5 ನಿಮಿಷದಲ್ಲಿ ಎಗ್ ರೈಸ್ ಮಾಡುವ ವಿಧಾನ|5 minute Egg Rice Recipe in Kannada

Egg Rice Recipe in Kannada: ಎಗ್ ರೈಸ್ ಮಾಡುವುದು ಹೇಗೆ? ಎಗ್ ರೈಸ್ ಅಂದ್ರೆ ಎಲ್ಲರಿಗೂ ಇಷ್ಟ, ಹೊರಗೆ ಹೋಗಿ ತಿನ್ನೋಣ ಅಂದ್ರೆ ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಯಾಕೆಂದ್ರೆ ಹೊರಗಡೆ ಮಾಡುವ ತಿಂಡಿಯಲ್ಲಿ ತುಂಬಾ ಎಣ್ಣೆ, ಮಸಾಲ ಪದಾರ್ಥ ಹಾಕುತ್ತಾರೆ ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.

ಅದಕ್ಕಾಗಿ ನಾನು ಇವತ್ತು ನಿಮಗೆ ರುಚಿಕರವಾದ ಎಗ್ ರೈಸ್ ಮಾಡುವ ವಿಧಾನವನ್ನೂ ತಿಳಿಸಿಕೊಡುತ್ತದೆ. ತದ ಏಕೆ ಶುರು ಮಾಡೋಣ.

ಎಗ್ ರೈಸ್ ಮಾಡಲು ಬೇಕಾಗುವ ಸಾಮಾಗ್ರಿಗಳು (Item Required for Doing Egg Rice Recipe in Kannada)

 • ಒಂದು ಬಟ್ಟಲು ಅನ್ನ
 • 2ರಿಂದ 3 ಮೊಟ್ಟೆ
 • 3-4 ಚಮಚ ಎಣ್ಣೆ
 • ನಿಂಬೆಹಣ್ಣು(ಅರ್ಧ ಹೋಳು)
 • ರುಚಿಗೆ ತಕ್ಕಷ್ಟು ಉಪ್ಪು
 • 1 ಈರುಳ್ಳಿ (ಚೆನ್ನಾಗಿ ಹೆಚ್ಚಿದ)
 • ಒಂದು ಚಮಚ ಸಾಸಿವೆ ಜೀರಿಗೆ
 • 6-7 ಹಸಿ ಮೆಣಿನಕಾಯಿ( ಖಾರನು ಉಪಯೋಗಿಸಬಹುದು)
 • 1 1/2(ಒಂದೂವರೆ) ಶುಂಠಿ ಬೆಳ್ಳುಳ್ಳಿ ಪೇಸ್ಟ್
 • 1 1/2 ಮಸಾಲ
 • ಸ್ವಲ್ಪ ಕೊತ್ತಂಬರಿ ಸೊಪ್ಪು
 • ಒಂದು ಚಿಟಿಕೆ ಅರಿಶಿನ ಪುಡಿ
 • 2 ಚಮಚ ಕಡ್ಲೆಬೇಳೆ

ಎಗ್ ರೈಸ್ ಹೇಗೆ ಮಾಡ ಬೇಕು ನೋಡೋಣ (Let see How To Prepare Egg Rice Recipe in Kannada)

 • ಮೊದಲು ಒಂದು ಪ್ಯಾನನಲ್ಲಿ 3 ರಿಂದ 4 ಚಮಚ ಎಣ್ಣೆ ಹಾಕಿ.
 • ಅದರಲ್ಲಿ ಸಾಸಿವೆ, ಜೀರಿಗೆ, ಕರಿಬೇವು,ಕಡ್ಲೆಬೇಳೆ ಹಾಕಿ ಚೆನ್ನಾಗಿ ಫ್ರೈ ಮಾಡಿ.
 • ತದನಂತರ ಅದರಲ್ಲಿ ಹಸಿ ಮೆಣಸಿನಕಾಯಿ,ಬೆಳ್ಳುಳ್ಳಿ,ಶುಂಠಿ.
 • ಪೇಸ್ಟ್,ಈರುಳ್ಳಿ ಮತ್ತು ಸ್ವಲ್ಪ ಅರಶಿನ ಹಾಕಿ ಅದು ಫ್ರೈ ಆಗೋವರೆಗೂ ಕಾಯಿರಿ.
 • ಫ್ರೈ ಅದಾ ನಂತರ ಮೊಟ್ಟೆಯನ್ನೂ ಒಡೆದು ಹಾಕಿ ಕಲಸಿ ಆಮೇಲೆ ಎರಡು ನಿಮಿಷ ಹಾಗೆ ಬಿಡಿ.
 • ಮೊಟ್ಟೆ ಫ್ರೈ ಆದಮೇಲೆ ಅದಕ್ಕೆ ಬೇಯಿಸಿದ ಅನ್ನ, ಕೊತ್ತಂಬರಿ ಸೊಪ್ಪು, ಮಸಾಲ ಮಿಕ್ಸ್ ಮಾಡಿ ಚೆನ್ನಾಗಿ ಕಲಸಿ.
 • ಆಮೇಲೆ ಅರ್ಧ ಹೋಳು ನಿಂಬೆ ಹಿಂಡಿ ಮತ್ತೆ ಕಲಿಸಿ.
 • ಈಗ ನೋಡಿ ನಿಮ್ಮ ರುಚಿಕರ ಎಗ್ ರೈಸ್ ಸವಿಯಲು ಸಿದ್ಧವಾಗಿದೆ.

ನೋಡಿದಿರಾ ಗೆಳೆಯರೇ ಎಗ್ ರೈಸ್ ಮಾಡುವ ವಿಧಾನ

Leave a Comment