ವ್ಯಂಜನಗಳು- ಕನ್ನಡ ವ್ಯಾಕರಣ|Vyanajanagalu in Kannada

ಕನ್ನಡ ವ್ಯಾಕರಣದ ವ್ಯಂಜನಗಳು,ವ್ಯಂಜನಗಳು ಕನ್ನಡದಲ್ಲಿ ( Kannada swaragalu vyanajanagalu, kannada vyanajanagalu

ನಮಸ್ತೆ ಗೆಳೆಯರೆ, ಹಿಂದಿನ ಲೇಖನದಲ್ಲಿ ನಲ್ಲಿ ಕನ್ನಡ ವ್ಯಾಕರದಲ್ಲಿ ಬರುವ ಸ್ವರಗಳ (swaragalu in kannada) ಬಗ್ಗೆ ಅಧ್ಯಯನ ಮಾಡಿದ್ದೀರಿ, ಇಂದಿನ ಲೇಖನದಲ್ಲಿ ಕನ್ನಡ ವ್ಯಂಜನಗಳ (Vyanajanagalu in Kannada) ಬಗ್ಗೆ ತಿಳಿಯೋಣ.

ಕನ್ನಡ ವ್ಯಂಜನಗಳು ಕನ್ನಡ ಭಾಷೆಯಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ. ಒಟ್ಟು 34 ವ್ಯಂಜನಗಳಿದ್ದು ಅದರಲ್ಲಿ 2 ವಿಭಾಗಗಳಾಗಿ ವರ್ಗೀಕರಿಸಬಹುದು.

ವ್ಯಂಜನಗಳನ್ನು ಪರೀಕ್ಷೆ ದೃಷ್ಟಿ ಕೋನದಿಂದ ನೋಡಿದರೆ, ಇದು ಬಹು ಮುಖ್ಯ ಪಾತ್ರವಹಿಸುತ್ತದೆ, ಏಕೆಂದರೆ ಇದನ್ನು ಪ್ರಾಥಮಿಕ ಶಾಲೆಯಲ್ಲಿ, ಕಾಲೇಜಿನಲ್ಲಿ ಮತ್ತು ಇತರೆ ಸ್ಪರ್ಧಾ ಪರೀಕ್ಷೆಯಲ್ಲಿ ಬಹಳ ಸಲ ಕೇಳಿದ್ದಾರೆ ಮತ್ತು ಮುಂದೆ ಕೇಳುತ್ತಾರೆ ಕೂಡ, ಅದಕ್ಕಾಗಿ ಇದನ್ನು ಮನಗಟ್ಟು ಮಾಡಿಕೊಳ್ಳಿ ಹಾಗೂ ಇದನ್ನು ನಿಮ್ಮ ಗೆಳೆಯರ ಜೊತೆ ಶೇರ್ ಮಾಡಿ.

Kannada vyanajanagalu ವ್ಯಂಜನಗಳು – 34


ಸ್ವತಂತ್ರವಾಗಿ ಉಚ್ಚರಿಸಲು ಸಾಧ್ಯವಾಗದ ಅಥವಾ ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವಂತಹ ಅಕ್ಷರಗಳಿಗೆ ವ್ಯಂಜನಗಳೆಂದು ಕರೆಯುತ್ತಾರೆ.

ಸ್ವರಗಳು ಇಲ್ಲದಿದ್ದರೆ ಅಪೂರ್ಣವಾದ ಅರ್ಥ ಕೊಡುತ್ತವೆ.

ಈ ವ್ಯಂಜನಗಳಲ್ಲಿ ಎರಡು ವಿಧಗಳು:

1) ವರ್ಗೀಯ ವ್ಯಂಜನಗಳು – 25
2) ಅವರ್ಗೀಯ ವ್ಯಂಜನಗಳು – 9

1) ವರ್ಗೀಯ ವ್ಯಂಜನಗಳು – 25 (Vargiya vyanjana galu in Kannada)

ವರ್ಗೀಯ ವ್ಯಂಜನಗಳು (Vargeeya vyanjanagalu) ಇದು ಮೊದಲ ವಿಂಗಡನೆಯಾಗಿದ್ದು, ಇದರಲ್ಲಿ ಒಟ್ಟು 25 ಅಕ್ಷರಗಳಿವೆ. ಇದನ್ನು ಮತ್ತೆ 5 ವರ್ಗಗಳಾಗಿ ವಿಂಗಡನೆಮಾಡಲಾಗಿದೆ. ಇದರ ಬಗ್ಗೆ ಮತ್ತಷ್ಟೂ ತಿಳಿಯೋಣ.

‘ಕ್’ ಯಿಂದ ‘ಮ್’ ವರೆಗಿನ 25 ಅಕ್ಷರಗಳನ್ನು ವರ್ಗಿಯ ವ್ಯಂಜನವೆಂದು ಕರೆಯುತ್ತಾರೆ. ಇವು ಬಾಯಿಯ ಯಾವ ಭಾಗದಿಂದ ಹುಟ್ಟುತ್ತವೆ ಎಂಬುದರ ಆಧಾರದ ಮೇಲೆ ವ್ಯಂಜಗಳನ್ನು ವರ್ಗಿಕರಿಸಲಾಗಿದೆ.

ಇದರಲ್ಲಿ 5 ವರ್ಗಗಳಿವೆ.

ಕ್ ವರ್ಗ (5) – ಕ್ ಖ್ ಗ್ ಘ್ ಓ
ಚ್ ವರ್ಗ(5) – ಚ್ ಛ್ ಜ್ಯೂ ಝ್ ಞ
ಟ್ ವರ್ಗ (5) – ಟ್ ಠ್ ಡ್ ಢ್ ಣ್
ತ್ ವರ್ಗ (5) – ತ್ ಥ್ ದ್ ಧ್ ನ್
ಪ್ ವರ್ಗ (5) – ಪ್ ಫ್ ಬ್ ಭ ಮ್

ವರ್ಗೀಯ ವ್ಯಂಜನಗಳಲ್ಲೂ ಕೂಡ ಮೂರು ವಿಧಗಳಿವೆ. ಅವುಗಳೆ

  1. ಅಲ್ಪ ಪ್ರಾಣ – 10
  2. ಮಹಾಪ್ರಾಣ – 10
  3. ಅನುನಾಸಿಕ – 5

1.ಅಲ್ಪಪ್ರಾಣ- 10

ಕಡಿಮೆ ಸಮಯ ತೆಗೆದುಕೊಂಡು ಉಚ್ಚರಿಸುವಂತಹ ವ್ಯಂಜನಗಳಿಗೆ ಅಲ್ಪಪ್ರಾಣ ಎನ್ನುವರು. (ಪ್ರತಿ ವರ್ಗದ ಪ್ರಥಮ ಹಾಗೂ ತೃತೀಯ ಅಕ್ಷರಗಳು)

ಉದಾ: ಕ್, ಟ್, ಚ್ etc..

ಅಲ್ಪಪ್ರಾಣಗಳ ಸಂಖ್ಯೆ ಒಟ್ಟು 10

2.ಮಹಾ ಪ್ರಾಣ – 10

ಹೆಚ್ಚು ಸಮಯ ತೆಗೆದುಕೊಂಡು ಉಚ್ಚರಿಸುವಂತಹ ವ್ಯಂಜನಗಳಿಗೆ ಮಹಾಪ್ರಾಣ ಎನ್ನುವರು. (ಪ್ರತಿ ವರ್ಗದ ದ್ವಿತೀಯ ಹಾಗೂ ಚತುರ್ಧಾಕ್ಷರಗಳು)
ಉದಾ: ಖ್, ಛ್, etc…

ಮಹಾಪ್ರಾಣಗಳ ಸಂಖ್ಯೆ ಒಟ್ಟು 10

3.ಅನುನಾಸಿಕ – 10

ಮೂಗಿನ ಸಹಾಯ ತೆಗೆದುಕೊಂಡ ಉಚ್ಚರಿಸುವಂತಹ ವ್ಯಂಜನಗಳಿಗೆ ಅನುನಾಸಿಕ ಎ೦ದು ಕರೆಯುತ್ತಾರೆ.(ಪ್ರತಿ ವರ್ಗದ ಪಂಚಮಾಕ್ಷರಗಳು)
ಉದಾ : ಣ್, ನ್, ಮ್, etc…

ಅನುನಾಸಿಕಗಳ ಸಂಖ್ಯೆ ಒಟ್ಟು 10

2) ಅವರ್ಗೀಯ ವ್ಯಂಜನಗಳು:9 (Kannada Avargeeya vyanajana galu)

ಅವರ್ಗೀಯ ವ್ಯಂಜನಗಳು (Avargiya vyanajana galu) ಇದು ವ್ಯಂಜನಗಳ ಏರಡನೆ ವಿಧವಾಗಿದ್ದು ಇದರಲ್ಲಿ ಒಟ್ಟು 9 ಅಕ್ಷರಗಳಿವೆ.

ವರ್ಣಮಾಲೆಯ ಕೊನೆಯ ಒಂಬತ್ತು ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳು ಎನ್ನುವರು.

ಉದಾ: ಯ ರ ಲ ವ ಶ ಷ ಸ ಹ ಳ.

ಯೋಗವಾಹಗಳು – 2 (yogavahagalu in kannada)

ಯೋಗವಾಹಗಳ ಒಟ್ಟು ಸಂಖ್ಯೆ 2, ಅದರಲ್ಲಿ ಅನುಸ್ವರ ಮತ್ತು ವಿಸರ್ಗವೆಂದು ವಿಂಗಡನೆ ಮಾಡಲಾಗಿದೆ.


ಯೋಗ ಅಂದರೆ ‘ಸಂಬಂಧ‘ ವಾಹ ಎಂದರೆ ‘ಹೊಂದಿದ ‘ , ಎಂಬ ಅರ್ಥ ಕೊಡುತ್ತದೆ. ಯಾವುದಾದರೂ ಸ್ವರಗಳ ಜೊತೆ ಸೇರಿ ಅಥವಾ ಸಂಬಂಧ ಹೊಂದಿದ ಅಕ್ಷರಗಳಿಗೆ ಯೋಗವಾಹಗಳೆಂದು ಕರೆಯುವುದುಂಟು.

ಯೋಗವಾಹಗಳು ಇದರಲ್ಲಿ ಎರಡು ಪ್ರಕಾರಗಳಿವೆ.

  1. ಅನುಸ್ವರ (0)
    ಉದಾ: ಅಂ, ಕಂ, etc…
  2. ವಿಸರ್ಗ (ಃ)
    ಉದಾ: ಅಃ,ಕಃ etc…

ಯಾವ ಅಕ್ಷರಗಳು ಎಲ್ಲೆಲ್ಲಿ ಹುಟ್ಟುತ್ತವೆ ಎಂಬುದರ ಆಧಾರದ ಮೇಲೆ ಅಕ್ಷರಗಳನ್ನು ಪುನಃ ವಿಂಗಡಿಸಲಾಗಿದೆ.

ಕಂಠ್ಯ ವರ್ಣ– ಕಂಠದಲ್ಲಿ ಹುಟ್ಟುವ ಅಕ್ಷರವನ್ನು ಕಂಠ್ಯ ವರ್ಣ ಎನ್ನುವರು.

ಉದಾ: ಅ, ಆ ಕ ಖ ಗ ಘ ಓ ಶ & ವಿಸರ್ಗ (ಃ).

ಮೂರ್ಧನ್ಯ : ತಾಲುವಿನಲ್ಲಿ ಹುಟ್ಟುವ ಅಕ್ಷರವನ್ನು ಮೂರ್ಧನ್ಯ ವರ್ಣ ಎನ್ನುವರು.

ಉದಾ: ಇ ಈ ಚ ಛ ಜ ಝ ಞ ಯ ಶ

ದಂತ್ಯ ವರ್ಣ: ಹಲ್ಲುಗಳಲ್ಲಿ ಹುಟ್ಟುವ ಅಕ್ಷರವನ್ನು ದಂತ್ಯ ವರ್ಣ ಎನ್ನುವರು.

ಉದಾ: ತ ಥ ದ ಧ ನ ಲ ಸ

ಮೂರ್ಧನ್ಯ : ನಾಲಿಗೆಯ ಮೇಲಿನ ಭಾಗದಲ್ಲಿ ಹುಟ್ಟುವ ಅಕ್ಷರವನ್ನು ಮೂರ್ಧನ್ಯ ವರ್ಣ ಎನ್ನುವರು.

ಉದಾ: ಋ ಟ ಠ ಡ ಢ ಣ ರ ಷ

ಜಷ್ಯ ವರ್ಣ : ತುಟಿಯಲ್ಲಿ ಹುಟ್ಟುವ ಅಕ್ಷರವನ್ನು ಜಷ್ಯ ವರ್ಣ ಎನ್ನುವರ

ಉದಾ: ಉ ಊ ಪ ಫ ಬ ಭ ಮ.

ಅನುನಾಸಿಕ ವರ್ಣ: ನಾಸಿಕದಲ್ಲಿ ಹುಟ್ಟುವ ಅಕ್ಷರವನ್ನು ಜಷ್ಯ ವರ್ಣ ಎನ್ನುವರ

ಉದಾ: ಓ, ಞ ಣ ನ ಮ.

ಕಂಠತಾಲು: ಕಂಠ ತಾಲುವಿನಲ್ಲಿ ಹುಟ್ಟುವ ಅಕ್ಷರವನ್ನು ಕಂಠತಾಲು ಎನ್ನುವರು.

ಉದಾ: ಎ ಏ ಐ

ಕಂಠೋಪ್ಯ : ಕಂಠ & ತುಟಿಯಲ್ಲಿ ಹುಟ್ಟುವ ಅಕ್ಷರವನ್ನು ಕಂಠೋಪ್ಯ ಎನ್ನುವರು.

ಉದಾ: ಒ ಓ ಔ .

ದಂತೋಷ್ಯ : ಹುಲ್ಲು & ತುಟಿಯಲ್ಲಿ ಹುಟ್ಟುವ ಅಕ್ಷರವನ್ನು ದಂತೋಷ್ಯ ಎನ್ನುವರು.

ಉದಾ: ವ

ಕಂಠನಾಸಿಕ : ಕಂಠ & ನಾಸಿಕದಲ್ಲಿ ಹುಟ್ಟುವ ಅಕ್ಷರವನ್ನು ಕಂಠನಾಸಿಕ ಎನ್ನುವರು

ಉದಾ: ಅನುಸ್ವರ (0) .

ಕನ್ನಡ ವ್ಯಂಜನಗಳು ಎಸ್ಟು?

ಕನ್ನಡ ವ್ಯಂಜನಗಳು 34.

ಕನ್ನಡ ವ್ಯಂಜನಗಳಲ್ಲಿ ಎಸ್ಟು ವಿಧಗಳು?

ವ್ಯಂಜನಗಳಲ್ಲಿ 2 ವಿಧ 1.ವರ್ಗೀಯ ವ್ಯಂಜನಗಳು 2. ಅವರ್ಗೀಯ ವ್ಯಂಜನಗಳು.

ಎಸ್ಟು ವರ್ಗೀಯ ವ್ಯಂಜನಗಳಿವೆ? (How much vargiya vyanajanagalu are there?)

ವರ್ಗೀಯ ವ್ಯಂಜನಗಳ ಸಂಖ್ಯೆ 10

ವರ್ಗೀಯ ವ್ಯಂಜನಗಳಲ್ಲಿ ಎಸ್ಟು ವಿಧಗಳಿವೆ?

ವರ್ಗೀಯ ವ್ಯಂಜನಗಳಲ್ಲಿ ಎಸ್ಟು 3 ವಿಧಗಳಿವೆ.1.ಅಲ್ಪ ಪ್ರಾಣ 2.ಮಹಾಪ್ರಾಣ 3.ಅನುನಾಸಿಕ

ಅಲ್ಪ ಪ್ರಾಣ ವ್ಯಂಜನ ಎಂದರೇನು?

ಕಡಿಮೆ ಸಮಯ ತೆಗೆದುಕೊಂಡು ಉಚ್ಚರಿಸುವಂತಹ ವ್ಯಂಜನಗಳಿಗೆ ಅಲ್ಪಪ್ರಾಣ ಎನ್ನುವರು.

ಅವರ್ಗೀಯ ವ್ಯಂಜನಗಳು ಎಸ್ಟು?

ಅವರ್ಗೀಯ ವ್ಯಂಜನಗಳು 9

ಯೋಗವಾಹಗಳು ಎಂದರೇನು?

ಯಾವುದಾದರೂ ಸ್ವರಗಳ ಜೊತೆ ಸೇರಿ ಅಥವಾ ಸಂಬಂಧ ಹೊಂದಿದ ಅಕ್ಷರಗಳಿಗೆ ಯೋಗವಾಹಗಳೆಂದು ಕರೆಯುವುದುಂಟು.

ಮಹಾಪ್ರಾಣ ವ್ಯಂಜನ ಎಂದರೇನು?

ಹೆಚ್ಚು ಸಮಯ ತೆಗೆದುಕೊಂಡು ಉಚ್ಚರಿಸುವಂತಹ ವ್ಯಂಜನಗಳಿಗೆ ಮಹಾಪ್ರಾಣ ಎನ್ನುವರು.

ಅನುನಾಸಿಕ ವ್ಯಂಜನ ಎಂದರೇನು?

ಮೂಗಿನ ಸಹಾಯ ತೆಗೆದುಕೊಂಡ ಉಚ್ಚರಿಸುವಂತಹ ವ್ಯಂಜನಗಳಿಗೆ ಅನುನಾಸಿಕ ಎ೦ದು ಕರೆಯುತ್ತಾರೆ.

ವರ್ಗಿಯ ವ್ಯಂಜನ ಎಂದರೇನು?

‘ಕ್’ ಯಿಂದ ‘ಮ್’ ವರೆಗಿನ 25 ಅಕ್ಷರಗಳನ್ನು ವರ್ಗಿಯ ವ್ಯಂಜನವೆಂದು ಕರೆಯುತ್ತಾರೆ.

ವ್ಯಂಜನಗಳೆಂದರೇನು?( Meaning of Vyanjanagalu)

ಸ್ವತಂತ್ರವಾಗಿ ಉಚ್ಚರಿಸಲು ಸಾಧ್ಯವಾಗದ ಅಥವಾ ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವಂತಹ ಅಕ್ಷರಗಳಿಗೆ ವ್ಯಂಜನಗಳೆಂದು ಕರೆಯುತ್ತಾರೆ.

Leave a Comment