶಿಬಿರದಲ್ಲಿ ಜನರಿಗೆ ಕತ್ತಿ, ಚಾಕು ಮತ್ತು ಶಶಸ್ತ್ರ ಹಿಡಿಯಲು ತರಬೇತಿ ನೀಡಲಾಗುತ್ತದೆ.

ಮಿಷನ್ 2047 ಗೆ ಹಣ ಎಲ್ಲಿಂದ ಬರುತ್ತದೆ? (Mission 2047 Funding)


ಮಿಷನ್ 2047 ಗೆ ಹಣ ನಮ್ಮ ಪಕ್ಕದ ದೇಶ ಪಾಕಿಸ್ತಾನ ಮತ್ತು ಟರ್ಕಿಯಿಂದ ಹರಿದು ಬರುತ್ತಿದೆ.ಇಲ್ಲಿಯವರೆಗೆ ಒಟ್ಟು 83 ಲಕ್ಷ ರೂಪಾಯಿಗಳು ಮೂರು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ವರದಯಾಗಿದೆ. ಇದು ಒಂದು ಆತಂಕಕಾರಿ ಸಂಗತಿಯಾಗಿದ್ದು ಇದನ್ನು ಈಗಲೇ ತಡೆಯದಿದ್ದರೆ ಮುಂದೆ ದೊಡ್ಡ ಅಪಾಯ, ಸಮಸ್ಯೆಗಳು ಉಂಟುಮಾಡುತ್ತದೆ ಎಂದೂ ಪೋಲೀಸರು ತಿಳಿಸಿದ್ದಾರೆ.

ಪಿಎಫ್ಐ ರೈಡ್ [PFI Raid]


ಇತ್ತೀಚೆಗೆ NIA ಮತ್ತು ED ಜೊತೆ ಸೇರಿ, ತಿರುವನಂತಪುರಂನ PFI ಸ್ಥಳದ ಮೇಲೆ ನಡೆಸಿದೆ, ಈ ದಾಳಿಯಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ವಿಪಿ ನಜ್ರುದ್ದೀನ್, ಪಿಎಫ್‌ಐನ ಕೇರಳ ರಾಜ್ಯ ಮುಖ್ಯಸ್ಥ ಮೊಹಮ್ಮದ್ ಬಶೀರ್, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪಿ ಕೋಯಾ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಇದರ ಬೆನ್ನಲ್ಲೇ ಹಲವಾರು ರಾಜ್ಯದ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.ಈ ರಾಜ್ಯಗಳ ಪಟ್ಟಿಯಲ್ಲಿ ಮಧ್ಯಪ್ರದೇಶ, ಮಹರಾಷ್ಟ್ರ, ಕರ್ಣಾಟಕ, ದೆಹಲಿ ರಾಜ್ಯಗಳು ಸೇರಿದಂತೆ ಒಟ್ಟು 100 ಸ್ಥಳಗಳು ಸೇರಿವೆ.

ಎಷ್ಟು ಜನರನ್ನು ಮತ್ತು ಯಾವ ರಾಜ್ಯದಲ್ಲಿ ಬಂಧಿಸಲಾಗಿದೆ?


ಕರ್ನಾಟಕದಲ್ಲಿ 20 ಜನ ಸೇರಿದಂತೆ, ಮಹಾರಾಷ್ಟ್ರದಲ್ಲಿ 20, ಕೇರಳದಲ್ಲಿ 22, ತಮಿಳುನಾಡಿದಲ್ಲಿ 10, ಅಸ್ಸಾಂನಲ್ಲಿ 9, ಉತ್ತರ ಪ್ರದೇಶದಲ್ಲಿ 8, ಆಂಧ್ರಪ್ರದೇಶದಲ್ಲಿ 5, ಮಧ್ಯಪ್ರದೇಶದಲ್ಲಿ 4, ದೆಹಲಿಯಲ್ಲಿ 3, ರಾಜಸ್ಥಾನದಲ್ಲಿ 2 ಜನರನ್ನು ಪೋಲಿಸರು ಬಂಧಿಸಿದ್ದಾರೆ.

ಕರ್ನಾಟಕದಲ್ಲಿ ಪಿಎಫ್ಐ ನಿಷೇಧಿಸಲಾಗುತ್ತದೆಯೆ?(Is PFI banned in Karnataka?)


ಇದರ ಬಗ್ಗೆ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿದ್ದು, ಪಿಎಫ್‌ಐ ಸಂಘಟನೆಯನ್ನು ನಿಷೇಧಿಸುವ ಮಾತುಕತೆ ನಡೆದಿದ್ದು, ಇದರ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

FAQ

PFI ಎಂದರೇನು?
PFI, ಮುಸ್ಲಿಮರು ಮತ್ತು ದಲಿತರಿಗಾಗಿ ಕೆಲಸ ಮಾಡುವ ಒಂದು ಸಂಘಟನೆಯಾಗಿದೆ.

PFI ಗೆ ಹಣ ಎಲ್ಲಿಂದ ಬರುತ್ತಿದೆ?
ಟರ್ಕಿ ಮತ್ತು ಪಾಕಿಸ್ತಾನದಿಂದ ಪಿಎಫ್‌ಐಗೆ ಹಣ ಬರುತ್ತಿದೆ.

Home Page:- The Kannada News

Leave a Comment

%d bloggers like this: