ಬಸವಣ್ಣನವರ 7 ವಚನಗಳು

ಮಾಡಿ ಮಾಡಿ ಕೆಟರು ಮನವಿಲ್ಲದೆ, ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ, ಮಾಡುವ ನೀಡುವ ನಿಜಗುಣವುಳ್ಳಡೆ ಕೂಡಿಕೊಂಬ ನಮ್ಮ ಕೂಡಲಸಂಗಮದೇವ.

ಎನಗಿಂತ ಕಿರಿಯಲ್ಲಿ ಶಿವ ಭಕ್ತರಿಗಿಂತ ಹಿರಿಯರಿಲ್ಲ ನಿಮ್ಮ ಪಾದಸಾಕ್ಷಿ ಎನ್ನ ಮನಸಾಕ್ಷಿ ಕೂಡಲಸಂಗಮದೇವ ಎನಗಿದೆ ದಿವ್ಯಾ.

ಅಯ್ಯಾ ಅಂದರೆ ಸ್ವರ್ಗ ಯಲವೊ ಅಂದರೆ ನರಕ

ದಯವಿಲ್ಲದ ಧರ್ಮವಾವುದನ್ಯೂ? ದಮವೇ ಬೇಕು ಸಕಲ ಪ್ರಾಣಿಗಳಲ್ಲೂ ದಯವೇ ಧರ್ಮದ ಮೂಲವಯ್ಯೂ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ.

ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ? ಎನ್ನೊಳಗಿದ್ದು ನಿನ್ನ ತೋರಲಿಕೆ ನೀವೇ ರೂಪಾದೆ. ಇನ್ನು ಜಂಗಮವೆ ಲಿಂಗವೆಂದು ನಂಬಿದೆ ಕೂಡಲಸಂಗಮದೇವಾ.

ತಂದೆ ನೀನು ತಾಯಿ ನೀನು, ಬಂದು ನೀನು ಬಳಗ ನೀನು. ನೀನಲ್ಲದೆ ಮತ್ತ್ಯಾರು ಇಲ್ಲವಯ್ಯಾ. ಕೂಡಲಸಂಗಮದೇವ, ಹಾಲಲದ್ದು, ನೀರಲದ್ದು.

ನುಡಿದರೆ ಮುತ್ತಿನ ಹಾರದಂತಿರಬೇಕು,ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು,ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು,ನುಡಿಯೊಳಗಾಗಿ ನಡೆಯದಿದ್ದರೆ. ಕೂಡಲಸಂಗಮದೇವನೆಂತೊಲಿವನಯ್ಯ