ಸ್ವಾಮಿ ವಿವೇಕಾನಂದರ ಜಯಂತಿ: ಅವರ ಕೆಲವು ನುಡಿ ಮುತ್ತುಗಳು

ಪ್ರತಿ ವರ್ಷ 12 ಜನೆವರಿ ಎಂದು ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಗುವುದು.

Swami vivekananda (Img Credit: Google)

ಸ್ವಾಮಿ ವಿವೇಕಾನಂದರ ಒಬ್ಬ ತತ್ವಜ್ಞಾನಿ ಮತ್ತು ನಮ್ಮ ಭಾರತದ ಸಂಸ್ಕೃತಿ ಮತ್ತು ಹಿಂದು ಧರ್ಮ ಅದರ ಸಂಸ್ಕೃತಿಯನ್ನು ಇಡೀ ವಿಶ್ವಕ್ಕೆ ತಿಳಿಸಿದ ಮಹಾನ್ ವ್ಯಕ್ತಿ. ಇವರು ರಾಮಕೃಷ್ಣ ಪರಮಹಂಸ ಅವರ ಶಿಷ್ಯರಾಗಿದ್ದವರು.

ಇವರು 12ನೆ ಜನೆವರಿ 1863 ರಲ್ಲಿ ಈಗಿನ ಕೊಲ್ಕತ್ತಾದ ಬಂಗಾಳಿ ಕುಟುಂಬದಲ್ಲಿ ಜನಿಸಿದರು. ಇದು ವಿವೇಕಾನಂದರ 153ನೆ ಹುಟ್ಟಿದ ಹಬ್ಬವಾಗಿದೆ.

ಸ್ವಾಮಿ ವಿವೇಕಾನಂದರ ಇಂದಿನ ಯುವ ಪೀಳಿಗೆ ಆದರ್ಶ ವ್ಯಕ್ತಿ ಆಗಿದ್ದಾರೆ. ಅವರು ಹೇಳಿದ ನುಡಿ ಮುತ್ತುಗಳು ಯಾರಲ್ಲೂ ಸ್ಪೃತಿ ತುಂಬುತ್ತವೆ. ಅವರ ಕೆಲವು ನುಡಿ ಮುತ್ತುಗಳು ಪಟ್ಟಿಮಾಡಿದ್ದೇವೆ.

ಸ್ವಾಮಿ ವಿವೇಕಾನಂದರ ಕೆಲವು ನುಡಿ ಮುತ್ತುಗಳು

  • ಎಳಿರಿ,ಎದ್ದೇಳಿ ಗುರಿ ಮುಟ್ಟುವರೆಗೆ ನಿಲ್ಲದಿರಿ.
  • ನಮ್ಮ ರಾಷ್ಟ್ರೀಯ ಆದರ್ಶಗಳು ತ್ಯಾಗ ಮತ್ತು ಸೇವೆ ಆದರ್ಶಗಳಲ್ಲಿ ತೊಡಗಿಸಿದರೆ ಉಳಿದವೆಲ್ಲವೂತಮಗೆ ತಾವೇ ಸರಿ ಹೋಗುತ್ತದೆ.
  • ನಿಮ್ಮೊಳಗಿರುವುದನ್ನು ಪ್ರಯತ್ನ ಪೂರ್ವಕವಾಗಿ ಹೊರ ಹೊಮ್ಮಿಸಿ. ಆದರೆ ಅನುಕರಿಸಬೇಡಿ. ಇತರರಿಂದ ಒಳ್ಳೆಯದೆಲ್ಲವನ್ನು ಸ್ವೀಕರಿಸಿ – ಅನುಕರಣೆ ಎಂದಿಗೂ ಪ್ರಗತಿಯ ಗುರುತಲ್ಲ ಅದೊಂದು ಹೀನ ಅವನತಿಯ ಚಿಹ್ನೆ.
  • ಹಿಂತಿರುಗಿ ನೋಡಬೇಡಿ, ಯಾವಾಗಲೂ ಮುನ್ನಡೆಯಿರಿ ಆನಂತ ಶಕ್ತಿ, ಉತ್ಸಹ, ಸಾಹಸ ಮತ್ತು ತಾಳ್ಳೆ ಇವುಗಳಿದ್ದರೆ ಮಾತ್ರ ಮಹತ್ಕಾರ್ಯಗಳನ್ನು ಸಾಧಿಸಲು ಸಾಧ್ಯ.

Admin: