ಅಂಬಿಗರ ಚೌಡಯ್ಯ ಜೀವನ ಚರಿತ್ರೆ |Ambigara Chowdaiya Biography in Kannada

ಅಂಬಿಗರ ಚೌಡಯ್ಯ ಜೀವನ ಚರಿತ್ರೆ, ತಂದೆ-ತಾಯಿ ಹೆಸರು, ವಚನಗಳು ಹೆಂಡತಿ ಹೆಸರು, ಅವರ ಅಂಕಿತ ನಾಮ, ಜಯಂತಿ ( Ambigara Chowdaiya Biography,(jivana charitre), parents name, Vachanagalu, ankitanaama, pen name, Jayanti in Kannada)

ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅವರು ಒಬ್ಬ 12ನೆ ಶತಮಾನದ ವಚನಕಾರ,ಕವಿ, ಸಾಮಾಜಿಕ ವಿಮರ್ಶಕರು.ಚೌಡಯ್ಯ ಅವರು ಕೋಲಿ ಸಮುದಾಯಕ್ಕೆ ಸೇರಿದವರು. ಇವರು ತಮ್ಮ ವಿಶಿಷ್ಟವಾದ ಒರಟು ವಚನಗಳಿಗೆ ಹೆಸರುವಾಸಿ ಮತ್ತು ಬೇರೆ ವಚನಕಾರರಿಗಿಂತ ಬಿನ್ನ.

ಅಂಬಿಗರ ಚೌಡಯ್ಯ ಅವರ ಜೀವನ ಪರಿಚಯ( Ambigara Chowdaiya Biography in Kannada)

ಅಂಬಿಗರ ಚೌಡಯ್ಯ ಅವರು ಹುಟ್ಟಿದ್ದು 1160 (12ನೇ ಶತಮಾನ) ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಚೌಡದಾನಪುರ ಗ್ರಾಮದಲ್ಲಿ ಕೋಲಿ ಸಮುದಾಯದಲ್ಲಿ ಜನಿಸಿದರು. ಇವರ ತಂದೆ ವಿರೂಪಾಕ್ಷ ಇವರು ಒಬ್ಬ ಅಂಬಿಗರಾಗಿದ್ದವರು.

ಚೌಡಯ್ಯ ಅವರು ಆಗಿನ ಕಾಲದಲ್ಲಿ ಹೆಣ್ಣಿನ ಮೇಲೆ ನಡೆಸುತ್ತಿದ್ದ ಶೋಷಣೆಯ ಹಾಗೂ ಉನ್ನತ ಜಾತಿಯರು, ಕೆಳಜಾತಿಯವರ ಮೇಲೆ ನಡೆಸುತ್ತಿದ್ದ ಶೋಷಣೆಯ ವಿರುದ್ಧ ತುಂಬಾ ತಿವ್ರವಾದ ವರಟು ವಚನಗಳಿಂದ ಟೀಕಿಸಿದರು.

ಅಂಬಿಗರ ಚೌಡಯ್ಯ ಅವರು ಬಸವಣ್ಣನವರಿಂದ ತುಂಬಾ ಪ್ರಭಾವಿತರಾಗಿದ್ದರು, ಅದಕ್ಕಾಗಿ ಅವರು ಕಲ್ಯಾಣದಲ್ಲಿ ನಡೆಯುತ್ತಿದ್ದ ವೀರಶೈವ ಚಳವಳಿಯನ್ನು ಸೇರಿಕೊಂಡರು ಮತ್ತು ಲಿಂಗಾಯತ ಧರ್ಮವನ್ನು ಅನುಸರಿಸಿದರು.

ಅಂಬಿಗರ ಚೌಡಯ್ಯ ಅವರ ಜೀವನದ ಸಂಕ್ಷಿಪ್ತ ಮಾಹಿತಿ

ಪೂರ್ಣ ಹೆಸರು ( Full Name)ಚೌಡಯ್ಯ
ಹುಟ್ಟಿದ ದಿನಾಂಕ (Date of Birth)1160 (12ನೇ ಶತಮಾನ)
ಹುಟ್ಟಿದ ಸ್ಥಳ (Birth place)ಚೌಡದಾನಪುರ, ರಾಣಿಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ, ಕರ್ನಾಟಕ
ಜಾತಿ (Caste)ಕೋಲಿ ಸಮುದಾಯ ( ಲಿಂಗಾಯತ)
ಧರ್ಮ (Religion)ಹಿಂದು
ವೃತ್ತಿ (Profession)ಅಂಬಿಗ
ಅಂಕಿತಾ ನಾಮ ( Pen Name)ಅಂಬಿಗರ ಚೌಡಯ್ಯ
ಕೊಡುಗೆ ಅಥವಾ ಸಾಹಿತ್ಯ( Book Written)ವಚನ ಸಾಹಿತ್ಯ
ಲಿಂಗೈಕ್ಯ ಸ್ಥಳ(Death)ರಾಣಿಬೆನ್ನೂರು

ಅಂಬಿಗರ ಚೌಡಯ್ಯ ಅವರ ಕುಟುಂಬ

ತಂದೆ ಹೆಸರು (Father Name)ವಿರೂಪಾಕ್ಷ
ತಾಯಿ ಹೆಸರು ( Mother Name)ಪಂಪಾದೇವಿ
ಹೆಂಡತಿ ಹೆಸರು ( Wife Name)NA
ಮಕ್ಕಳ ಹೆಸರು (Chidrens Name)NA

ಅಂಬಿಗರ ಚೌಡಯ್ಯ ಅವರ ವಚನಗಳು ( Ambigara Chowdaiya Vachanagalu)

ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ,ಉಡಲಾದರೆ ಇಡುವ ಚಿಂತೆ,ಇಡಲಾದರೆ ಹೆಂಡಿರ ಚಿಂತೆ,ಹೆಂಡಿರಾದರೆ ಮಕ್ಕಳ ಚಿಂತೆ,ಮಕ್ಕಳಾದರೆ ಬದುಕಿನ ಚಿಂತೆ,ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ,ಇಂತೀ ಹಲವು ಚಿಂತೆಯಲ್ಲಿದ್ದವರ ಕಂಡೆನು, ಶಿವನ ಚಿಂತೆಯಲ್ಲಿ ಇದ್ದವರ ಕಾಣೆನು,ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣ. – ಅಂಬಿಗರ ಚೌಡಯ್ಯ

ಹರಿಗೆ ಚಕ್ರ ಡಾಣೆ, ಬ್ರಹ್ಮಂಗೆ ವೇದ ಪಾಶ,ಹಿರಿಯ ರುದ್ರಂಗೆ ಜಡ ಜಪಮಣಿ ನೋಡಾ !ಧರೆಯವರೆಲ್ಲಾ ನೆರೆದು ಇವರ ದೇವರೆಂಬರು,ಪರದೈವ ಬೇರೆಂದಾತನಂಬಿಗರ ಚೌಡಯ್ಯ.

ಪ್ರಶ್ನೋತ್ತರಗಳು

ಅಂಬಿಗರ ಚೌಡಯ್ಯ ಹುಟ್ಟಿದ ದಿನಾಂಕ?

ಅಂಬಿಗರ ಚೌಡಯ್ಯ ಹುಟ್ಟಿದ ದಿನಾಂಕ 1160 (12ನೇ ಶತಮಾನ).

ಅಂಬಿಗರ ಚೌಡಯ್ಯನವರ ಹುಟ್ಟಿದ ಊರು ಅಥವಾ ಸ್ಥಳ?

ಅಂಬಿಗರ ಚೌಡಯ್ಯನವರ ಹುಟ್ಟಿದ ಊರು ಅಥವಾ ಸ್ಥಳ ಚೌಡದಾನಪುರ, ರಾಣಿಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ, ಕರ್ನಾಟಕ.

ಅಂಬಿಗರ ಚೌಡಯ್ಯ ಅವರ ತಂದೆ ತಾಯಿ ಹೆಸರು?

ಅಂಬಿಗರ ಚೌಡಯ್ಯ ಅವರ ತಂದೆ ಹೆಸರು ವಿರೂಪಾಕ್ಷ ತಾಯಿ ಹೆಸರು ಪಂಪಾದೇವಿ.

ಅಂಬಿಗರ ಚೌಡಯ್ಯನವರ ಜಯಂತಿ ಯಾವಾಗ ಆಚರಿಸಲಾಗುತ್ತದೆ?

ಅಂಬಿಗರ ಚೌಡಯ್ಯನವರ ಜಯಂತಿ ಪ್ರತಿ ವರ್ಷ 21 ಜನೆವರಿಯೆಂದು ಆಚರಿಸಲಾಗುತ್ತದೆ.

ಅಂಬಿಗರ ಚೌಡಯ್ಯನವರು ಲಿಂಗೈಕ್ಯವಾದ ಸ್ಥಳ ಅಥವಾ ಊರು?

ಅಂಬಿಗರ ಚೌಡಯ್ಯನವರು ಲಿಂಗೈಕ್ಯವಾದ ಸ್ಥಳ ರಾಣಿಬೆನ್ನೂರು ಎಂದು ಹೇಳಲಾಗುತ್ತದೆ.

ಅಂಬಿಗರ ಚೌಡಯ್ಯನವರು ಅಂಕಿತನಾಮ ಯಾವುದು?

ಅಂಬಿಗರ ಚೌಡಯ್ಯನವರು ಅಂಕಿತನಾಮ ಅಂಬಿಗರ ಚೌಡಯ್ಯ.

Leave a Comment