ಲೋಪ ಸಂಧಿ ಎಂದರೇನು ? ಲೋಪ ಸಂಧಿಯ ಉದಾಹರಣೆಗಳು (lopa Sandhi meaning, lopa sandhi examples in kannada)( lopa sandhi udhaharanegalu)
ಈ ಲೇಖನದಲ್ಲಿ ನೀವು ಲೋಪ ಸಂಧಿ ಎಂದರೇನು ಇದರ ಉದಾಹರಣೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುತ್ತಿರಿ. ಲೋಪ ಸಂಧಿ ಇದು ಒಂದು ಕನ್ನಡ ಸಂಧಿಯಲ್ಲಿ ಬರುವ ಒಂದು ವಿಧದ ಸ್ವರ ಸಂಧಿಯಾಗಿದೆ.
ಲೋಪ ಸಂಧಿ ಎಂದರೇನು? (What is lopa Sandhi in Kannada?)
‘ಲೋಪ‘ ಎಂದರೆ ಬಿಟ್ಟು ಹೋಗುವುದು ಎಂದು ಅರ್ಥ ಕೊಡುತ್ತದೆ.
ಸಂಧಿ ಕಾರ್ಯವಾಗುವಾಗ ಸ್ವರದ ಮುಂದೆ ಸ್ವರ ಬಂದು ಅಲ್ಲಿ ಸಂಧಿ ಕಾರ್ಯ ನಡೆದಾಗ ಮೊದಲ ಪದದ ಸ್ವರವು ಲೋಪವಾಗುತ್ತದೆ ಅಂದರೆ ಬಿಟ್ಟು ಹೋಗುತ್ತದೆ, ಇದನ್ನೆ ಲೋಪ ಸಂಧಿ ಎಂದು ಕರೆಯುತ್ತಾರೆ.
ಒಂದು ವಿಷ ನೆನಪಿಟ್ಟುಕೊಳ್ಳಿ, ಸಂಧಿಕಾರ್ಯ ನಡೆದಾಗ ಸ್ಪರ ಲೋಪವಾದರೆ ಅಥ೯ ಕೆಡಬಾರದು ಒಂದುವೇಳೆ ಕೆಟ್ಟರೆ ಅದು ಲೋಪ ಸಂಧಿ ಎನಿಸಿಕೊಳ್ಳುವುದಿಲ್ಲ.
ಉದಾ: ಮನೆ + ಇಂದ = ಮನಿಂದ
ಇದರಲ್ಲಿ ಅರ್ಥ ಕೆಟ್ಟಿದೆ ಇದಕ್ಕಾಗಿ ಇದು ಲೋಪ ಸಂಧಿ ಅಲ್ಲ.
ಅದಕ್ಕಾಗಿ ಇದನ್ನು ನಾವು ಹೀಗೂ ಹೇಳಬಹುದು, ಸ್ವರದ ಮುಂದೆ ಸ್ಪರ ಬಂದು, ಅಲ್ಲಿ ಸಂಧಿ ಕಾರ್ಯ ನಡೆದಾಗ ಅಲ್ಲಿ ಅರ್ಥ ಕೇಡದೆ ಲೋಪವಾದರೆ ಅದನ್ನು ಲೋಪ ಸಂಧಿ ಎನ್ನುವರು.
ಲೋಪ ಸಂಧಿಯ ಉದಾಹರಣೆಗಳು (lopa sandhi examples in kannada)
- ಇವನ + ಊರು = ಇವನೂರು ( ಅ + ಉ = ಉ)
- ಉಸಿರು + ಇರಲಿ = ಉಸಿರಿರಲಿ (ಉಕಾರ ಲೋಪ)
- ಹೆಣ್ಣು + ಆಗು = ಹೆಣ್ಣಾಗು (ಉಕಾರ ಲೋಪ)
- ಕುರುಹು + ಇರಲಿ = ಕುರುಹಿರಲಿ (ಉಕಾರ ಲೋಪ)
- ನನಗೆ + ಒಟ್ಟಿಗೆ = ನನ್ನೊಟ್ಟಿಗೆ (ಏಕಾರ ಲೋಪ)
- ನಗತ+ ಇರಲಿ = ನಗುತಿರಲಿ (ಉಕಾರ ಲೋಪ)
- ಮಾತು + ಇಲ್ಲ = ಮಾತಿಲ್ಲ (ಉಕಾರ ಲೋಪ)
- ನನಗೆ + ಅಲ್ಲದೆ = ನನಗಲ್ಲದೆ (ಎಕಾರ ಲೋಪ)
- ಹರಿವು + ಆಗಿ = ಹರಿವಾಗಿ (ಉಕಾರ ಲೋಪ)
- ನೀವು + ಎಲ್ಲ = ನೀವೆಲ್ಲಾ (ಉಕಾರ ಲೋಪ)
- ಕೂಸು + ಅನ್ನು = ಕೂಸನ್ನು (ಉಕಾರ ಲೋಪ)
- ಇವನು + ಆರು = ಇವನಾರು (ಉಕಾರ ಲೋಪ)
- ನಾಡು + ಇಗೆ = ನಾಡಿಗೆ (ಉಕಾರ ಲೋಪ)
- ಊರು + ಊರು = ಊರೂರು (ಉಕಾರ ಲೋಪ)
- ಏನು+ಏನು = ಏನೇನು (ಉಕಾರ ಲೋಪ)
- ಅದು + ಏನು = ಅದೇನು (ಉಕಾರ ಲೋಪ)
- ಹಣದ +ಆಸೆ = ಹಣದಾಸೆ (ಅಕಾರ ಲೋಪ)
- ಏನು + ಆದುದು = ಏನಾದುದು (ಉಕಾರ ಲೋಪ)
- ಬೇರೆ + ಒಬ್ಬ =ಬೇರೊಬ್ಬ (ಏಕಾರ ಲೋಪ)
- ನನಗೆ + ಅಲ್ಲದೆ = ನನಗಲ್ಲದೆ (ಏಕಾರ ಲೋಪ)
- ನಿನ್ನ + ಒಟ್ಟಿಗೆ = ನನ್ನೊಟ್ಟಿಗೆ (ಅಕಾರ ಲೋಪ)
- ಅವನು+ಆರು = ಅವನಾರು (ಉಕಾರ ಲೋಪ)