ಇಡ್ಲಿ ಸಾಂಬಾರ್ ರೆಸಿಪಿ ಹೋಟೆಲ್ ಶೈಲಿಯಲ್ಲಿ|Idli sambar Recipe in Kannada

Idli sambar Recipe: ನೀವು ಯಾವತ್ತಾದರೂ ಹೊಟೇಲಿನಲ್ಲಿ ಇಡ್ಲಿ ಸಾಂಬಾರ್ ತಿಂದಿರಬಹುದು! ಆಹಾ ಎಸ್ಟು ರುಚಿಕರವಾಗಿರುತ್ತದೆ. ಇಡ್ಲಿ ಯಾರಿಗೆ ಇಸ್ಟನೊ ಅವರಿಗಂತೂ ಪಂಚಪ್ರಾಣ. ನೀವು ಎಂದಾದರೂ ಈ ಇಡ್ಲಿ ಸಾಂಬಾರ್ ಅನ್ನು ಮನೇಲಿ ಮಾಡಲು ಪ್ರಯತ್ನಿಸಿದ್ದಿರಾ ಅಥವಾ ಇದನ್ನು ಮಾಡುವ ವಿಧಾನ ನಿಮಗೆ ಗೊತ್ತಿದೆಯಾ? ಗೊತ್ತಿಲ್ಲದಿದ್ದರೆ ಇ ಪೋಸ್ಟ್ ಅನ್ನು ಚೆನ್ನಾಗಿ ಓದಿ ನಿಮಗೆ ಈ ಇಡ್ಲಿ ಸಾಂಬಾರ್ ಸುಲಭವಾಗಿ ಹೇಗೆ ಮಾಡಬಹುದು ಎಂಬುದನ್ನು ತಿಳಿಸಿದ್ದೇವೆ.

Idli sambar Recipe
ಇಡ್ಲಿ ಸಾಂಬಾರ್ ರೆಸಿಪಿ

ಇಡ್ಲಿ ಸಾಂಬಾರ್ ಮಾಡಲು ಬೇಕಾಗುವ ಸಾಮಾಗ್ರಿಗಳು (Item Required for Doing Idli sambar Recipe in Kannada)

 • ಕೊತ್ತಂಬರಿ ಬೀಜ 1/4 ಚಮಚ
 • 1 ಚಮಚ ಉದ್ದಿನ ಬೇಳೆ
 • 1 ಚಮಚ ಕಡಲೆ ಬೇಳೆ
 • ಸ್ವಲ್ಪ ಕರಿಬೇವು
 • 1 ಚಮಚ ತೆಂಗಿನ ಎಣ್ಣೆ
 • 1/4 ಜೀರಿಗೆ
 • 1 ಚಮಚ ಸಾಸಿವೆ
 • 1/2 ಚಮಚ ಮೆಂತ್ಯ
 • 15-20 ಕೆಂಪು ಮೆಣಸಿನಕಾಯಿ
 • 1/4 ಚಮಚ ಹಿಂಗ್
 • 2 ಚಮಚ ಎಣ್ಣೆ
 • 3 ಅರ್ಧಬಾಗ ಮಾಡಿದ ಈರುಳ್ಳಿ
 • 1/2 ಚಮಚ ಬೆಲ್ಲ
 • 1/2 ಬದನೆಕಾಯಿ
 • 1 ಟೊಮೆಟೊ ಹೊಳು
 • 2 ಚಮಚ ಕೊತ್ತಂಬರಿ ಸೊಪ್ಪು
 • 2 ಮೆಣಸಿನಕಾಯಿ ಹೊಲು
 • 1/4 ಚಮಚ ಅರಿಶಿನ
 • ಕತ್ತರಿಸಿದ 1/2 ಕ್ಯಾರೆಟ್ ,1 ಆಲೂಗಡ್ಡೆ, 5 ಬೀನ್ಸ್
 • 1 ಚಮಚ ಉಪ್ಪು
 • 1 ಕಪ್ ಬೇಯಿಸಿದ ತೊಗರಿ
 • 5 ತುಂಡುಗಳು ನುಗ್ಗೆ ಕಾಯಿ
 • 1 ಚಮಚ ಉಪ್ಪು
 • 3/4 ಕಪ್ ಹುಣಸೆಹಣ್ಣಿನ ಸಾರ

ಇಡ್ಲಿ ಸಾಂಬಾರ್ ಹೇಗೆ ಮಾಡ ಬೇಕು ನೋಡೋಣ (Let see How To Prepare Idli sambar Recipe in Kannada)

 • ಮೊದಲು ಒಂದು ಪ್ಯಾನ ಅಲ್ಲಿ 1 ಚಮಚ ತೆಂಗಿನ ಎಣ್ಣೆ, ಮೆಂತೆಯನ್ನೂ ಹುರಿಯಿರಿ.
 • ಆಮೇಲೆ ಕೊತ್ತಂಬರಿ ಬೀಜಗಳು, 1 ಚಮಚ ಉದ್ದಿನಬೇಳೆ, ಚಮಚ ಜೀರಿಗೆ, ಮತ್ತು 1 ಟೀಸ್ಪೂನ್ ಕಡಲೆ ಬೇಳೆ ಸೇರಿಸಿ.
 • ಸ್ವಲ್ಪ ಹೊತ್ತಿನ ಬಳಿಕ 20 ಒಣಗಿದ ಕೆಂಪು ಮೆಣಸಿನಕಾಯಿ, ಕೆಲವು ಕರಿಬೇವಿನ ಎಲೆಯನ್ನೂ ಹಾಕಿ ಮತ್ತು ಹುರಿಯಿರಿ.
 • ಮಸಾಲೆಗಳನ್ನು ಸಂಪೂರ್ಣವಾಗಿ ತಣ್ಣಗಾಗಿಸಿ ಮತ್ತು ಹಿಂಗ್ ಜೊತೆಗೆ ಬ್ಲೆಂಡರ್‌ಗೆ ಹಾಕಿ. ಗ್ರೆಂಡ್ ಮಾಡಿದ ನಂತರ ನಿಮ್ಮ ಸಾಂಬಾರ್ ಪುಡಿ ಸಿದ್ಧವಾಯಿತು.
 • ಒಂದೂ ದೊಡ್ಡ ಪ್ಯಾನ ಅಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಅದರಲ್ಲಿ ಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ, ಜಿರಗಿ ಮತ್ತು ಸಾಸಿವೆ ಹಾಕಿ ಸ್ವಲ್ಪ ಹೊತ್ತು ಹಾಗೆ ಬಿಡಿ.
 • ನಂತರ ಟೊಮೆಟೊ ಸೇರಿಸಿ ಮತ್ತು ಬೇಯಿಸುವುದನ್ನು ಮುಂದುವರಿಸಿ.
 • ಆಮೇಲೆ ಆಲೂಗಡ್ಡೆ, ಬೀನ್ಸ್,ಕ್ಯಾರೆಟ್,ಬದನೆಕಾಯಿ ಹಾಕಿ 2 ನಿಮಿಷ ಹಾಗೆ ಬಿಡಿ.
 • ನಂತರ ಮೇಲೆ ಹೇಳಿದ ಹಾಗೆ ಬೆಲ್ಲ,ಉಪ್ಪು,ಅರಿಶಿನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
 • ಇದಕ್ಕೆ ಹುಣಸಿನಕಾಯಿಯ ರಸವನ್ನು ಹಾಕಿ ಮತ್ತು ಇದಕ್ಕೆ ಮೊದಲೆ ಮಾಡಿದ ಸಾಂಬಾರ್ ಮಸಾಲ ಪದಾರ್ಥ 4 ಚಮಚ ಹಾಕಿ.
 • ಸ್ವಲ್ಪ ಹೊತ್ತಿನ ನಂತರ ಇದಕ್ಕೆ ನೀರನ್ನು ಸೇರಿಸಿ ಕುದಿಯಲು ಬಿಡಿ.
 • ಚೆನ್ನಾಗಿ ಕಲಸಿ ಚೆನ್ನಾಗಿ ಮಿಶ್ರಣ ಮಾಡಿದ ನಂತರ ಒಂದೂ ಸಲ ಟೇಸ್ಟ್ ನೋಡಿ. ಎಲ್ಲಾ ಸರಿಯಾಗಿದ್ದರೆ ಸ್ವಲ್ಪ ಸಮಯದ ನಂತರ ಗ್ಯಾಸ್ ಸಿಲಿಂಡರ್ ಅನ್ನು ಆಫ್ ಮಾಡಿ.

ಈವಾಗ ನಿಮ್ಮ ಇಡ್ಲಿ ಸಾಂಬಾರ್ ತಯ್ಯಾರಗಿದೆ ನೋಡಿ ಮತ್ತು ಇದು ಆವಾಗ ಸವಿಯಲು ಸಿದ್ಧ.

Leave a Comment