Lakshmi Nivasa serial (11 Dec):ಸಂತು-ವೆಂಕಿ ನಡುವಿನ ತಿಕ್ಕಾಟ written update, ವೆಂಕಿ ಸಂತು ಜಗಳ ಭಾವನಾ ಮತ್ತು ಸಿದ್ದು ನಡುವಿನ ಕ್ಷಣಗಳು.
ವೇಂಕಿ ತನ್ನ ತಂದೆಯ ಹುಟ್ಟು ಹಬ್ಬವನ್ನು ಆಚರಿಸುತ್ತಾನೆ
ಈವತ್ತಿನ ಲಕ್ಷ್ಮೀ ನಿವಾಸ (Lakshimi nivasa) ಸೀರಿಯಲ್ನಲ್ಲಿ ವೆಂಕಿ ರಾತ್ರಿ ಮನೆಗೆ ಬಂದು ತನ್ನ ತಂದೆಯನ್ನು ಹೊರಗೆ ಕರೆದು, ಅವನ ಹುಟ್ಟು ಹಬ್ಬವನ್ನು ಆಚರಿಸುತ್ತಾನೆ. ಈ ಸಂದರ್ಭದಲ್ಲಿ, ಲಕ್ಷ್ಮೀ “ಇವರ ಹುಟ್ಟು ಹಬ್ಬ ನಾನು ಕೂಡ ಮರೆತು ಹೋಗಿದ್ದೆ” ಎಂದು ಹೇಳುತ್ತಾಳೆ.
ವೀಣಾ (Veena) ಮತ್ತು ಸಂತು (Santu) ಅವರ ನಡುವಿನ ಸಂಭಾಷಣೆ
ಹುಟ್ಟುಹಬ್ಬದ ಸಂಭ್ರಮ ನಡೆಯುತ್ತಿದ್ದಾಗ, ವೀಣಾ ಹೊರಗೆ ಬಂದು “ನೀವು ಏನು ಮಾಡ್ತಾ ಇದೀರಾ?” ಎಂದು ಕೇಳುತ್ತಾಳೆ. ಅದಕ್ಕೆ ಲಕ್ಷ್ಮೀ “ಇವತ್ತು ಇವರ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದೇವೆ” ಎಂದು ಉತ್ತರಿಸುತ್ತಾಳೆ.
ಅದೇ ಸಮಯದಲ್ಲಿ ಸಂತು, ವೀಣಾಳನ್ನು ಕರೆದು “ಬನ್ನಿ” ಎಂದು ಹೇಳುತ್ತಾನೆ. ಆದರೆ ವೀಣಾ “ಮಾವ ಅವರೂ ಬದ್ರೆ ಹುಟ್ಟು ಹಬ್ಬ ಮಾಡೋದಕ್ಕೆ ಬಿಡೋದಿಲ್ಲ” ಎಂದು ಉತ್ತರಿಸುತ್ತಾಳೆ. ಈ ಎಲ್ಲಾ ಘಟನೆಗಳು ನಗೆ-ತಮಾಶೆಯಲ್ಲಿ ಸಾಗುತ್ತಿವೆ.
ಹರೀಶ್ ಮತ್ತು ಸಿದ್ದು ಅಕ್ಕ ಹೊಸ ವೇಷಾರಾಟ
ಹರೀಶ್ ಮಲಗಿರುವಾಗ, ಸಿದ್ದು ಅಕ್ಕ ಅವನನ್ನು ಎಬ್ಬಿಸಿ “ಯಾರೋ ಹೊರಗಡೆ ನಗುತ್ತಾ ಇದ್ದಾರೆ” ಎಂದು ಹೇಳುತ್ತಾಳೆ. ಅವರು ಇಬ್ಬರೂ ಹೊರಗೆ ಬಂದು ಹುಟ್ಟುಹಬ್ಬದ ಸಂಭ್ರಮಕ್ಕೆ ಸೇರುತ್ತಾರೆ.
ಸಿದ್ದು-ಭಾವನಾ (siddu and Bhavana)ಸಂಭಾಷಣೆ
ಮತ್ತೊಂದೆಡೆ, ಸಿದ್ದು ಭಾವನಾಗೆ “ನಿನ್ನ ತಂದೆಯ ಹುಟ್ಟು ಹಬ್ಬ ಇದೆ” ಎಂದು ಹೇಳುತ್ತಾನೆ. ಅದಕ್ಕೆ ಭಾವನಾ “ನಾನು ಫೋನ್ ಮಾಡಿ ವಿಶ್ ಮಾಡುತ್ತೇನೆ; ನನಗೆ ನೆನಪು ಇರಲಿಲ್ಲ” ಎಂದು ಹೇಳುತ್ತಾಳೆ. ಆದರೆ, ಸಿದ್ದು “ನಾವು ಮನೆಯೇ ಹೋಗಿ ವಿಶ್ ಮಾಡೋಣ” ಎಂದು ಸಲಹೆ ಕೊಡುತ್ತಾನೆ. ಅದಕ್ಕೆ ಭಾವನಾ ಒಪ್ಪುತ್ತಾಳೆ, ಮತ್ತು ಇದರಿಂದ ಸಿದ್ದು ತನ್ನ ಮನಸ್ಸಿನಲ್ಲಿ ಸಂತೋಷಪಡುತ್ತಾನೆ.
ಸಂತು-ವೆಂಕಿ ನಡುವಿನ ತಿಕ್ಕಾಟ (Lakshmi nivasa serial santu and venki fight)
ಈ ನಡುವೆ, ಸಂತು ವೆಂಕಿಯನ್ನು ಮನೆಯಲ್ಲಿ ನೋಡಿ ಆಶ್ಚರ್ಯ ಪಡುತ್ತಾನೆ. ಅವನು ತನ್ನ ಹೆಂಡತಿಗೆ “ನಮಗೆ ಮನೆಯಲ್ಲಿ ವೆಂಕಿ ಕಾಣುತ್ತಿದ್ದಾನೆ!” ಎಂದು ಹೇಳುತ್ತಾನೆ. ನಂತರ ಅವಳಿಂದ ರಾತ್ರಿ ನಡೆದ ಘಟನೆಗಳನ್ನು ಕೇಳುತ್ತಾನೆ. ಊಟ ಸಮಯದಲ್ಲಿ ಸಂತು, ವೆಂಕಿಯನ್ನೇ ಗುರಿಯಾಗಿ “ಈವನು ಯಾಕೆ ಬಂದಿದ್ದಾನೆ?” ಎಂದು ಕೂಗುತ್ತಾನೆ.
ಅಜ್ಜಿ, ವೆಂಕಿ, ಮತ್ತು ಸಂತು ನಡುವಿನ ಘರ್ಷಣೆ
ಅಜ್ಜಿ ಮತ್ತು ವೆಂಕಿ ಮಾತನಾಡುತ್ತಿರುವಾಗ, ಸಂತು ವೆಂಕಿಯನ್ನು ಹೊರಗೆ ಕರೆದು ಕುತ್ತಿಗೆ ಹಿಡಿದು “ಯಾಕೋ ಮನೆಗೆ ಬರ್ತೀಯಾ? ನಿನ್ನೊಡನೆ ಪ್ರಾಬ್ಲಂ ಆಗ್ತಿದೆ” ಎಂದು ಎಚ್ಚರಿಸುತ್ತಾನೆ. ಈ ದೃಶ್ಯವನ್ನು ಚೆಲ್ವಿ ನೋಡಿ ಗಾಬರಿಯಾಗುತ್ತಾಳೆ. ನಂತರ, ಚೆಲ್ವಿ ವೆಂಕಿಯನ್ನೇ “ನಿನಗೆ ಸಂತು ಯಾಕೆ ಬೈದ?” ಎಂದು ಕೇಳುತ್ತಾಳೆ. ಆದರೆ ವೆಂಕಿ “ಅವನಿಗೆ ನನ್ನ ಮೇಲೆ ಕೋಪವಿಲ್ಲ” ಎಂದು ಹೇಳುತ್ತಾನೆ.
ಸಿದ್ದು ಮತ್ತು ಭಾವನಾ ಹತ್ತಿರಗೊಳ್ಳುವ ಕ್ಷಣ
ಸಿದ್ದು, ಭಾವನಾಳೊಂದಿಗೆ ಬೈಕ್ ಮೇಲೆ ಗಡಿಯಾರ ಅಂಗಡಿಗೆ ಹೋಗುತ್ತಾನೆ. ಭಾವನಾಳ ಬಳಿ ಹಣ ಇರದೇ ಹಿಂಜರಿಯುತ್ತಿದ್ದಾಗ, ಸಿದ್ದು ಅವಳಿಗೆ ಗಡಿಯಾರವನ್ನು ಖರೀದಿಸಿಕೊಡುತ್ತಾನೆ.
ನಾಳೆಯ Episode: ಭಾವನಾ ಮೇಲೆ ಸಿದ್ದು ತಾಯಿಯ ಕೋಪ
ನಾಳೆಯ ಕತೆಯಲ್ಲಿ, ಭಾವನಾ ತನ್ನ ತಂದೆಯ ಮನೆಗೆ ಸಿದ್ದು ಜೊತೆಗೆ ಹೋಗಿರುವುದನ್ನು ಸಿದ್ದು ತಾಯಿ ನೋಡಿ ಕೋಪಗೊಂಡು ಕೇಳುತ್ತಾಳೆ:
“ನಿಮಗೆ ಯಾರು ಹೇಳೋರು ಇಲ್ಲವಾ? ಯಾವಾಗ ಬೇಕಾದಾಗ ಹೋಗ್ತೀರಾ, ಯಾವಾಗ ಬೇಕಾದಾಗ ಬರ್ತೀರಾ? ಮನೆಯಲ್ಲಿ ಹೇಳಿ ಹೋಗಬೇಕು ಅನ್ನೋ ಪತಿವ್ರತೆಯ ಜ್ಞಾನ ಇಲ್ವಾ?”
ಇನ್ನು ಮುಂದೆ, ಸಿದ್ದು ತಾಯಿ ಭಾವನಾಗೆ “ನಿನ್ನ ತಾಳಿ ಕಿತ್ತು ನಿನ್ನ ತಂದೆಯ ಮನೆಗೆ ಹೋಗು” ಎಂದು ಹೇಳುತ್ತಾಳೆ.
ಇವತ್ತಿನ Lakshmi Nivasa serial Episode ಮುಕ್ತಾಯ.