ಅಂತಾರಾಷ್ಟ್ರೀಯ ಪರ್ವತ ದಿನ 2021: ಇದರ ಉದ್ದೇಶ,ಮಹತ್ವ, ಉಲ್ಲೇಖಗಳ ಬಗ್ಗೆ ತಿಳಿಯಿರಿ|International Mountain Day 2021: Learn about its significance,quotes,theme in Kannada

ಅಂತಾರಾಷ್ಟ್ರೀಯ ಪರ್ವತ ದಿನ 2021: ಇದರ ಉದ್ದೇಶ,ಮಹತ್ವ, ಉಲ್ಲೇಖಗಳ ಬಗ್ಗೆ ತಿಳಿಯಿರಿ|International Mountain Day 2021: Learn about its significance,quotes,theme in Kannada

ಅಂತರರಾಷ್ಟ್ರೀಯ ಪರ್ವತ ದಿನವನ್ನು ಪ್ರತಿ ವರ್ಷ ಡಿಸೆಂಬರ್ 11 ರಂದು ಇಡೀ ವಿಶ್ವದಲ್ಲೇ ಆಚರಿಸಲಾಗುತ್ತದೆ. ಈ ದಿನದ ಮುಖ್ಯ ಉದ್ದೇಶ( Theme) ಸುಸ್ಥಿರ ಪರ್ವತ ಅಭಿವೃದ್ಧಿಯನ್ನು ಉತ್ತೇಜಿಸುವುದಾಗಿದೆ. ಇದನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA) ಗೊತ್ತುಪಡಿಸಿದ.

ಅಂತಾರಾಷ್ಟ್ರೀಯ ಪರ್ವತ ದಿನ 2021: ಇದರ ಉದ್ದೇಶ,ಮಹತ್ವ, ಉಲ್ಲೇಖಗಳ ಬಗ್ಗೆ ತಿಳಿಯಿರಿ|International Mountain Day 2021: Learn about its significance,quotes,theme in Kannada
Mountain Img credit: Pixabay

ಏಕೆ ಅಂತಾರಾಷ್ಟ್ರೀಯ ಪರ್ವತ ದಿನವನ್ನು ಇಡೀ ವಿಶ್ವದಲ್ಲೇ ಆಚರಿಸುತ್ತಾರೆ? (Why is international Mountain Day is celebrated in the World)

ವಿಶ್ವ ಸಂಸ್ಥೆ ಪ್ರಕಾರ ಇದನ್ನು ಪ್ರತಿವರ್ಷ ಆಚರಿಸಲಾಗುತ್ತದೆ ಏಕೆಂದರೆ  ಪರ್ವತ ನಮ್ಮ ಪ್ರಕೃತಿಗೆ ಎಷ್ಟು ಮುಖ್ಯ,ಅದು ನಮ್ಮ ಜನ ಜೀವನದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಮತ್ತು ಈ ಪರ್ವತ ಸಂಪತ್ತನ್ನು ಸಂರಕ್ಷಿಸಲು ಜನ ಜಾಗೃತಿ ಮೂಡಿಸಲು ಇದನ್ನು ಆಚರಿಸಲಾಗುತ್ತದೆ.

ಪರ್ವತದಲ್ಲಿ ಅನೇಕ ಗಿಡ ಮರಗಳು,ಪ್ರಾಣಿಗಳು ,ಪಕ್ಷಿಗಳು ವಾಸಿಸುತ್ತವೆ ಮತ್ತು ಇದು ವಾತಾವರಣ ಬದಲಾವಣೆಗೂ ಕಾರಣವಾಗುತ್ತದೆ ಅದಕ್ಕಾಗಿ ಇದನ್ನು ರಕ್ಷಿಸ ಬೇಕೆಂದು ವಿಶ್ವ ಸಂಸ್ಥೆ ಇದನ್ನೂ ಆಚರಿಸುತ್ತದೆ.

ಅಂತಾರಾಷ್ಟ್ರೀಯ ಪರ್ವತ ದಿನದ ವಿಷಯ ಉದ್ದೇಶ (International Mountain Day Theme)

ಈ ವರ್ಷದ ವಿಷಯ ಅಥವಾ ಉದ್ದೇಶ ಸುಸ್ಥಿರ ಪರ್ವತ ಅಭಿವೃದ್ಧಿ, ಪ್ರವಾಸೋದ್ಯಮವಾಗಿದೆ. ಈ ಕೊವಿಡನ ದುರಂತದಿಂದಾಗಿ ಪ್ರವಾಸೋದ್ಯಮ ಮಾರುಕಟ್ಟೆ ಕುಸಿದು ಬಿದ್ದಿದೆ. ಯುಯನ್(UN) ಪ್ರಕಾರ ಒಟ್ಟು ಶೇಕಡಾ 15-20 ಜನರನ್ನು ಪ್ರವಾಸಿಗರನ್ನು ಈ ಪರ್ವತಗಳು ತನ್ನ ಕಡೆಗೆ ಸೆಳೆಯುತ್ತವೆ.

ಅಂತಾರಾಷ್ಟ್ರೀಯ ಪರ್ವತ ದಿನದ ಮಹತ್ವ (International Mountain Day Significance)

ಯುಯನ್(UN) ಪ್ರಕಾರ ಈ ಪರ್ವತದ ಅಂಚಿನಲ್ಲಿ ಅನೇಕ ಜಿವಜಂತುಗಳು ಜೀವಿಸುತ್ತವೆ. ಶೇಕಡಾ 15ರಷ್ಟು ಜನ ಈ ಪರ್ವತದ ಸ್ಥಳದಲ್ಲೀ ವಾಸಿಸುತ್ತವೆ. ಈ ಪರ್ವತಗಳು ನಾಶವಾಗುತ್ತ ಹೋದರೆ ಪ್ರಕೃತಿಯಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ ಎಂದು ಹೇಳಿದೆ. ಅದಕ್ಕಾಗಿ ಇದನ್ನು ರಕ್ಷಿಸಬೇಕೆಂಬ ನಿಟ್ಟಿನಲ್ಲಿ ಇದನ್ನು 2003 ರಿಂದ ಡಿಸೆಂಬರ್ 11ರಂದು ಅಂತಾರಾಷ್ಟ್ರೀಯ ಪರ್ವತ ದಿನವನ್ನಾಗಿ ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಪರ್ವತ ದಿನದ ಉಲ್ಲೇಖಗಳು (Quote of International Mountain Day)

ಪರ್ವತಗಳು ನನ್ನನ್ನು ಕರೆಯುತ್ತಿದೆ,ನಾನು ಹೋಗಲೇ ಬೇಕು – ಜಾನ್ ಮುಯಿರ್ ಪರಿಸರದ ತತ್ವ್ಞಾನಿ

ಜೀವನವೊಂದು ಪರ್ವತ ಹತ್ತುವ ಹಾಗೆ ಎಂದಿಗೂ ಕೆಳಗೆ ನೋಡಬೇಡಿ (ಹಿಂದಕ್ಕೆ ನೋಡಬೇಡಿ) – ಸರ್ ಎಡ್ಮಂಡ್ ಹಿಲರಿ, ಪರ್ವತಾರೋಹಿ

Leave a Comment