IND vs AUS World Cup Final: ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ?

ಭಾನುವಾರದಂದು ಅಹಮದಾಬಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ IND vs AUS world cup ಫೈನಲ್‌ನಲ್ಲಿ ಯಾವ ಸೆಲೆಬ್ರಿಟಿಗಳು ಮತ್ತು ಕ್ರಿಕೆಟ್ ತಂಡದ ನಾಯಕರು ಮತ್ತು ಯಾವ ಕಾರ್ಯಕ್ರಮಗಳು ನಡೆಯಲಿವೆ ಎಂದು BCCI ಪ್ರಕಟಿಸಿದೆ.

IND V/S AUS World Cup Final

ಈ ಐತಿಹಾಸಿಕ ವಿಶ್ವಕಪ್ ಕ್ಷಣವನ್ನು ವೀಕ್ಷಿಸಲು ಭಾರತೀಯ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ, ಇವರ ಜೊತೆಗೆ ಮಾಜಿ ವಿಶ್ವಕಪ್ ವಿಜೇತ ನಾಯಕರಾದ ಕಪಿಲ್ ದೇವ್ ಹಾಗೂ MS ಧೋನಿ ಕೂಡ ಆಗಮಿಸಲಿದ್ದಾರೆ.

World Cup-Winning Captains 1975-2019

ಈ ಬಾರಿ ಬಿಸಿಸಿಐ 1975ರಿಂದ 2019ರವರೆಗೆ World Cup ಗೆದ್ದ ಎಲ್ಲ ದೇಶಗಳ ಕ್ರಿಕೆಟ್ ನಾಯಕರನ್ನು ಆಹ್ವಾನಿಸಿದೆ. ಇವರಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ನಾಯಕ ಕ್ಲೈವ್ ಲಾಯ್ಡ್ (1975 ಮತ್ತು 1972ರಲ್ಲಿ ವೆಸ್ಟ್ ಇಂಡೀಸ್ ನಾಯಕ ), ಎಂಎಸ್ ಧೋನಿ (2001), ಅಲನ್ ಬಾರ್ಡರ್ (1983), 1987 ರಲ್ಲಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾದ ನಾಯಕ, ಭಾರತವನ್ನು ಗೆಲುವಿನತ್ತ ಮುನ್ನಡೆಸಿದ ಕಪಿಲ್ ದೇವ್, ಆಸ್ಟ್ರೇಲಿಯಾದ ಸ್ಟೀವ್ ವಾ (1999 ವಿಶ್ವಕಪ್ ವಿಜೇತ ನಾಯಕ), ರಿಕಿ ಪಾಂಟಿಂಗ್ (2003 ಮತ್ತು 2007 ವಿಶ್ವಕಪ್ ವಿಜೇತ ನಾಯಕ), ಮೈಕೆಲ್ ಕ್ಲಾರ್ಕ್ ಆಸ್ಟ್ರೇಲಿಯಾದ (2015) ಇಂಗ್ಲೆಂಡ್ ಕ್ರಿಕೆಟ್ ನಾಯಕ (2019) ಭಾಗವಹಿಸಲಿದ್ದಾರೆ.

ಇವರೊಂದಿಗೆ ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್ (1992) ಮತ್ತು ಶ್ರೀಲಂಕಾದ ಮಾಜಿ 1996 ವಿಶ್ವಕಪ್ ವಿಜೇತ ನಾಯಕ ಅರ್ಜುನ ರಣತುಂಗೆ ಭಾಗಿಯಾಗುವ ಸಾಧ್ಯತೆ ಕಡಿಮೆ.

IND VS AUS world cup live event

BCCI ಈವೆಂಟನ ಸಮಯವನ್ನು ಕೂಡ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದೆ, ಕ್ರಿಕೆಟ್ ಪಂದ್ಯ ಆರಂಭಕ್ಕೂ ಮುನ್ನ 1:35ಕ್ಕೆ ಆರಂಭವಾಗಲಿದೆ ಇದು 1:50 ರವರೆಗೆ ನಡೆಯಲಿದೆ. ಇದನ್ನು ಇಂಡಿಯನ್ ಏರ್ಫೋರ್ಸ್ ಸೂರ್ಯ ಕಿರಣ್ ಅವರು ಏರ್ ಶೋ ನಡೆಸಲಿದ್ದಾರೆ. ಈ ವೈಮಾನಿಕ ಶೋ ಸುಮಾರು 15-20 ನಿಮಿಷಗಳ ಕಾಲ ನಡೆಯಲಿದೆ ಎಂದು BCCI ತಿಳಿಸಿದೆ.

ಇದರಲ್ಲಿ ಎರಡನೆಯ ಈವೆಂಟ್ ಮೊದಲ ಇನ್ನಿಂಗ್ಸ್ ಡ್ರಿಂಕ್ಸ್ ಬ್ರೇಕ್‌ನಲ್ಲಿ, ಗುಜರಾತ್ ನಾಯಕ ಆದಿತ್ಯ ಗೋಡ್ವಿ ತಮ್ಮ ಹಾಡಿನಿಂದ ಪ್ರೇಕ್ಷಕರಿಗೆ ಮನೋರಂಜಿಸಲಿದ್ದಾರೆ.

ಮೂರನೆಯದಾಗಿ, ಸಂಗೀತ ಸಂಯೋಜಕ ಪ್ರೀತಮ್ ಅವರ ಜೊತೆ ತುಷಾರ್ ಜೋಶಿ, ಜೋನಿತಾ ಗಾಂಧಿ, ನಕಾಶಾ ಅಜೀಜ್, ಆಕಾಶ ಜೋಶಿ ಮತ್ತು ಅಮಿತ್ ಮಿಶ್ರಾ ಗಾಯಕರು ಇನಿಂಗ್ಸ್ ವಿರಾಮದ ಸಮಯದಲ್ಲಿ ಪ್ರೇಕ್ಷಕರನ್ನು ಮನೋರಂಜಿಸಲಿದ್ದಾರೆ.

ನಾಲ್ಕನೆಯದಾಗಿ ಎರಡನೇ ಇನ್ನಿಂಗ್ಸ್ ಡ್ರಿಂಕ್ಸ್ ಬೈಕ್ ನಲ್ಲಿ laser ಮತ್ತು light show ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು.

India V/S Australia World Cup playing 11 team players

ಭಾರತ: ರೋಹಿತ್ ಶರ್ಮಾ(ಸಿ), ಶುಭಮ ಗಿಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ.

ಆಸ್ಟ್ರೇಲಿಯಾ: ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಜೋಶ್ ಇಂಗ್ಲಿಸ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ಸಿ), ಆಡಮ್ ಝಂಪಾ, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್‌ಚಾಗ್ನೆ.

Read more: Kannada news

Leave a Comment