Supreme Court On Freebies:ಚುನಾವಣಾ ಸಮಯದಲ್ಲಿ ಉಚಿತ ವಿತರಣೆ ಆರ್ಥಿಕತೆಗೆ ಹಾನಿ ಮಾಡುವ ಗಂಭೀರ ವಿಷಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ

ಸುಪ್ರೀಂ ಕೋರ್ಟ್ ಗುರುವಾರ (ಆಗಸ್ಟ್ 11)ರ0ದು, ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ಉಚಿತ ವಿತರಣೆ ಮತ್ತು ನಂತರ ಭರವಸೆ ನೀಡುವುದು ಆರ್ಥಿಕತೆಗೆ ಹಾನಿ ಮಾಡುವ ಗಂಭೀರ ವಿಷಯವಾಗಿದೆ ಎಂದು ಹೇಳಿದೆ.

Supreme Court of India/Img Credit: Wikipedia

ಚುನಾವಣಾ ಸಂದರ್ಭದಲ್ಲಿ ಮತದಾರರನ್ನು ಮತದಾರರನ್ನು ಓಲೈಸಲು ಉಚಿತ ಸೌಲಭ್ಯಗಳ ಭರವಸೆ ನೀಡುವ ರಾಜಕೀಯ ಪಕ್ಷಗಳನ್ನು ನಿಷೇಧಿಸಬೇಕೆಂದು, ಕೋರಿ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅರ್ಜಿ ಸಲ್ಲಿಸಿದ್ದಾರೆ.

ರಾಜಕೀಯ ಪಕ್ಷಗಳು ನೀಡುವ ಚುನಾವಣಾ ಪ್ರಣಾಳಿಕೆಗಳನ್ನು ನಿಯಂತ್ರಿಸಲು ಮತ್ತು ಅದರಲ್ಲಿ ನೀಡಿದ ಭರವಸೆಗಳಿಗೆ ರಾಜಕೀಯ ಪಕ್ಷಗಳನ್ನು ಹೊಣೆಗಾರರನ್ನಾಗಿ ಮಾಡಲು ಕಟ್ಟುನಿಟ್ಟಾದ ಕ್ರಮಗಳನ್ನು ಅರ್ಜಿಯಲ್ಲಿ ಕೋರಲಾಗಿದೆ.

ಬಾರ್ ಆ್ಯಂಡ್ ಬೆಂಚ್ ಹೇಳುವ ವರದಿ ಪ್ರಕಾರ, ಇದು ಒಂದು ಗಂಭೀರ ಸಮಸ್ಯೆ ಎಂದು ಯಾರೂ ಹೇಳುವುದಿಲ್ಲ,ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳುತ್ತಿದ್ದಾರೆ. ಸ್ವೀಕರಿಸುವವವರು ಇವೆಲ್ಲ ಕಲ್ಯಾಣ ಯೋಜನೆಗಳು ಎನ್ನುತ್ತಾರೆ,ಮತ್ತೆ ಇನ್ನು ಕೆಲವರು ಅವರು ತೆರಿಗೆ ಪಾವತಿಸುತ್ತಿದ್ದಾರೆ, ಆದರೆ ಇದು ಒಂದು ಗಂಭೀರ ವಿಚಾರಯಾಗಿದೆ.ಮತ್ತು ಎರಡೂ ಸಮಿತಿಗಳು ಈ ವಿಚಾರವನ್ನು ಪರಿಶೀಲನೆ ನಡೆಸಲಿವೆ.

ಭಾರತವು ಒಂದು ಬಡ ದೇಶವಾಗಿದ್ದು , ಹಸಿದವರ ದಾಹವನ್ನು ತೀರಿಸಿಸಲು ಕೇಂದ್ರ ಸರ್ಕಾರ ಅನೇಕ ಯೋಜನೆಯನ್ನು ಹಾಕಿಕೊಂಡಿದೆ, ಮತ್ತೊಂದೆಡೆ ಉಚಿತ ಯೋಜನೆಗಳಿಂದ ಆರ್ಥಿಕತೆಯು ಕುಸಿಯುತ್ತಿದೆ, ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು, ಈ ಅರ್ಜಿಯ ಮುಂದಿನ ವಿಚಾರಣೆಯನ್ನು ಆಗಸ್ಟ್ 17 ರಂದು ನ್ಯಾಯಾಲಯ ನಡೆಸಲಿದೆ.

ಇದಕ್ಕಿಂತಲೂ ಮೊದಲು ಆಮ್ ಆದ್ಮಿ ಪಕ್ಷವು ಮೊದಲು ವಿರೋಧಿಸಿತ್ತು, “ಅರ್ಹ ಮತ್ತು ಅನನುಕೂಲಕರ ಜನಸಾಮಾನ್ಯರ ಸಾಮಾಜಿಕ ಆರ್ಥಿಕ ಕಲ್ಯಾಣಕ್ಕಾಗಿ ಯೋಜನೆಗಳನ್ನು ‘ಉಚಿತ’ ಎಂದು ವಿವರಿಸಲಾಗುವುದಿಲ್ಲ” ಎಂದು ಹೇಳಿಕೆ ನೀಡಿದ್ದರು. ಅರ್ಜಿದಾರರು ಬಿಜೆಪಿಯೊಂದಿಗೆ “ಬಲವಾದ ಸಂಪರ್ಕ” ಹೊಂದಿದ್ದಾರೆ ಎಂದು ಪಕ್ಷವು ಆರೋಪಿಸಿದೆ. ನಿರ್ದಿಷ್ಟ ರಾಜಕೀಯ ಕಾರ್ಯಸೂಚಿಯನ್ನು ಅನುಸರಿಸಲು ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.”

Admin: