ಪ್ರತಿ ವರ್ಷ 12 ಜನೆವರಿ ಎಂದು ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಗುವುದು.

ಸ್ವಾಮಿ ವಿವೇಕಾನಂದರ ಕೆಲವು ನುಡಿ ಮುತ್ತುಗಳು

– ಪರಿಸ್ಥಿತಿಗಳನ್ನು ಉತ್ತಮ ಪಡಿಸಲಾಗುವುದಿಲ್ಲ. ಆದರೆ ಅವುಗಳನ್ನು ಬದಲಾಗುಸುವುದರಿಂದ ನಾವು ಉತ್ತಮರಾಗುತ್ತೇವೆ.

– ನಮ್ಮ ರಾಷ್ಟ್ರೀಯ ಆದರ್ಶಗಳು ತ್ಯಾಗ ಮತ್ತು ಸೇವೆ ಆದರ್ಶಗಳಲ್ಲಿ ತೊಡಗಿಸಿದರೆ ಉಳಿದವೆಲ್ಲವೂತಮಗೆ ತಾವೇ ಸರಿ ಹೋಗುತ್ತದೆ.

– ವಿಕಾಸವೇ ಜೀವನ, ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ, ಸ್ವಾರ್ಥವೆಲ್ಲಾ ಸಂಕೋಚ, ಆದುದರಿಂದ ಪ್ರೇಮವೆ ಬದುಕಿನ ಧರ್ಮ.

– ನಿಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಮಾಡಿ ನೀವು ಶುದ್ಧ ಚಾರಿತ್ರ್ಯವನ್ನು ರೂಢಿಸಿಕೊಳ್ಳಬೇಕು. ಕರ್ತವ್ಯವನ್ನು ಮಾಡಿದರೆ ಕರ್ತವ್ಯ ಭಾರದಿಂದ ಪಾರಾಗುತ್ತೇವೆ

– ಹಿಂತಿರುಗಿ ನೋಡಬೇಡಿ, ಯಾವಾಗಲೂ ಮುನ್ನಡೆಯಿರಿ ಆನಂತ ಶಕ್ತಿ, ಉತ್ಸಹ, ಸಾಹಸ ಮತ್ತು ತಾಳ್ಳೆ ಇವುಗಳಿದ್ದರೆ ಮಾತ್ರ ಮಹತ್ಕಾರ್ಯಗಳನ್ನು ಸಾಧಿಸಲು ಸಾಧ್ಯ.