ಓಶೋ ಗುರುವಿನ ನುಡಿಮುತ್ತುಗಳು, ಒಳ್ಳೆಯ ನುಡಿಮುತ್ತುಗಳು, ಜೀವನ ಬಗ್ಗೆ ನುಡಿಮುತ್ತುಗಳು ( Osho quotes in Kannada, osho best quotes, life quotes, inspirational quotes).
ಓಶೋ ಅವರು ಒಬ್ಬ ಜೈನ್ ಧರ್ಮ ಗುರು ಆಗಿದ್ದವರು. ಅವರ ಪೂರ್ಣ ಹೆಸರು ರಜನೀಶ್ ಓಶೋ ಆಗಿತ್ತು. ಇವರು ಭಾರತದಲ್ಲೇ ಇಲ್ಲ ಇಡೀ ವಿಶ್ವದಲ್ಲೆ ಪ್ರಖ್ಯಾತಿಯನ್ನು ಹೊಂದಿದವರು.

ಓಶೋ ಅವರು ಜನರಿಗೆ ಎಲ್ಲರನ್ನು ಪ್ರೇಮ ಭಾವನೆಯಿಂದ ನೋಡಬೇಕು ಎಲ್ಲರನ್ನೂ ಸಹಾಯ ಮಾಡಬೇಕೆಂದು ತಿಳಿಸುತ್ತಿದ್ದರು.
ಅವರ ಕೆಲವು ನುಡಿಮುತ್ತುಗಳು ಇಲ್ಲಿ ನಾವು ಪಟ್ಟಿ ಮಾಡಿದ್ದೇವೆ ಅದನ್ನು ನೋಡೋಣ ಬನ್ನಿ. ( Let’s see osho best quotes)
- ನೀವು ನಿಮ್ಮನ್ನು ಮೊದಲು ಪ್ರೀತಿಸಿ ಎಂದು ನಾನು ಹೇಳುತ್ತೇನೆ, ಏಕೆಂದರೆ ನೀವು ನಿಮ್ಮನ್ನು ಮೊದಲು ಪ್ರೀತಿಸದಿದ್ದರೆ ನೀವು ಬೇರೆಯವರನ್ನು ಪ್ರೀತಿಸಲು ಸಾಧ್ಯವೆ ಇಲ್ಲ.ನಿಮ್ಮನ್ನು ನೀವು ಪ್ರೀತಿಸದಿದ್ದರೆ ಪ್ರೀತಿ ಎಂದರೇನು ಎಂದು ನಿಮಗೆ ಗೊತ್ತೆ ಯಾಗುವುದಿಲ್ಲ.
- ಅಜ್ಞಾನಿಗಳು ಬೇರೆಯವರ ಮೇಲೆ ನಗುತ್ತಾರೆ ಆದರೆ ಜ್ಯಾನಿಗಳು ತನ್ನ ಮೇಲೆ ನಗುತ್ತಾರೆ.
- ವಿಶ್ರಾಂತಿ ಮತ್ತು ಚಲನೆಯ ನಡುವಿನ ಸಮತೋಲನೆಯೆ ಜೀವನವಾಗಿದೆ.
- ನಿಮ್ಮ ತಲೆಯಿಂದ ಹೊರಬನ್ನಿ ,ನಿಮ್ಮ ಹೃದಯದೊಳಗೆ ಹೋಗಿ, ಕಡಿಮೆ ಯೋಚಿಸಿ, ಹೆಚ್ಚು ಅನುಭವಿಸಿ.
- ನೀವು ಸಾಧ್ಯವಾದಷ್ಟು ತಪ್ಪುಗಳನ್ನು ಮಾಡಿ, ಆದರೆ ಒಂದು ವಿಷಯವನ್ನು ಮಾತ್ರ ನೆನಪಿಟ್ಟುಕೊಳ್ಳಿ ಅದು ಏನೆಂದರೆ ಮಾಡಿದ ತಪ್ಪನ್ನೇ ಮತ್ತೆ ಮಾಡಬೇಡಿ. ಆಗ ನೀವು ಬೆಳೆಯುತ್ತೀರಿ.
- ಆಯ್ಕೆ ಮಾಡಬೇಡಿ. ಜೀವನವನ್ನು ಅದು ಹೇಗಿದೆ, ಅದರ ಸಂಪೂರ್ಣತೆಯಲ್ಲಿರುವಂತೆ ಸ್ವೀಕರಿಸಿ.
- ನೀವು ಯಾವಾಗಲು ಕಮಲದ ಹೂವಿನ ಹಾಗಿರಬೇಕು, ನೀರಲಿದ್ದು ಕೂಡ ನೀರು ನಿಮ್ಮನ್ನು ಮುಟ್ಟದ ಹಾಗೆ ನೋಡಿಕೊಳ್ಳಿ.
- ನೀವು ಜೀವನದಲ್ಲಿ ಎಷ್ಟು ಕಲಿಯುತ್ತಿರಿ ಎಂಬುದು ಮುಖ್ಯವಲ್ಲ ಆದರೆ ಇದರ ವಿರುದ್ಧ ಎಸ್ಟು ಮರೆಯುತ್ತಿರಿ ಎಂಬುದು ಮುಖ್ಯವಾಗುತ್ತದೆ.
- ನಕ್ಷತ್ರವನ್ನು ನೋಡಲು ಒಂದು ನಿರ್ದಿಷ್ಟವಾದ ಕತ್ತಲು ಬೇಕಾಗುತ್ತದೆ.
- ನಾನು ಈ ಜಗತ್ತನ್ನು ತುಂಬಾ ಪ್ರೀತಿಸುತ್ತೇನೆ ಏಕೆಂದರೆ ಇದು ತುಂಬಾ ಅಪೂರ್ಣವಾಗಿದೆ.ಇದು ಅಪೂರ್ಣವಾಗಿದ್ದರಿಂದಲೆ ಇದು ಬೆಳೆಯುತ್ತಿದೆ; ಇದು ಪರಿಪೂರ್ಣವಾಗಿದ್ದರೆ ಅದು ಸತ್ತಿರುತ್ತಿತ್ತು.
- ಯಾರ ಜೊತೆಗು ಸ್ಪರ್ಧೆಯ ಅಗತ್ಯವಿಲ್ಲ, ನೀನು ನೀನೆ, ನೀನು ಹೇಗೆ ಇರು ಅದು ನೀನೆ,ನೀವು ಸಂಪೂರ್ಣವಾಗಿ ಒಳ್ಳೆಯವರು, ನಿನ್ನನು ನಿ ಒಪ್ಪಿಕೊ.
- ಯಾವಾಗ ನೀವು ನನಗೆ ಎಲ್ಲಾ ಗೊತ್ತಿದೆ ಎಂದು ಭಾವಿಸುತ್ತಿರೊ ಆವಾಗ ನಿಮ್ಮ ಸಾವು ಸಂಭವಿಸುತ್ತದೆ, ಏಕೆಂದರೆ ಈಗ ನಿಮ್ಮ ಜೀವನದಲ್ಲಿ ಯಾವುದೇ ಅದ್ಭುತ, ಸಂತೋಷ ಮತ್ತು ಆಶ್ಚರ್ಯವಿಲ್ಲ. ಈಗ ನೀವು ಸತ್ತ ಜೀವನವನ್ನು ನಡೆಸುತ್ತೀರಿ.
ಓಶೋ ಅವರ ಜೀವನ ಚರಿತ್ರೆ(Biography of Osho in Kannada) ( Life quotes od Osho)
ಹುಟ್ಟಿದ ದಿನಾಂಕ | 11 ಡಿಸೆಂಬರ್ 1931 |
ಹುಟ್ಟಿದ ಸ್ಥಳ | ಕುಚ್ವದ ಭೋಪಾಲ್ ರಾಜ್ಯ ( ಬ್ರಿಟಿಷ್ ಇಂಡಿಯಾ) |
ಧರ್ಮ | ಜೈನ್ |
ರಾಷ್ಟ್ರೀಯತೆ | ಭಾರತೀಯ |
ಶಿಕ್ಷಣ | ಯಮ್. ಏ ( M.A. philosophy) |
ಮರಣ | 19 ಜನೆವರಿ 1990 (58 ವರ್ಷ) |
ಕೊಡುಗೆ | 600 ಕ್ಕೆ ಹೆಚ್ಚಿನ ಪುಸ್ತಕ |
ಓಶೋ ಗುರು ನಿಮ್ಮನ್ನು ನೀವು ಮೊದಲು ಪ್ರಿತಿಸಿ ಎಂದು ಒತ್ತಿ ಒತ್ತಿ ಹೇಳಿದ್ದಾರೆ. ಅವರ ವಚನಗಳು, ನುಡಿಮುತ್ತುಗಳನ್ನು ತಮ್ಮ ಜೀವನದಲ್ಲಿ ಅನುಸರಿಸಿದರೆ ನಿಮ್ಮ ಜೀವನ ಸುಖಕರವಾಗುತ್ತದೆ.