ಕನ್ನಡ ವ್ಯಾಕರಣದಲ್ಲಿ ವಿಭಕ್ತಿ ಪ್ರತ್ಯಯ (Vibhakti Pratyaya) ಒಂದು ಮುಖ್ಯವಾದ ಪಾತ್ರವನ್ನುವಹಿಸುತ್ತದೆ. ಅದಕ್ಕಾಗಿ ವಿಭಕ್ತಿ ಪ್ರತ್ಯಯ ತಿಳಿಯುದು ಪರೀಕ್ಷೆಯಾ ದೃಷ್ಟಿಯಿಂದ ಬಹು ಮುಖ್ಯವಾಗುತ್ತದೆ.

ವಿಭಕ್ತಿ ಪ್ರತ್ಯಯವನ್ನು ತಿಳಿಯುವ ಮೊದಲು ನೀವು ನಾಮಪದ, ನಾಮ ಪ್ರಕೃತಿಯನ್ನು ತಿಳಿಯಬೇಕು ಏಕೆಂದರೆ ಇದು ಒಂದಕೊಂದು ಬಿಟ್ಟಿರಲಾರವು.
ಸರಿ ಹಾಗಾದ್ರೆ ಇವುಗಳ ಬಗ್ಗೆ ತಿಳಿಯೋಣ ಬನ್ನಿ.
‘ನಾಮ’ ಎಂದರೆ ವಸ್ತುಗಳ ಹೆಸರು ಎಂದರ್ಥ.
ಉದಾಹರಣೆಗೆ: ಮರ, ಕಲ್ಲು, ಮನೆ, ಮಣ್ಣು,ನೀರು ಇತ್ಯಾದಿ.
ನಾಮಪ್ರಕೃತಿ ಎಂದರೇನು? (What is Namaprakurti?)
ನಾಮಪದಗಳ ಮೂಲರೂಪವನ್ನು ನಾಮಪ್ರಕೃತಿ ಎಂದು ಕರೆಯುತ್ತಾರೆ.
ಉದಾಹರಣೆಗೆ: ‘ಮನೆ’ ಎಂಬುವುದು ನಾಮಪ್ರಕೃತಿ , ‘ಮನೆಯಲ್ಲಿ’ ಎಂಬುದು ನಾಮಪದ.
ವಿಭಕ್ತಿ ಪ್ರತ್ಯಯಗಳು ಎಂದರೇನು?
ಸ್ವತಂತ್ರವಾಗಿ ಅರ್ಥ ಕೊಡದೆ ನಾಮಪ್ರಕೃತಿಗಳ ಮುಂದೆ ಸೇರಿ ಬೇರೆ ಬೇರೆ ಅರ್ಥವನ್ನು ಕೊಡುವ ಅಕ್ಷರಗಳನ್ನು ವಿಭಕ್ತಿ ಪ್ರತ್ಯಯಗಳು ಎಂದು ಕರೆಯುತ್ತಾರೆ.
ಉದಾಹರಣೆ : ಗೆ, ಅನ್ನು, ಇಂದ, ಅಂತ್ತಣಿಂ ಇತ್ಯಾದಿ.
ನಾಮಪದ ಎಂದರೇನು?
ನಾಮಪ್ರಕೃತಿಗೆ ವಿಭಕ್ತಿ ಪ್ರತ್ಯಯಗಳು ಸೇರಿ ಆಗುವ ಪದಗಳನ್ನು ನಾಮಪದ ಎಂದು ಕರೆಯುತ್ತಾರೆ.
ಉದಾಹರಣೆ: ಮನೆಯು ಎಂಬುದು ನಾಮಪದ, ಮನೆ ಎಂಬುವುದು ನಾಮಪ್ರಕೃತಿ ಮತ್ತು ಉ ಎಂಬುದು ವಿಭಕ್ತಿ ಪ್ರತ್ಯಯ.
ಹೊಸಗನ್ನಡ ವಿಭಕ್ತಿ ಪ್ರತ್ಯಯಗಳು (Hosagannada Vibhakti pratyaya)
ವಿಭಕ್ತಿ | ಹೊಸಗನ್ನಡ ಪ್ರತ್ಯಯ | ಉದಾಹರಣೆ |
ಪ್ರಥಮಾ | ಉ | ಶಾಮನು |
ದ್ವಿತಿಯಾ | ಅನ್ನು | ಶಾಮನನ್ನು |
ತೃತಿಯಾ | ಇಂದ | ಶಾಮನಿಂದ |
ಚತುರ್ಥಿ | ಗೆ, ಇಗೆ, ಕ್ಕೆ, ಅಕ್ಕೆ | ಶಾಮನಿಗೆ |
ಪಂಚಮಿ | ದೆಸೆಯಿಂದ | ಶಾಮನ ದೆಸೆಯಿಂದ |
ಷಷ್ಠಿ | ಅ | ಶಾಮನ |
ಸಪ್ತಮಿ | ಅಲ್ಲಿ, ಅಲಿ, ಒಳ, ಎ | ಶಾಮನಲ್ಲಿ |
ಸಂಭೋಧನಾ | ಆ , ಇರಾ, ಏ, ಕೆ | ಶಾಮಾ ,ಶಾಮನೆ |
ಹೊಸಗನ್ನಡ ವಿಭಕ್ತಿ ಪ್ರತ್ಯಯಗಳು ಉದಾಹರಣೆಗಳು
- ರಾಮನು, ರಾಮನನ್ನು, ರಾಮನು, ರಾಮನಲ್ಲಿ, ರಾಮ, ರಾಮನಿಗೆ .
- ಸೀತೆಯು, ಸೀತೆಯನ್ನು, ಸೀತೆಯ, ಸೀತೆ.
ಹಳೆಗನ್ನಡ ವಿಭಕ್ತಿ ಪ್ರತ್ಯಯ
ವಿಭಕ್ತಿ | ಹಳೆಗನ್ನಡ ಪ್ರತ್ಯಯ | ಉದಾಹರಣೆ |
ಪ್ರಥಮಾ | ಮ್ | ಶಾಮಮ್ |
ದ್ವಿತಿಯಾ | ಅಂ | ಶಾಮಕಂ |
ತೃತಿಯಾ | ಇಂ, ಇಂದಂ | ಶಾಮನಿಂ, ಶಾಮನಿಂದಂ |
ಚತುರ್ಥಿ | ಗೆ, ಕೆ, ಕ್ಕೆ | ಶಾಮಗೆ |
ಪಂಚಮಿ | ಅತ್ತಿಣಿಂ ,ಅತ್ತಣಿದಂ, ಅತ್ತಣಿಂದ | ಶಾಮನತ್ತಣಿಂ |
ಷಷ್ಠಿ | ಅ | ಶಾಮಾ |
ಸಪ್ತಮಿ | ಒಳ್ | ಶಾಮನೊಳ |
ಸಂಭೋಧನಾ | ಆ , ಇರಾ,ಏ, ಕೆ | ಶಾಮನೆ |
ಹಳೆಗನ್ನಡ ವಿಭಕ್ತಿ ಪ್ರತ್ಯಯ ಉದಾಹರಣೆ
ಶಾಮಮ್, ಶಾಮಕಂ, ಶಾಮನಿಂ, ಶಾಮನಿಂದಂ, ಶಾಮನತ್ತಣಿಂ etc..
Read more: thekannadanews