ಮಕ್ಕಳ ದಿನಾಚರಣೆ ಬಗ್ಗೆ ಭಾಷಣ | Children Day Speech in Kannada
ನನ್ನ ಗೌರವಾನ್ವಿತ ಶಿಕ್ಷಕರು ಮತ್ತು ನನ್ನ ಆತ್ಮೀಯ ಸಹೋದ್ಯೋಗಿಗಳಿಗೆ ಶುಭೋದಯಗಳು. ಇಂದು ನಾವು ಸೇರಿಕೊಂಡಿರುದೊ ಮಕ್ಕಳ ದಿನಾಚರಣೆಯನ್ನು ಮತ್ತು ಮಾಜಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಹುಟ್ಟಿದ ದಿನವನ್ನು ಆಚರಿಸಲು ಬಂದಿದ್ದೇವೆ. ನಾನು ಚಾಚಾ ನೆಹರು ಜನ್ಮದಿನದ ಮತ್ತು ಮಕ್ಕಳ ದಿನಾಚರಣೆಯ ಇತಿಹಾಸದ ಬಗ್ಗೆ ಕೆಲವು ಮಾತುಗಳನ್ನು ಆಡಲು ಬಯಸುತ್ತೇನೆ.
ಪ್ರತಿ ವರ್ಷ ಭಾರತದಲ್ಲಿ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು ಇಡಿ ಭಾರತಾದ್ಯಂತ ಆಚರಿಸಲಾಗುವುದು. ಈ ದಿನವೂ ಮಾಜಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಹುಟ್ಟಿದ ದಿನವಾಗಿದ್ದು ಅವರ ನೆನಪಿಗಾಗಿ ಇದನ್ನೂ ಆಚಾರಿಸುತ್ತಾರೆ.
ಇದಕ್ಕೂ ಮೊದಲು ಭಾರತದಲ್ಲಿ ವಿಶ್ವಸಂಸ್ಥೆ ಹೇಳಿದ ಹಾಗೆ ನವೆಂಬರ್ 20 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು ಆದರೆ ಚಾಚಾ ನೆಹರು ಅವರ ನಿಧನದ ನಂತರ ಭಾರತ ಸರ್ಕಾರವು ಚಾಚಾ ನೆಹರು ಅವರ ನೆನಪಿಗಾಗಿ ಅವರ ಹುಟ್ಟಿದ ದಿನದಂದು ಮಕ್ಕಳ ದಿನಾಚರಣೆ ಆಚರಿಸಬೇಕೆಂದು ಆದೇಶ ಹೊರಡಿಸಿದೆ.
ಮಾಜಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಮಕ್ಕಳು ‘ಚಾಚಾ ನೆಹರು’ ಎಂದು ಕರೆಯುತ್ತಿದ್ದರು, ಇವರು ಸ್ವಾತಂತ್ರ ಹೋರಾಟಗಾರರಲ್ಲಿ ಒಬ್ಬರಾಗಿದ್ದವರು, ಇವರು ಮಕ್ಕಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಮತ್ತು ಶಿಕ್ಷಣಕ್ಕೆ ಬಹಳ ಮಹತ್ವ ಕೊಟ್ಟಿದ್ದರು. ಮಕ್ಕಳಿಗೆ ಯಾವಾಗಲೂ ಇಂದು ನಮ್ಮ ಕಾಲ ಆದರೆ ‘ Tommarow is yours ‘ ಎಂದು ಹೇಳುತ್ತಿದ್ದರು ಅಂದರೆ ನಾಳೆ ನಿಮ್ಮದು ಈ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದರ್ಥ.
ಇಷ್ಟೂ ಹೇಳಿ ನನ್ನ ಭಾಷಣ ಮುಗಿಸುತ್ತೇನೆ ಜೈ ಹಿಂದ.