ಬಸವಣ್ಣನವರ ಜೀವನ ಚರಿತ್ರೆ|Biography of Basavanna in Kannada

ಬಸವಣ್ಣನವರ ಜೀವನ ಚರಿತ್ರೆ ಕನ್ನಡ,ಬಸವಣ್ಣನವರ ಬಾಲ್ಯ ಜೀವನ, ಅವರ ಅಂಕಿತನಾಮ, ಅವರ ತಾಯಿ-ತಂದೆ ಹೆಸರು (Biography of Basavanna in Kannada, (Basavanna Jivana charitre)

ಬಸವಣ್ಣನವರು ಒಬ್ಬ ಸಮಾಜ ಸುಧಾರಕ, ತತ್ವಜ್ಞಾನಿಯಾಗಿದ್ದವರು. ಇವರು ಬಿಜ್ಜಳ ಮಹಾರಾಜನ ಆಸ್ಥಾನದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಬಸವೇಶ್ವರ ಅಥವಾ ಬಸವಣ್ಣನವರು ಒಬ್ಬ ಸಮಾಜ ಸುಧಾರಕ, ತತ್ವಜ್ಞಾನಿಯಾಗಿದ್ದವರು. ಇವರು ಬಿಜ್ಜಳ ಮಹಾರಾಜನ ಆಸ್ಥಾನದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಜಾತಿ ವ್ಯವಸ್ಥೆಯ ವಿರುದ್ಧ, ಮೂಢನಂಬಿಕೆ, ಸಾಮಾಜಿಕ ತಾರತಮ್ಯದ ವಿರುದ್ಧ ದ್ವನಿಯೇತ್ತಿ ಅತಿ ಸುಲಭವಾಗಿ ಜನರಿಗೆ ತಿಳಿಯುವಂತೆ ಕಾವ್ಯ ರೂಪದಲ್ಲಿ ತಿಳಿಸಿದರು.

ಇವರ ಅನುಭವ ಮಂಟಪ ಕಟ್ಟುವಲ್ಲಿ ಮಹತ್ವದ ಯೋಗದಾನ ನೀಡಿ ಅಲ್ಲಿ ಯಾವುದೇ ಜಾತಿ ಮೇಲೂ, ಕೀಳು,ಹೆಣ್ಣು,ಗಂಡು ನೋಡದೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿ ಅವರ ವಿಚಾರವನ್ನು ಮುಕ್ತಾವಾಗಿ ಹಂಚಿಕೊಳ್ಳಲು ಅವಕಾಶ ಕಲ್ಪಿಸಿದರು.

ಬಸವಣ್ಣನವರು ವಚನ ಸಾಹಿತ್ಯ ರಚಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದರು. ಬಸವಣ್ಣನವರ ಕಾವ್ಯ ನಾಮ ಕೂಡಲ ಸಂಗಮದೇವಾ.

ವಿಶ್ವ ಗುರು ಬಸವಣ್ಣನವರ ಜೀವನ ಚರಿತ್ರೆ ಕನ್ನಡದಲ್ಲಿ (Biography of Basavanna in Kannada)

ಪೂರ್ಣ ಹೆಸರು(Full name)ಬಸವಣ್ಣ
ಇತರ ಹೆಸರು(Other Name )ಬಸವೇಶ್ವರ, ವಿಶ್ವ ಗುರು, ಲಿಂಗಾಯತ ಗುರು
ವೃತ್ತಿ(Profession)ರಾಜ್ಯನ ಆಸ್ಥಾನದಲ್ಲಿ ಮಂತ್ರಿ, ಖಚಾಂಚಿ, ಸಮಾಜ ಸುಧಾರಕ , ಕವಿ, ತತ್ವಜ್ಞಾನಿ) ವಚನಕಾರ
ಹುಟ್ಟಿದ ದಿನಾಂಕ(Birth Date) 1134
ಹುಟ್ಟಿದ ಸ್ಥಳ(Birth Place)ಬಿಜಾಪುರದ ಬಾಗೇವಾಡಿ ಗ್ರಾಮದಲ್ಲಿ
ಧರ್ಮ, ಜಾತಿ(Religion,caste) ಹಿಂದು, ಬ್ರಾಹ್ಮಣ
ಅಂಕಿತನಾಮ(Pen Name) ಕೂಡಲ ಸಂಗಮದೇವಾ
ಲಿಂಗೈಕ್ಯ ದಿನ(Death Date)1196 ರಲ್ಲಿ ಕೂಡಲ ಸಂಗಮದಲ್ಲಿ  ಲಿಂಗೈಕ್ಯರಾದರು

ಬಸವೇಶ್ವರ ಕುಟುಂಬದ ಪರಿಚಯ

ತಂದೆ ಹೆಸರು(Father Name)

 ಮಾದರಸ

ತಾಯಿ ಹೆಸರು(Mother Name)

 ಮಾದಲಾಂಬಿಕೆ

ಹೆಂಡತಿ ಹೆಸರು(Wife Name)

 ಗಂಗಾಬಿಂಕಾ

, ನೀಲಾಂಬಿಕೆ

ಬಸವಣ್ಣನವರ ಮೊದಲಿನ ಜೀವನ|Earlier Life of Basavanna in Kannada

.ಬಸವಣ್ಣನವರು ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳಿಗೆ 1134 ರಲ್ಲಿ ಈಗಿನ ಬಿಜಾಪುರದ ಬಾಗೇವಾಡಿ ಗ್ರಾಮದಲ್ಲಿ ಜನಿಸಿದರು.

ಬಸವಣ್ಣನವರು 12 ವರ್ಷಗಳ ಕಾಲ ಕೂಡಲಸಂಗಮದಲ್ಲಿ ಹಿಂದು ಪುರಾಣವನ್ನು ಅಧ್ಯಯನ ಮಾಡಿದರು. ಆಮೇಲೆ ಇವರ ತಾಯಿ ಕಡೆಯ ಸೋದರ ಸಂಬಂಧಿಯ ಮಗಳಾದ ಗಂಗಾಬಿಂಕಾ ಅವರನ್ನು ಮದುವೆಯಾದರು. ಗಂಗಾಂಬಿಕಾ ಅವರ ತಂದೆ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಯಾಗಿದ್ದವರು.

ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಖಚಾಂಚಿಯಾಗಿ ಸೇರಿಕೊಂಡರು. ಬಸವಣ್ಣನವರ ಮಾವ ಮರಣದ ನಂತರ ಅವರ ಆ ಆಸ್ಥಾನದಲ್ಲಿ ಮಂತ್ರಿಯಾದರು.ಮುಂದೆ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿ ಅಲ್ಲಿ ಅಲ್ಲಮಪ್ರಭುದೇವರನ್ನು ಅಧ್ಯಕ್ಷರನ್ನಾಗಿ ಮಾಡಿದರು.

ಅನುಭವ ಮಂಟಪದಲ್ಲಿ ಹೆಣ್ಣು ಗಂಡು ಎಲ್ಲರಿಗೂ ಸಮಾನವಾದ ಸ್ಥಾನ ನೀಡಿದರು. ವಚನ ಸಾಹಿತ್ಯ ರಚಿಸಿ ಸಮಾಜದ ತಪ್ಪುಗಳ, ಮೂಡನಂಬಿಕೆ, ಮತ್ತು ಸಾಮಾಜ ತಾರತಮ್ಯವನ್ನು ತೀವ್ರವಾಗಿ ವಿರೋಧಿಸಿದರು. ಇದನ್ನು ಜನರಿಗೆ ಸರಳವಾಗಿ ತಿಳಿಸುವಂತೆ ಸರಳ ಭಾಷೆ, ಕವಿತೆಯಲ್ಲಿ ವಚನಗಳ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದಾರೆ.

ಗುರು ಬಸವಣ್ಣನವರ ಕೆಲವು ವಿಶೇಷವಾದ ಮಾಹಿತಿಗಳು|Interesting facts about Guru Basavanna in Kannada

  • ಬಸವಣ್ಣನವರ 108 ಅಡಿಯ ಮೂರ್ತಿಯನ್ನು ಬೀದರಿನ ಬಸವಕಲ್ಯಾಣದಲ್ಲಿ ಅನಾವರಣಗೊಳಿಸಲಾಗಿದೆ. ಇದು ಇಡೀ ವಿಶ್ವದಲ್ಲೇ ಅತಿ ಎತ್ತರದ ಬಸವಣ್ಣನವರ ಮೂರ್ತಿಯಾಗಿದೆ.
  • ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ವಿಶ್ವ ಗುರು ಬಸವಣ್ಣನವರ ಭಾವಚಿತ್ರವುಳ್ಳ  5 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಿದರು. ಭಾರತ ನಾಣ್ಯದ ಮೇಲೆ ಭಾವಚಿತ್ರವುಳ್ಳ ಮೊದಲ ಕನ್ನಡಿಗ ಇವರು.
  • 2003, 28ರಲ್ಲಿ ದೆಹಲಿಯ ಪಾರ್ಲಿಮೆಂಟ್ ನಲ್ಲಿ ಬಸವಣ್ಣವರ ಅಶ್ವಾರೂಢ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
  • ಭಾರತ ಸರ್ಕಾರದ ಅಂಚೆ ಇಲಾಖೆ 1967ರಲ್ಲಿ 15 ಪೈಸೆ ಮತ್ತು 1997ರಲ್ಲಿ 2 ರೂಪಾಯಿ ಮುಖಬೆಲೆಯ ಅಂಚೆ ಚೀಟಿಯನ್ನು ಮುದ್ರಿಸಿತು.

ಬಸವಣ್ಣನವರ ಕೆಲವು ವಚನಗಳು| Vachanasa of Basavanna in Kannada

1.ಅಯ್ಯಾ ಅಂದರೆ ಸ್ವರ್ಗ ಯಲವೊ ಅಂದರೆ ನರಕ

2 .ಮಾಡಿ ಮಾಡಿ ಕೆಟರು ಮನವಿಲ್ಲದೆ,ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ,ಮಾಡುವ ನೀಡುವ ನಿಜಗುಣವುಳ್ಳಡೆ ಕೂಡಿಕೊಂಬ ನಮ್ಮ ಕೂಡಲಸಂಗಮದೇವ.

3.ಎನಗಿಂತ ಕಿರಿಯಲ್ಲಿಶಿವ ಭಕ್ತರಿಗಿಂತ ಹಿರಿಯರಿಲ್ಲನಿಮ್ಮ ಪಾದಸಾಕ್ಷಿ ಎನ್ನ ಮನಸಾಕ್ಷಿಕೂಡಲಸಂಗಮದೇವ ಎನಗಿದೆ ದಿವ್ಯಾ

4.ದಯವಿಲ್ಲದ ಧರ್ಮವಾವುದನ್ಯೂ?ದಮವೇ ಬೇಕು ಸಕಲ ಪ್ರಾಣಿಗಳಲ್ಲೂ ದಯವೇ ಧರ್ಮದ ಮೂಲವಯ್ಯೂ ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯ.

5.ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ?ಎನ್ನೊಳಗಿದ್ದು ನಿನ್ನ ತೋರಲಿಕೆ ನೀವೇ ರೂಪಾದೆ.ಇನ್ನು ಜಂಗಮವೆ ಲಿಂಗವೆಂದು ನಂಬಿದೆ ಕೂಡಲಸಂಗಮದೇವಾ.

6.ಉಳ್ಳವರು ಶಿವಾಲಯ ಮಾಡಿದರುನಾನೇನ ಮಾಡುವೆ ಬಡವನಯ್ಯಾ,ಎನ್ನ ಕಾಲೆ ಕಂಬ, ದೇಹವೇ ದೇಗುಲಶೀರ ಹೊನ್ನಕಲಶವಯ್ಯಾ.ಕೂಡಲಸಂಗಮದೇವಾ ಕೇಳಯ್ಯಾಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.

7.ತಂದೆ ನೀನು ತಾಯಿ ನೀನು, ಬಂದು ನೀನು ಬಳಗ ನೀನು.ನೀನಲ್ಲದೆ ಮತ್ತ್ಯಾರು ಇಲ್ಲವಯ್ಯಾ.ಕೂಡಲಸಂಗಮದೇವ,ಹಾಲಲದ್ದು, ನೀರಲದ್ದು.

8.ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು ನುಡಿಯೊಳಗಾ

ಗಿ ನಡೆಯದಿದ್ದರೆ. ಕೂಡಲ ಸಂಗಮದೇವನೆಂತೊಲಿವನಯ್ಯ

ಬಸವಣ್ಣನವರ ಜೀವನ ಚರಿತ್ರೆ ಕನ್ನಡ pdf

ಅಂತಿಮ ತೀರ್ಮಾನ

ಬಸವಣ್ಣನವರ ಈ ಸಮಾಜಕ್ಕೆ ಬಹಳಷ್ಟು ಕೊಡುಗೆಯನ್ನೂ ನೀಡಿದ್ದಾರೆ. ಅವರು ತಮ್ಮ ಕಾಲದಲ್ಲಿ ಜಾತಿಪದ್ಧತಿ, ಹೆಣ್ಣಿನ ಸಮಾನತೆ ಬಗ್ಗೆ ಸಾರಿ ಹೇಳಿದವರು. ಎಲ್ಲರೂ ಅವರ ಹೇಳಿದ ಮಾರ್ಗದಲ್ಲಿ ನಡೆದರೆ ಈ ಭಾರತ ತುಂಬಾ ಮುಂದೆ ಹೋಗುತ್ತದೆ.

FAQ

ಬಸವಣ್ಣನವರ ಹುಟ್ಟಿದ ದಿನಾಂಕ?(When was Basavanna born in Kannada?)

ಬಸವಣ್ಣನವರ ಹುಟ್ಟಿದ ದಿನಾಂಕ 1134

ಬಸವಣ್ಣನವರ ಹುಟ್ಟಿದ ಊರು ಅಥವಾ ಸ್ಥಳ? (Basavanna Born Place)

ಬಸವಣ್ಣನವರು ಬಿಜಾಪುರದ ಬಾಗೇವಾಡಿ ಗ್ರಾಮದಲ್ಲಿ ಜನಿಸಿದರು.

ಬಸವೇಶ್ವರ ಅವರ ತಂದೆ ತಾಯಿ ಹೆಸರು?

ಬಸವಣ್ಣನವರ ತಂದೆ ಹೆಸರು ಮಾದರಸ ಮತ್ತು ತಾಯಿ ಹೆಸರು ಮಾದಲಾಂಬಿಕೆ.

ಬಸವಣ್ಣನವರು ಹೆಂಡತಿಯರ ಹೆಸರು?

ಬಸವಣ್ಣನವರ ಹೆಂಡತಿ ಹೆಸರು ಗಂಗಾಂಬಿಕೆ ಮತ್ತು ನೀಲಾಂಬಿಕೆ

ವಿಶ್ವ ಗುರು ಬಸವಣ್ಣನವರ ಜಯಂತಿ ಯಾವಾಗ ಆಚರಿಸಲಾಗುತ್ತದೆ?

14 ಮೇ ತಿಂಗಳಲ್ಲಿ ಬಸವಣ್ಣನವರ ಜಯಂತಿ ಆಚರಿಸಲಾಗುವುದು

ಬಸವಣ್ಣನವರ ಅಂಕಿತ ನಾಮ ಯಾವುದು?

ಬಸವಣ್ಣನವರ ಅಂಕಿತನಾಮ ಕೂಡಲಸಂಗಮದೇವ

ಬಸವಣ್ಣನವರು ರಚಿಸಿದ ಕೃತಿಗಳು ಯಾವವು?

ಬಸವಣ್ಣನವರು ರಚಿಸಿದ ಕೃತಿಗಳು ವಚನಸಾಹಿತ್ಯ.

ಬಸವಣ್ಣನವರ ಯಾರ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು?

ಬಸವಣ್ಣನವರ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು.

ಬಸವಣ್ಣನವರು ಲಿಂಗೈಕ್ಯ ದಿನ ಯಾವುದು?

ಬಸವಣ್ಣನವರು ಲಿಂಗೈಕ್ಯ ದಿನ 1196.

ಬಸವಣ್ಣನವರು ಲಿಂಗೈಕ್ಯವಾದ ಸ್ಥಳ ಅಥವಾ ಊರು?

ಬಸವಣ್ಣನವರು ಲಿಂಗೈಕ್ಯವಾದ ಸ್ಥಳ ಅಥವಾ ಊರು ಕೂಡಲ ಸಂಗಮ.

Leave a Comment