B.R.Ambedkar ;ಬಿ.ಆರ್.ಅಂಬೇಡ್ಕರ್,ಮಹಾಪರಿನಿರ್ವಾನ್ ದಿನ ಇದರ ಮಹತ್ವ
ಮಹಾಪರಿನಿರ್ವಾನ್ ದಿನ 2021: ಇಂದು ಡಾ.ಬಿ.ಆರ್.ಅಂಬೇಡ್ಕರ್ ಇಹ ಲೋಕ ತ್ಯೇಜಿಸಿದ ದಿನವಾಗಿದೆ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಬ್ಬ ಸಾಮಾಜಿಕ ಸುಧಾರಕ,ಅರ್ಥಶಾಸ್ತ್ರಜ್ಞ,ನ್ಯಾಯಶಾಸ್ತ್ರಜ್ಞ ಮತ್ತೂ ಪತ್ರಕರ್ತರಾಗಿದ್ದವರು.
ಅಂಬೇಡ್ಕರ್ ಅವರು ಭಾರತ ಸಮಾಜದಲ್ಲಿ ದಲಿತರ ಮೇಲೆ ಆಗುವ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶೋಷಣೆಯ ವಿರುದ್ಧ ಹೋರಾಡಿ ಅವರಿಗೆ ಸಮಾಜದಲ್ಲಿ ಒಂದೂ ಸ್ಥಾನ ಮಾನ ದೊರಕಿಸಿಕೊಟ್ಟೀದ್ದವರೂ.
ಬಾಬಾ ಸಾಹೇಬ ಅಂಬೇಡ್ಕರ್ ಅವರು ಹುಟ್ಟಿದ್ದು 14 ಏಪ್ರಿಲ್ 1891 ರ ಮಧ್ಯಪ್ರದೇಶದ ಮ್ಹೌ ಊರಿನಲ್ಲಿ ರಾಮಜಿ ಮಾಲೋಜಿ ಸಕ್ಪಾಲ್ ಮತ್ತು ಭೀಮಾಬಾಯಿ ಸಕ್ಪಾಲ್ ದಂಪತಿಗೆ ಜನಿಸಿದರು.
ಯಾಕೆ ಮಹಾಪರಿನಿರ್ವಾನ್ ದಿನ ಆಚರಿಸಲಾಗುತ್ತದೆ?|Why Mahaparnirvan Din celebrated?
1948ರಿಂದ ಅಂಬೇಡ್ಕರ್ ಅವರು ಮಧುಮೇಹ ಕಾಯಿಲೆಯಿಂದ ನರಳುತ್ತಿದ್ದರು.1954ರಲ್ಲಿ ಜೂನನಿಂದ ಅಕ್ಟೋಬರ್ ತಿಂಗಳವರೆಗೆ ಔಷದೆಯ ಅಡ್ಡಪರಿಣಾಮದಿಂದ ಹಾಸಿಗೆ ಹಿಡಿದಿದ್ದರು.ಬುದ್ಧ ಮತ್ತು ಅವರ ಧಮ್ಮದ ಅಂತಿಮ ಹಸ್ತಪ್ರತಿಯಾದ ಪೂರ್ಣಗೊಳಿಸಿದ ಮೂರು ದಿನಗಳ ನಂತರ,ದೆಹಲಿಯಲ್ಲಿ 6 ಡಿಸೆಂಬರ್ 1956ರಲ್ಲಿ ನಿಧನರಾದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ನೆನಪಿಗಾಗಿ ಮತ್ತೂ ಅವರಿಗೆ ಗೌರವ ಸಲ್ಲಿಸುವುದಕ್ಕಾಗಿ ಈ ಮಹಾಪರಿನಿರ್ವಾನ್ ದಿನವನ್ನು ಆಚರಿಸಲಾಗುವುದು. ಇದು 65ನೇ ಮರಣ ವಾರ್ಷಿಕೋತ್ಸವ ಅಥವಾ 65ನೇ ಮಹಾಪರಿನಿರ್ವಾನ್ ದಿನವಾಗಿದೆ.